ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ವೃದ್ದಿ:ಬಾಬುಸಾಹುವುಕಾರ

ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ವೃದ್ದಿ:ಬಾಬುಸಾಹುವುಕಾರ Physical and Mental Development Through Sports: Babusahu Vukara

ಲೋಕದರ್ಶನ ವರದಿ   

ಇಂಡಿ  19: ತಾಲ್ಲೂಕಿನ ತಡವಲಗಾ ಗ್ರಾಮದ (ಗುಂಡುತಾಂಡಾ)ದಲ್ಲಿ ತಡವಲಗಾ ವಲಯ ಮಟ್ಟದ ಕ್ರೀಡಾಕೂಟವನ್ನುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಡವಲಗಾ ಐಖಿ ಯಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು  ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಬಾಬುಸಾಹುಕಾರ ಅವರು  ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಪುಸ್ತಕದ ವಿದ್ಯೆಯಷ್ಟೇ ಅಲ್ಲದೆ, ಪಠ್ಯೇತರ ಚಟುವಟಿಕೆಯಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ  ಅಧ್ಯಕ್ಷರಾದ ಅಪ್ಪುಸಾಹುಕಾರ ಮೇತ್ರಿ ಅವರು ಕ್ರೀಡಾ ಧ್ವಜ ದ್ವಜಾರೋಹಣ ಮಾಡಿದರು ಕ್ರೀಡಾ ಜ್ಯೋತಿಯನ್ನು  ಹಣಮಂತ ಮಾಳಗೊಂಡ ಹಿರಿಯ ದೈಹಿಕ ಶಿಕ್ಷಕರು ಬರಮಾಡಿಕೊಂಡರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ಉಪಾಧ್ಯಕ್ಷರಾದ ಟಿ ಕೆ ಜಂಬಗಿ ಪ್ರಾಸ್ತಾವಿಕ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ಆ ಶಾಲಾ ಮುಖ್ಯಗುರುಗಳಾದ ಆರ್ ಎಚ್ ರೋಡಗಿ  ಶ್ರೀಮತಿ ಆರ್ ಎ  ಪಾಯಗೊಂಡಿ,  ಎಸ್ ಸಿ  ಗಿಡಗಂಟಿ, ಬಿ ಎಮ್ ವಠಾರ, ಎಂ ಬಿ ಕೆಂಭಾವಿ, ಅಶೋಕ ಕಟ್ಟಿ,ಧರೆಪ್ಪ ಗಬ್ಬೂರ, ಏಕನಾಥ್ ಕಟ್ಟಿ ರಾಜು ರಾಠೋಡ,ರವಿ ರಾಠೋಡ, ಅರವಿಂದ ಕಲಕೇರಿ, ಸಂಗನಗೌಡ ಹಚ್ಚಡದ, ಪ್ರಕಾಶ ಐರೋಡಗಿ, ಸಿ ಆರ್ ಪಿ ಪ್ರಕಾಶ ರಾಠೋಡ, ಬಸು ಸಾಹುಕಾರ ಮೇತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಅಶೋಕ ಚವ್ಹಾಣ ನಿರೂಪಿಸಿದರು.ಎಸ್ ಬಿ ಶಿರಗಾನವರ ವಂದಿಸಿದರು.