ಫಡಕೆಯ ತಾಯಿಯ ಮರಣ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ : ಡಾ. ಬಾಬು ಕೃಷ್ಣಮೂರ್ತಿ

ಫಡಕೆಯ ತಾಯಿಯ ಮರಣ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ : ಡಾ. ಬಾಬು ಕೃಷ್ಣಮೂರ್ತಿ Phadake's mother's death was an inspiration for the freedom struggle: Dr. Babu Krishnamurthy


ವಿಜಯಪುರ 06: ತಾಯಿಯ ಮರಣವೇ ಸ್ವಾತಂತ್ರ್ಯ ಹೋರಾಟಕ್ಕೆ ಉತ್ತೇಜನ ನೀಡಿತು ಎಂದು ಡಾ.ಬಾಬು ಕೃಷ್ಣಮೂರ್ತಿ ಹೇಳಿದರು. ಮಂಗಳವಾರ ನವೆಂಬರ್ ನಾಲ್ಕರಂದು ಆದ್ಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತ ಫಡಕೆ ಜನ್ಮದಿನ  ನಿಮತ್ತವಾಗಿ  ಅಖಿಲ ಭಾರತೀಯ ಸಾಹಿತ್ಯ ಪರಿಷದ್(ನೋ) ವಿಜಯಪುರ ಜಿಲ್ಲಾ ಸಮತಿ ಆಯೋಜನೆಯ ದಿ. 4ರ  ಮಂಗಳವಾರ ಆನ್ ಲೈನ್ ಉಪನ್ಯಾಸ ಮಾಲಿಕೆಯಲ್ಲಿ  ಬ್ರಿಟಿಷ್ ಸರ್ಕಾರದಲ್ಲಿ ನೌಕರನಾಗಿದ್ದ ವಾಸುದೇವ ಬಲವಂತ ಫಕಡೆಗೆ 1857 ಮೊದಲ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವದಿಂದ ಸ್ವಾತಂತ್ರ್ಯ ಹೋರಾಟದ ಕಿಡಿ ಬಾಲ್ಯದಿಂದಲೂ ಸೂಪ್ತವಾಗಿ ಇತ್ತು, ಯಾವಾಗ ತಾಯಿ ಮರಣವಾದರೂ ರಜೆ ಕೊಡದಿದ್ದಾಗ ಅದು ಸ್ಪೋಟಗೊಂಡಿತು.

    ಮೊದಮೊದಲು ಪುಣೆ ನಗರದದಿಂದ ಹೋರಾಟ ಪ್ರಾರಂಭಿಸಿ ಫಡಕೆ ತದನಂತರ ರಾಮೋಶಿ ಎಂಬ ಬುಡಕಟ್ಟು ಜನರನ ಸೈನ್ಯಪಡೆ ಸಿದ್ಧಪಡಿಸಿ ಬ್ರಿಟಿಷ್ ವಿರುದ್ಧ ಸ್ವಾತಂತ್ರ್ಯ ಕಹಳೆ ಮೊಳಗಿಸಿದ. ಸಂಗೊಳ್ಳಿ ರಾಯಣ್ಣನಂತೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಫಡಕೆಗೆ  ಅನಕ್ಕಾಗಿ ಬ್ರಿಟಿಷ್ ರು ಅವನನ್ನು ಹಿಡಿದು ಆಫ್ರಿಕಾ ಮರಳುಗಾಡಿನ  ಎಡನ್ ಜೈಲಿಗೆ ಹಾಕುತ್ತಾರೆ. ಆ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಬಾಲಗಂಗಾಧರ ತಿಲಕ ಹಾಗೂ ವೀರ ಸಾವರ್ಕರಿಗೆ ಪ್ರೇರಣೆಯಾಗಿದ್ದ ವಾಸುದೇವ ಬಲವಂತ ಫಡಕೆ ಮೂವತ್ತೇಳನೇ ವಯಸ್ಸಿನಲ್ಲಿಯೇ ನಿಧನ ಹೊಂದುತ್ತಾರೆ ಎಂದು ವಾಸುದೇವ ಬಲವಂತ ಫಡಕೆ ಜೀವನ ಚರಿತ್ರೆಯನ್ನು ಕನ್ನಡಿಗರಿಗೆ ಅದಮ್ಯ ಪುಸ್ತಕ ಮೂಲಕ ಬಾಬು ಕೃಷ್ಣಮೂರ್ತಿಯವರು ತಿಳಿಸಿಕೊಟ್ಟಿದ್ದಾರೆ. ನಿರೂಪಣೆ ವಿವೇಕ ಕುಲಕರ್ಣಿ, ಪರಿಚಯ ಶ್ರೀರಂಗ ಕುಲಕರ್ಣಿ, ಶಾಂತಿ ಮಂತ್ರ ಅನಿಲ ಬಳ್ಳುಂಡಗಿ ನಿರ್ವಹಿಸಿದರು. ನಾರಾಯಣ ಬಾಬಾನಗರ, ಶ್ರೀರಂಗ ಪುರಾಣಿಕ, ಸುಕಾಂತ ಕುಲಕರ್ಣಿ, ಹರ್ಷವರ್ಧನ್ ಸರಾಫ್, ಡಾ. ಗಜಾನನ ಮಹಿಶಾಳೆ, ನಾರಾಯಣ ಜಾಹಗೀದಾರ್, ಗೋಪಾಲ ದೇಶಪಾಂಡೆ, ಗೀರೀಶ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.