ಫಿಜಿಯೋಥೆರಪಿ ಉಚಿತ ತಪಾಸಣಾ ಶಿಬಿರ
Physiotherapy Free Check-up Camp
ಕೊಪ್ಪಳ 26 : ಇತ್ತೀಚಿಗೆ ನಗರದ ಸಮೂಹ ಸಾಮಾರ್ಥ್ಯ ಕಛೇರಿಯಲ್ಲಿ ಸಾಮಾರ್ಥ್ಯ ವತಿಯಿಂದ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಒಂದು ದಿನದ ವಿಶೇಷ ಉಚಿತ ಫಿಜಿಯೋಥೆರಪಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಮತಿ ಮಧು ಪಾವಲಿ ಶೆಟ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ತೀವ್ರತರ ವಿಕಲಚೇತನ ಮಕ್ಕಳಿಗೆ ಫಿಜಿಯೋಥೆರಪಿ ಆಪ್ತ ಸಮಾಲೋಚನೆ ಮತ್ತು ಸಾಧನ ಸಲಕರಣೆಗಳು ಬಹಳ ಮುಖ್ಯ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸುಮಾರು 50 ತೀವ್ರತರ ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಿಸಲಾಯಿತು. ನಂತರ ಅನುಭವಿ ಫಿಜಿಯೋಥೆರಪಿಸ್ಟ್‌ರಾದ ಡಾಽಽ ಚೈತ್ರಾ ರವರು ಬೆನ್ನು ನೋವು, ಸೊಂಟ ನೋವು, ಮೊಣಕಾಲು ನೋವು, ಬೆನ್ನುಹುರಿ ಪಾರ್ಶ್ವವಾಯುಕ್ಕೆ ಒಳಗಾದವರನ್ನು ತಪಾಸಣೆ ಮಾಡಿ ಉಚಿತ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಡಿಎನ್‌ಎ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಸವಿತಾ ಬಸವರಾಜ್, ಇನ್ನರ್ ವಿಲ್ ಕ್ಲಬ್ ನ ಸದಸ್ಯರುಗಳಾದ ಶ್ರೀಮತಿ ಅನುಷಾ ಹಿರೇಮಠ್, ಶ್ರೀಮತಿ ತ್ರಿವೇಣಿ ವಡ್ರಟ್ಟಿ, ಶ್ರೀಮತಿ ಲಲಿತಾ ಅರಿಕೇರಿ, ಶ್ರೀಮತಿ ಸುಧಾ ಶೆಟ್ಟರ್, ಶ್ರೀಮತಿ ಹೇಮಾ ಬಳ್ಳಾರಿ, ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕೋಮಲ ಕುದುರೆಮೋತಿ, ವಿಶೇಷ ಶಿಕ್ಷಕರಾದ ನೇತ್ರಾ, ರೇಣುಕಮ್ಮ ಕುಂಬಾರ, ಸಾಮರ್ಥ್ಯ ಸಂಸ್ಥೆಯ ವ್ಯವಸ್ಥಾಪಕರಾದ ಎಚ್‌ಎನ್ ಬಸಪ್ಪ, ಹಾಗೂ ರಮೇಶ ಈಳಿಗೇರ ಸೇರಿದಂತೆ 40ಕ್ಕೂ ಹೆಚ್ಚು ವಿಕಲಚೇತನರ ಮಕ್ಕಳ ಪಾಲಕರು ಪಾಳಗೊಂಡಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 