ಹಿರೇಕೊಡಿ ಗ್ರಾಮದ ಟಿಆಯ್ ಇಂಡಸ್ಟ್ರೀಜ್ ಬಂದ್ ಮಾಡದಿರಲು ಆಗ್ರಹಿಸಿ ಮನವಿ
Petition demanding not to shut down TI Industries of Hirekodi village
ಬೆಳಗಾವಿ 09: ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದಲ್ಲಿರುವ ಟಿಆಯ್ ಇಂಡಸ್ಟ್ರೀಜ್‌ನ್ನು ಬಂದ್ ಮಾಡಬಾರದೆಂದು ರಾಯಬಾಗ ತಾಲೂಕಿನ ಭೆಂಡವಾಡ ಕರ್ನಾಟಕ ದಲಿತ ವಿವಿಧ ಒಕ್ಕೂಟಗಳ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಿಸಿ ಆಗ್ರಹಿಸಿದರು.
ಮನವಿಯಲ್ಲಿ ಹಿರೇಕೊಡಿ ಗ್ರಾಮದಲ್ಲಿರುವ ಟಿಆಯ್ ಇಂಡಸ್ಟ್ರೀಜ್ ಸುಮಾರು ವರ್ಷಗಳಿಂದ ಆರಂಭವಾಗಿದೆ. ಸಾಕಷ್ಟು ಜನರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಜನರಿಗಾಗಲಿ ಪ್ರಾಣಿ ಪಕ್ಷಿಗಳಿಗೆ ಯಾವುದೇ ತರಹದ ಹಾನಿಯಾಗಲಿ, ಕೆಟ್ಟ ಪರಿಣಾಮ ಆಗಿರುವುದಿಲ್ಲ. ಕಾರ್ಖಾನೆಯಿಂದ ಯಾವುದೇ ರೀತಿಯ ವಿಷಕಾರಿ ಅನಿಲ ಹಾಗೂ ತ್ಯಾಜ್ಯಗಳು ಮತ್ತು ಕರ್ಕಶ ಶಬ್ದ ಹೊರಹೊಮ್ಮುವುದಿಲ್ಲ. ಒಟ್ಟಾರೆ ಸಾರ್ವಜನಿಕರಿಗೆ ಯಾವುದೇ ಈ ಟಿಆಯ್ ಇಂಡಸ್ಟ್ರೀಜ್‌ನಿಂದ ತೊಂದರೆ ಇಲ್ಲ. ಅಲ್ಲದೆ ಕಾರ್ಖಾನೆಯ ಆವರಣದಲ್ಲಿ ಬಾವಿಯಿದ್ದು, ಕಾರ್ಮಿಕರು ಕಾರ್ಖಾನೆಯ ಸಿಬ್ಬಂದಿ ಪ್ರತಿನಿತ್ಯ ಈ ಬಾವಿಯ ನೀರನ್ನು ಕುಡಿಯುತ್ತಾರೆ. ಇಲ್ಲಿಯವರೆಗೆ ಯಾವುದೆ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಕಂಡುಬಂದಿಲ್ಲ. ಆದರೆ ಇಲ್ಲಿನ ಗ್ರಾಮದ ಕೆಲವರು ನಿಜ ಸ್ಥಿತಿಯನ್ನು ತಿಳಿಯದೆ ಕಾರ್ಖಾನೆಯಿಂದ ಕಲುಷಿತ ನೀರು, ಕೆಟ್ಟ ವಾಸನೆ ಬರುತ್ತದೆ. ಕರ್ಕಶ ಶಬ್ದ ಉಂಟಾಗುತ್ತದೆ ಎಂದೆಲ್ಲ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾರ್ಖಾನೆ ಬಂದ್ ಮಾಡುವಂತೆ ತಕರಾರು ಮಾಡಿರುತ್ತಾರೆ. ಅವರು ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರ. ಆದ್ದರಿಂದ ಖಾರ್ಖಾನೆಯನ್ನು ಬಂದ ಮಾಡಬಾರದು. ಭೆಂಡವಾಡ ದಲಿತ ಒಕ್ಕೂಟಗಳ ಸಂಘ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಕುಲಂಕಷವಾಗಿ ವಿಚಾರಿಸಿ, ಪರೀಶೀಲಿಸಿ ಖಾರ್ಖಾನೆ ಬಂದ ಮಾಡಬಾರದೆಂದು ಆಗ್ರಹಿಸಿ ಮನವಿ ನೀಡುತ್ತಿದ್ದೇವೆ ಕಾರ್ಖಾನೆಯಲ್ಲಿ ನೂರಾರು ಜನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 500 ಜನ ರೈತರು ಗುತ್ತಿಗೆ ಆಧಾರದ ಮೇಲೆ ಕಾರ್ಖಾನೆಯೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಒಂದು ವೇಳೆ ಕಾರ್ಖಾನೆ ಬಂದ್ ಮಾಡಿದರೆ ಇಷ್ಟಲ್ಲ ಕುಟುಂಬಗಳು ಬೀದಿ ಪಾಲಾಗುತ್ತವೆ. ಆದ್ದರಿಂದ ಜಿಲ್ಲಾಧಿಕಾರಿಗಳು ಟಿಆಯ್ ಇಂಡಸ್ಟ್ರೀಜ್ ಬಂದಾಗದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿ ಅರ್ಿಸುವಾಗ ದಲಿತ ವಿವಿಧ ಒಕ್ಕೂಟಗಳ ಸಂಘದ ಜಿಲ್ಲಾ ಸಂಚಾಲಕ ಅಶೋಕ ಜಗನ್ನಾಥ, ಪದಾಧಕಾರಿಗಳು ಸೇರಿದಂತೆ ಕಾರ್ಮಿಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 