ಬಿಎಲ್‌ಓ ನೇಮಕ ಆದೇಶವನ್ನು ಹಿಂಪಡೆಯಲು ಆಗ್ರಹಿಸಿ ಮನವಿ
Petition demanding withdrawal of BLO appointment order
ಬ್ಯಾಡಗಿ 24: ಅಂಗನವಾಡಿ ಕಾರ್ಯಕರ್ತೆಯರು ಸುಮಾರು ಮಹಿಳೆಯರು ಸಹಾಯಕರು ಹುದ್ದೆಯಿಂದ ಭಡ್ತಿ ಪಡೆದು ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಸಂಪೂರ್ಣ ಮಾಹಿತಿ ಇರದೆ ಇರುವುದು ಇರುತ್ತದೆ ಕಾರಣ ತಾಲೂಕಿನ ಅಂಗನವಾಡಿ ನೌಕರರನ್ನು ಬಿ ಎಲ್ ಓ ಸೇವೆಯಿಂದ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ಇಂದು ತಹಶೀಲ್ದಾರ್ ಕಚೇರಿ ಎದರು ಪ್ರತಿಭಟನೆ ಮಾಡಿ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೆದಾರರಾದ ನಾಗರತ್ನ ಕಾಳೆಯವರಿಗೆ ಮನವಿ ಪತ್ರವನ್ನು ನೀಡಲಾಯಿತು.
ಈ ವೇಳೆ ಗೌರಮ್ಮ ನಾಯ್ಕರವರು ಮಾತನಾಡಿ ಕಳೆದ 9.7.2025ರಂದು ತಮ್ಮ ಕಾರ್ಯಾಲಯದ ಎದುರುಗಡೆ ಒಂದು ದಿನ ಸಂಪೂರ್ಣವಾಗಿ ಕೆಲವೊಂದು ಬೇಡಿಕೆಗಳು ಈಡೇರಿಕೆ ಸಲುವಾಗಿ ಪ್ರತಿಭಟನೆ ಮಾಡಿದ್ದು ಸದರಿ ಬೇಡಿಕೆಗಳಲ್ಲಿ ಪ್ರಮುಖವಾಗಿ ಕಾರ್ಯಕರ್ತರಿಗೆ ಬಿಎಲ್‌ಓ ತೆಗೆದುಕೊಳ್ಳಬಾರದೆಂದು ಬೇಡಿಕೆ ಇಟ್ಟಿದ್ದೆವು. ಆದರೂ ಸೇವೆಯನ್ನು ಮಾಡುವುದು ಕಡ್ಡಾಯ ಮಾಡಿದ್ದು ಇದು ನಮಗೆ ಹೊರೆಯಾಗುತ್ತಿದೆ ತಾಲೂಕಿನಲ್ಲಿ ಸುಮಾರು 28 ಸರ್ಕಾರಿ ಇಲಾಖೆಯ ಇದ್ದು ಶಿಕ್ಷಕರು ಗುಮಾಸ್ತರು ಗ್ರಾಮ ಸಹಾಯಕರು ಸಿ ಮತ್ತು ಡಿ ವರ್ಗದ ನೌಕರರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ ಅಂಥವರಿಗೆ ಬಿ ಎಲ್ ಓ ಕೆಲಸವನ್ನು ವಹಿಸಬೇಕು ಎಂದು ಆಗ್ರಹಿಸಿದರು.
ಶಕುಂತಲಾ ದಾನಣ್ಣನವರ ಮಾತನಾಡಿ ಈಗಾಗಲೇ ಬಿ ಎಲ್ ಓ ಕೆಲಸದಿಂದ ಅಂಗನವಾಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಆಗುತ್ತಿಲ್ಲ ಆದ್ದರಿಂದ ಕೂಡಲೇ ಸರಕಾರ ಎಚ್ಚೆತ್ತು ಅಂಗನವಾಡಿ ನೌಕರರಿಗೆ ಬಿ ಎಲ್ ಓ ಸೇವೆಯಿಂದ ಕೈಬಿಡುವಂತೆ ಆಗ್ರಹಿಸಿದರು ಇಲ್ಲವಾದರೆ ಮುಂದಿನ ದಿನಗಳಲ್ಲಿ ತಮ್ಮ ಕಾರ್ಯದ ಎದುರುಗಡೆ ಅನಿದಿಷ್ಟ ಮುಷ್ಕರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸುರೇಶ ಅಸಾದಿ. ಹೇಮಲತಾ ಎಲಿ. ಹೇಮಾ ಅಸಾದಿ. ವಿಜಯಲಕ್ಷ್ಮಿ ಗೊಡಚಿ. ಗಂಗಾ. ಶಶಿಕಲಾ ಪುರಾಣಿಕ ಮಠ ಗೀತಾ ವಾಲ್ಮೀಕಿ. ಸರೋಜಾ. ರತ್ನಾ ಕಚವಿ ಹಾಗೂ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 