ಮನಿಲಾ, ಫೆ 10 : ಫಿಲಿಪೈನ್ಸ್ ನಲ್ಲಿ ಕೊರೋನಾ ವೈರಾಣು ಸೋಂಕಿಗೆ ಗುರಿಯಾಗಿದ್ದ ವ್ಯಕ್ತಿಯೋರ್ವ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇದು ದೇಶದಲ್ಲಿ ಪತ್ತೆಯಾಗಿದ್ದ ಮೊದಲ ಸೋಂಕು ಪ್ರಕರಣವಾಗಿತ್ತು. 38 ವರ್ಷದ ಚೀನಿ ಮಹಿಳೆ ವುಹಾನ್ ನಗರದಿಂದ ಜ. 21ಕ್ಕೆ ಹಾಂಗ್ ಕಾಂಗ್ ಮೂಲಕ ಫಿಲಿಪೈನ್ಸ್ ಗೆ ಆಗಮಿಸಿದ್ದರು.
ನಂತರ ಆಕೆ ಹಾಗೂ 44 ವರ್ಷದ ಪುರುಷರನ್ನು ತಪಾಸಣೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಇವರಲ್ಲಿ ಪುರುಷ ರೋಗಿ ಫೆ. 1ರಂದು ಮೃತಪಟ್ಟಿದ್ದಾರೆ.
ಸದ್ಯ ಫಿಲಿಪೈನ್ಸ್ ನಲ್ಲಿ 300ಕ್ಕೂಹೆಚ್ಚು ಜನರು ಸೋಂಕಿನ ತಪಾಸಣೆಗೊಳಪಟ್ಟಿದ್ದಾರೆ.