ಪ್ರಜಾಸೌಧ ಸ್ಥಳ ರದ್ದುಗೊಳಿಸುವಂತೆ ಆಗ್ರಹಿಸಿ ಮನವಿ
Petition demanding cancellation of Praja Soudha venue
ತಾಳಿಕೋಟಿ 02: ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಪ್ರಜಾಸೌಧ(ತಾಲೂಕ ಆಡಳಿತದ ಕೇಂದ್ರ ಕಟ್ಟಡ) ನಿರ್ಮಾಣಕ್ಕೆ ಆಯ್ಕೆ ಮಾಡಿದ ಸ್ಥಳ ರದ್ದುಗೊಳಿಸಿ ಬೇರೆ ಸ್ಥಳ ಆಯ್ಕೆ ಮಾಡಲು ಆಗ್ರಹಿಸಿ ತಾಲೂಕ ಹೋರಾಟ ಸಮಿತಿಯ ಪದಾಧಿಕಾರಿಗಳು ಸೋಮವಾರ ತಹಸಿಲ್ದಾರ್ ಡಾ.ವಿನಯಾ ಹೂಗಾರ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಿದರು. ಸದರಿ ವಿಷಯದ ಕುರಿತು ಪ್ರತಿಭಟನಾಕಾರರು ಮುಂಜಾನೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ದಿಂದ ಶ್ರೀ ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕ ಹೋರಾಟ ಸಮಿತಿಯ ಆರ್ ಎಸ್ ಪಾಟೀಲ ಕೂಚಬಾಳ, ಕಾಶಿನಾಥ ಮುರಾಳ, ಜೈಭೀಮ ಮುತ್ತಗಿ,ವಿಜಯ ಸಿಂಗ್ ಹಜೇರಿ ಹಾಗೂ ರವೀಂದ್ರ ಕಟ್ಟಿಮನಿ ಮಾತನಾಡಿ ಸದರಿ ಕಟ್ಟಡಕ್ಕೆ ಆಯ್ಕೆ ಮಾಡಿದ ಸ್ಥಳವು ಪಟ್ಟಣದಿಂದ ಸುಮಾರು 4ರಿಂದ5 ಕಿ.ಮೀ. ದೂರದಲ್ಲಿರುವುದರಿಂದ ಸಾರ್ವಜನಿಕರಿಗೆ ಬರು ಹೋಗಲು ತುಂಬಾ ಕಷ್ಟವಾಗುತ್ತದೆ ಆದ್ದರಿಂದ ಪಟ್ಟಣಕ್ಕೆ ಹೊಂದಿಕೊಂಡಿರುವ ಎಲ್ಲರಿಗೂ ಅನುಕೂಲವಾಗುವಂತಹ ಪ್ರವಾಸಿ ಮಂದಿರ,
ಹಳೆಯ ಕೆಇಬಿ, ಹಳೆ ಪುರಸಭೆ ಹಾಗೂ ಹಳೆ ವಾಟರ್ ಟ್ಯಾಂಕ್ (ಜಾಕ್ವೆಲ್) ಸ್ಥಳ ಇಲ್ಲಿ ಮಾಡಲು ಅನುಕೂಲವಿದ್ದು ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು ಮೊದಲಿನ ದೂರದ ಸ್ಥಳ ರದ್ದು ಗೊಳಿಸಬೇಕು. ಸಮಿತಿಯ ಈ ಮನವಿಗೆ ನಾಲ್ಕೈದು ದಿನಗಳಲ್ಲಿ ಸ್ಪಂದಿಸದೆ ಹೋದರೆ ಇನ್ನಷ್ಟು ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ತಿಳಿಸಿದರು. ತಾಲೂಕ ಹೋರಾಟ ಸಮಿತಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಉಪಾಧ್ಯಕ್ಷ ಮುತ್ತಪ್ಪ ಚಮಲಾಪೂರ, ಎಂ.ಎಸ್.ಸರಶೆಟ್ಟಿ,ವಾಸು ಹೆಬಸೂರ, ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ,ಎಂ.ಎಚ್. ಕೆಂಭಾವಿ,ಎಂ.ಕೆ.ಚೋರಗಸ್ತಿ, ಮುದುಕಪ್ಪ ಬಡಿಗೇರ, ಸಿದ್ದಪ್ಪ ಕಟ್ಟಿಮನಿ, ತಮ್ಮಣ್ಣ ದೇಶಪಾಂಡೆ, ಭರತಸಿಂಗ್ ವಿಜಾಪುರ, ಅಮೀತಸಿಂಗ್ ಮನಗೂಳಿ, ಡಾ.ಎ.ಎ.ನಾಲಬಂದ,ಡಾ.ಆರ್.ಕೆ.ಅಗರವಾಲ, ಗಂಗಾಧರ ಕಸ್ತೂರಿ,ಮಂಜುನಾಥ ಶೆಟ್ಟಿ,ಡಾ.ಆನಂದ ಭಟ್, ಶ್ರೀಪಾಲ ಸಂಗಮಿ. ಪ್ರಹ್ಲಾದ ಹಜೇರಿ,ಗುರುರಾಜ ಮಾನೆ, ತಮ್ಮಣ್ಣ ದೇಶಪಾಂಡೆ, ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ, ಸಿರಸಕುಮಾರ ಹಜೇರಿ, ರತನಸಿಂಗ್ ಕೊಕಟನೂರ, ಶರಣು ಗೊಟಖಂಡಕಿ, ಮುತ್ತು ಕಶೆಟ್ಟಿ, ಜುಮ್ಮಣ್ಣ ನಾಲತವಾಡ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 