ತತ್ವ, ಸಂದೇಶ, ವಿಚಾರಗಳು ನಾಡಿನ ಪ್ರತಿಯೊಬ್ಬರ ಬದುಕಿಗೆ ದಾರೀದೀಪ : ಎ.ಸಿ.ದಾನಪ್ಪ
Philosophy, message, ideas are the beacon of light for everyone's life in the country: A.C. Danappa
ಲೋಕದರ್ಶನ ವರದಿ
ಕಂಪ್ಲಿ 21: ಬಸವಣ್ಣ ಸಾಂಸ್ಕೃತಿಕ ನಾಯಕ. ಸಮಾಜ ಸುಧಾರಕ. ಕ್ರಾಂತಿಕಾರಿ ಹಾಗೂ ಮಹಾಮಾನವತಾವಾದಿ ಮತ್ತು ಶ್ರೇಷ್ಠ ವಚನಕಾರರಾಗಿದ್ದು, ಅವರ ತತ್ವ, ಸಂದೇಶ, ವಿಚಾರಗಳು ನಾಡಿನ ಪ್ರತಿಯೊಬ್ಬರ ಬದುಕಿಗೆ ದಾರೀದೀಪವಾಗಿವೆ ಎಂದು ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ 10ನೇ ವಾರ್ಡಿನ ಬಸವಶ್ರೀ ನಿಲಯದಲ್ಲಿ ಸೋಮವಾರ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ವಚನಗಳು ಇಂದಿಗೂ ಸರ್ವಕಾಲಿಕ. ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಅನುಭವ ಮಂಟಪದಲ್ಲಿ ಅಲ್ಲಮಪ್ರಭುದೇವರೊಂದಿಗೆ ಅನೇಕ ಸಂವಾದಗಳ ಮೂಲಕ ಮಾನವೀಯ ಮೌಲ್ಯಗಳ ಕುರಿತು ಚಿಂತನ ಮಾಡಿದ ಶ್ರೇಷ್ಠ ಶರಣ ಬಸವಣ್ಣನಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನದ ಕಡೆಗೆ ಸಾಗಬೇಕು ಎಂದರು. ಇಲ್ಲಿ ಬಸವಣ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರೆ್ಣ ಅರ್ಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತೆ ಅಚಿಡಿ ಹುಲಿಗೆಮ್ಮ, ರುತಿಕ್ ಹೇಮಂತ್, ದಿಶಾ ಮೋಹನ್ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 