ವ್ಯಕ್ತಿತ್ವ ನಿರ್ಮಾಣವೇ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಮುಖ್ಯ ಗುರಿ - ಬಸಾಪುರ
Personality development is the main goal of the National Service Scheme camp - Basapura
ರಾಣೇಬೆನ್ನೂರು 27 : ಮಾನಸಿಕ ಶಾಂತಿ,ನೆಮ್ಮದಿ, ಜೊತೆಗೆ ಬೌದ್ಧಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಾಸತೆ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ರಾ. ತಾ. ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೊಟ್ರೇಶ ಬಸಾಪುರ ಹೇಳಿದರು. ಅವರು ಬುಧವಾರ ರಾತ್ರಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹು ಸಂಸ್ಕೃತಿ ನಮ್ಮ ದೇಶದ ಪರಂಪರೆ. ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಬದುಕಿ ಬಾಳುವ ಇಂದಿನ ಆಧುನಿಕ ಮತ್ತು ವೈಜ್ಞಾನಿಕ ಚಿಂತನೆಯುಳ್ಳ ವಿದ್ಯಾರ್ಥಿ ಸಮುದಾಯವು ತಮ್ಮ ಭವಿಷ್ಯದ ಭದ್ರಬುನಾದಿಗೆ ಗ್ರಾಮೀಣ ಸಂಸ್ಕೃತಿಯ ನೈಜತೆ ಅರಿಯಲು ಇಂತಹ ಶಿಬಿರಗಳು ಮಾರ್ಗದರ್ಶಿಯಾಗಿವೆ ಎಂದರು. ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಂದಿನ ಅಗತ್ಯವಿದ್ದು, ಅದರ ಜೊತೆಗೆ ನಮ್ಮ ಪೂರ್ವಜರು ಕಟ್ಟಿಕೊಟ್ಟ ನೈತಿಕ ಬದುಕಿನ ಆಯಾಮಗಳನ್ನು ಸಹ ಅಳವಡಿಸಿಕೊಂಡು ಸಾಗಿದಾಗ ಮಾತ್ರ ಭಾರತದ ಸಂಸ್ಕೃತಿ ಪರಂಪರೆ ಉಳಿದು ಬೆಳೆಯಲು ಸಾಧ್ಯವಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಎಸ್. ಜಿ. ಚಂದ್ರಶೇಖರ್ ಅವರು ಜ್ಯೋತಿ ಬೆಳಗಿಸಿ, ವಿಶೇಷ ಶಿಬಿರ ಉದ್ಘಾಟಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ರತ್ನಮ್ಮ ಗಂಗನಗೌಡ್ರು, ಎಸ್. ಕೆ.ಜೋಶಿ, ಸುರೇಶ ಷಣ್ಮುಖಗೌಡ ಗಂಗನಗೌಡ್ರ, ಸಿದ್ದಪ್ಪ ಬೆಲ್ಲದ, ಪ್ರಭು ಲಿಂಗನಗೌಡ ಶಿಕ್ಷಕ ಪ್ರಕಾಶ್ ಹೊಸಳ್ಳಿ,ಸೇರಿದಂತೆ ಮತ್ತಿತರ ಗಣ್ಯರು ಗ್ರಾಮಸ್ಥರು ಶಿಬಿರಾರ್ಥಿಗಳು, ಯೋಜನೆಯ ಕಾರ್ಯಕರ್ತರು, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು ಬುಧವಾರ ದಿಂದ ಆರಂಭವಾಗಿರುವ ವಾರ್ಷಿಕ ವಿಶೇಷ ಶಿಬಿರವು ಏಳು ದಿವಸಗಳ ಕಾಲ ಜರುಗಲಿದೆ. ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮಸ್ಥರ ಗಮನ ಸೆಳೆಯಿತು. ಶಿಬಿರಾರ್ತಿನಿ ಸೌಭಾಗ್ಯ ಸಂಗಡಿಗರು ಪ್ರಾರ್ಥಿಸಿದರು. ಮಹೇಶ್ ದೇವಗಿರಿಮಠ ಸ್ವಾಗತಿಸಿದರು. ಯೋಜನಾಧಿಕಾರಿ ಅರುಣಕುಮಾರ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ನಿರೂಪಿಸಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 