ಪಿಎಚ್‌ಡಿ ಪದವಿ ಆಯ್ಕೆ :ಡಾ.ಎನ್‌.ಎಂ.ಅಂಬಲಿ

PhD degree selection: Dr. N.M. Ambali

ಪಿಎಚ್‌ಡಿ ಪದವಿ ಆಯ್ಕೆ :ಡಾ.ಎನ್‌.ಎಂ.ಅಂಬಲಿ 

ಮುಂಡರಗಿ 15  : ತಾಲೂಕಿನ ಹಮ್ಮಿಗಿ ಗ್ರಾಮದ ಬಸಪ್ಪ ಭಜಂತ್ರಿ. ಇವರು ಇತ್ತೀಚಿಗೆ ನಡೆದ 33ನೇ ನುಡಿಹಬ್ಬದ ಘಟಿಕೋತ್ಸವದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ. ಹಸ್ತಪ್ರತಿಶಾಸ್ತ್ರ ವಿಭಾಗದ ಬಾಹ್ಯ ಮಾರ್ಗದರ್ಶಕರು ಹಾಗೂ ಕೆಎಸ್‌ಎಸ್ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎನ್‌.ಎಂ.ಅಂಬಲಿಯವರ ಮಾರ್ಗದರ್ಶನದಲ್ಲಿ ಉತ್ತರ ಕರ್ನಾಟಕದ ಕೊರಮ ಸಮುದಾಯ ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯ ಕುರಿತು ಅಧ್ಯಯನ ಮಾಡಿ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.  

ಪ್ರಸ್ತುತ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಚನ್ನಗುಂಡಿ ಗ್ರಾಮದಲ್ಲಿ ಶಿಕ್ಷಕರಾಗಿ(ಜಿ.ಪಿ.ಟಿ)ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್‌ಡಿ ಪದವಿ ಪಡೆದ ಬಸಪ್ಪ ಭಜಂತ್ರಿಯವರಿಗೆ ಶಿಕ್ಷಕ ವೃಂದದವರು, ಪ್ರಾಧ್ಯಾಪಕರು, ಗೆಳೆಯ ಬಳಗ, ಕೊರಮ ಸಮುದಾಯದ ಗುರು-ಹಿರಿಯರು, ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.