ಫೋಟೋ, ವಿಡಿಯೋಗ್ರಾಫರ್ ಸಂಘದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
Photo and Videographer Association Cricket Tournament kicks off
ಫೋಟೋ, ವಿಡಿಯೋಗ್ರಾಫರ್ ಸಂಘದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಹುಬ್ಬಳ್ಳಿ 12: ನಗರದ ನೆಹರು ಮೈದಾನದಲ್ಲಿ ಹುಬ್ಬಳ್ಳಿ ಫೋಟೋ ಹಾಗು ವಿಡಿಯೋಗ್ರಾಫರ್ ಸಂಘ ಹಾಗೂ ವಿ ಎ ಕೆ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹಾಗೂ ವಿ ಎ ಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ್ ಅಶೋಕ ಕಾಟ್ವೆ ಇವರು ಕ್ರಿಕೆಟ್ ಆಡುವ ಮುಖಾಂತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು. ಸಂಘದ ಸದಸ್ಯರು ನಿತ್ಯ ತಮ್ಮ ವೃತ್ತಿಯಲ್ಲಿ ತೊಡಗಿರುತ್ತಾರೆ. ಸಂಘವು ಇಂತಹ ಕ್ರೀಡೆ ಆಯೋಜಿಸುವ ಮೂಲಕ ಸಂಘದ ಸದಸ್ಯರಿಗೆ ಆರೋಗ್ಯಕರ ವಾತಾವರಣವನ್ನು ನಿರ್ಮಿಸಿದಂತಾಗುತ್ತದೆ. ಕ್ರೀಡೆಯಂದ ಮೇಲೆ ಸೋಲು ಗೆಲುವು ಸಹಜ ಸಂಘದ ಎಲ್ಲ ತಂಡಗಳು ಕ್ರೀಡಾಮನೊಭಾವದಿಂದ ಆಡಬೇಕು ಎಂದರು. ವಿ ಎ ಕೆ ಫೌಂಡೇಶನ್ ಅಧ್ಯಕ್ಷ ವೆಂಕಟೇಶ್ ಕಾಟ್ವೇ ಮಾತನಾಡಿ ಛಾಯಾಗ್ರಾಹಕದಲ್ಲಿಯೂ ಕ್ರಿಕೆಟ್ ಪ್ರತಿಭೆ ಕಂಡು ಬಹಳ ಸಂತೋಷವಾಯಿತು. ಇಂಥ ಪಂದಾವಳಿಯನ್ನು ಜಿಲ್ಲಾ ಮಟ್ಟದಲ್ಲಿಯೂ ಆಡಿಸಬೇಕು. ಅದಕ್ಕೂ ಕೂಡ ನಮ್ಮ ಸಂಸ್ಥೆಯು ಸಹಾಯವನ್ನು ನೀಡಲು ಯಾವಾಗಲೂ ಸಿದ್ಧ ಎಂದು ಹೇಳಿದರು. ಸಂಘದ ಅಧ್ಯಕ್ಷ ಕಿರಣ ಬಾಕಳೆ ಉಪಾಧ್ಯಕ್ಷ ದಿನೇಶ್ ದಾಬಡೆ ಕಾರ್ಯದರ್ಶಿ ರವೀಂದ್ರ ಕಾಟಿಗರ, ಅನಿಲ್ ತುರುಮರಿ, ಪದಾಧಿಕಾರಿಗಳಾದ ವಿನಾಯಕ ಸಫಾರಿ, ರಾಕೇಶ್ ಪವಾರ್, ಅಲ್ಲಾಭಕ್ಷ ಅಧೋನಿ, ಆನಂದ ರಾಜೋಳ್ಳಿ, ಆನಂದ್ ಮೆಹರವಾದೆ, ಕೃಷ್ಣ ಪೂಜಾರಿ, ವಿಜಯ ಬಾಕಳೆ, ರಶೀದ್ ವೀರೂ, ಬಸವಾ ಪವನ ಕಠಾರೆ, ವಿಶಾಲ್ ಪೂಜಾರಿ, ಕಿಶನ್ ಶಾಲ್ಗರ್ ಇತರರು ಇದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 