ಪರಿಶ್ರಮವೊಂದೇ ಪ್ರತಿಭೆಗೆ ದಾರಿ : ಜಿ.ಮಲ್ಲಿಕಾರ್ಜುನ ಗೌಡ

ಪರಿಶ್ರಮವೊಂದೇ ಪ್ರತಿಭೆಗೆ ದಾರಿ : ಜಿ.ಮಲ್ಲಿಕಾರ್ಜುನ ಗೌಡ Perseverance is the only way to talent : G. Mallikarjuna Gowda

ಲೋಕದರ್ಶನ ವರದಿ 

ಹೊಸಪೇಟೆ 24: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಕೇಂದ್ರ ಶಾಖೆ ಹಾಗೂ ವಿಜಯನಗರ-ಕೊಪ್ಪಳ ಜಿಲ್ಲಾ ಶಾಖೆಗಳ ಸಂಯುಕ್ತಾಶ್ರಯದಲ್ಲಿ  ಪ್ರತಿಭಾನ್ವಿತ ಸರ್ಕಾರಿ ನೌಕರರ ಮಕ್ಕಳಿಗೆ “ಪ್ರತಿಭಾ ಪುರಸ್ಕಾರ-2026” ಕಾರ್ಯಕ್ರಮವನ್ನು ಜುಲೈ 26ರ ಭಾನುವಾರ ಬೆಳಿಗ್ಗೆ 11:00ಕ್ಕೆ ಅಶೋಕ ವೃತ್ತದ ಹತ್ತಿರವಿರುವ "ಸಾಹಿತ್ಯ ಭವನ " ಕೊಪ್ಪಳದಲ್ಲಿ ಆಯೋಜಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧ್ಯಕ್ಷರಾದಾ ಮಲ್ಲಿಕಾರ್ಜುನ ಗೌಡ ಪತ್ರಿಕಾ ಪ್ರಕಟೆನೆಯಲ್ಲಿ ತಿಳಿಸಿದ್ದಾರೆ.  

ಪರೀಕ್ಷೆಗಳಲ್ಲಿ ಶೇ90ಅಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಸಂಘದ ಆನ್ ಲೈನ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿಜಯನಗರ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಬೆಳಿಗ್ಗೆ 9:00ಕ್ಕೆ ಸ್ಥಳಕ್ಕೆ ಆಗಮಿಸಿ ವಿಜಯನಗರ ಜಿಲ್ಲೆಯ ವಿಶೇಷ ಕೌಂಟರಿನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಲು ಮನವಿ ಮಾಡಿದ್ದಾರೆ.  ದಿವ್ಯ ಸಾನಿಧ್ಯ ಹಾಗೂ ಪ್ರೇರಣಾನುಡಿಯನ್ನು ಪರಮ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಾಹಾಸ್ವಾಮಿಗಳು, ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠ ಕೊಪ್ಪಳ. ಉದ್ಘಾಟನೆಯನ್ನು ಕೆ.ರಾಘವೇಂದ್ರ ಹಿಟ್ನಾಳ ವಿಧಾನಸಭಾ ಸದಸ್ಯರು ಕೊಪ್ಪಳ. 

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಿ.ಎಸ್‌. ಷಡಕ್ಷರಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು. ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ರಾಜಶೇಖರ ಹಿಟ್ನಾಳ,ಸಂಸದರು, ಕೊಪ್ಪಳ ಲೋಕಸಭಾ ಕ್ಷೇತ್ರ.ಶ್ರೀಮತಿ ಹೇಮಲತಾ ನಾಯಕ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು. ಡಾ.ಸುರೇಶ ಬಿ.ಇಟ್ನಾಳ ಭಾ.ಆ.ಸೇ. ಜಿಲ್ಲಾಧಿಕಾರಿಗಳು, ಕೊಪ್ಪಳ.ಹಾಗೂ ವರ್ಣಿತ್ ನೇಗಿ ಭಾ.ಆ.ಸೇ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕೊಪ್ಪಳ.

ಹಾಗೂ ಈ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವೃಂದ ಸಂಘಗಳ ಪ್ರತಿನಿಧಿಗಳು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಮತ್ತು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿಜಯನಗರ ಜಿಲ್ಲಾಧ್ಯಕ್ಷರಾದ ಜಿ.ಮಲ್ಲಿಕಾರ್ಜನ ಗೌಡ, ಟಿ.ಪಂಪಣ್ಣ ಜಿಲ್ಲಾ ಕಾರ್ಯದರ್ಶಿ, ಮಲ್ಲೇಶಪ್ಪ ಕೆ.ಜಿಲ್ಲಾ ಖಜಾಂಚಿ, ಹಾಗೂ ರಾಘವೇಂದ್ರ ಎಸ್ ಹೆಗಡಿಯಾರ್ ರಾಜ್ಯ ಪರಿಷತ್ ಸದಸ್ಯರು, ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.