ಶಾಶ್ವತ ಡ್ರೋನ್ ಸೇವೆ ರೈತರಿಗೆ ವರದಾನ: ಸುರೇಶ ಭಾವಿಕಟ್ಟಿ
Permanent drone service a boon for farmers: Suresh Bhavikatti
ಮುದ್ದೇಬಿಹಾಳ 17: ಕೃಷಿ ಬೆಳೆಗಳಿಗೆ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಗೆ ಮಾತ್ರವಲ್ಲದೇ ವೈಮಾನಿಕ ಕಣ್ಗಾವಲು, ಬೆಳೆ ಮೇಲ್ವಿಚಾರಣೆ, ಭೂ ಪರೀಶೀಲನೆ, ಮ್ಯಾಪಿಂಗ್, ಹಾನಿಗೊಳಗಾದ ಬೆಳೆ ಪರೀಶೀಲನೆ ಸೇರಿದಂತೆ ಪ್ರಸ್ತುತ ಕಾಲಘಟ್ಟದಲ್ಲಿ ಬೇಡಿಕೆಗೆ ತಕ್ಕಂತೆ ಕೃಷಿ ಸಂಬಂದಿತ ವಿವಿಧ ಕೆಲಸಗಳಿಗೆ ಡ್ರೋನ್ ಭವಿಷ್ಯದ ಪರಿಹಾರವಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ ಹೇಳಿದರು.
ತಾಲೂಕಿನ ಮಡಿಕೇಶ್ವರ ಗ್ರಾಮದ ಮಲ್ಲಿನಾಥ ಬಿರಾದಾರ ಇವರ ಹೊಲದಲ್ಲಿ ಶುಕ್ರವಾರ ದಾಸೋಹಿ ರೈತ ಉತ್ಪಾದಕ ಕಂಪನಿ ಹಾಗೂ ಇಂಡಿಯನ್ ಫರ್ಟಿಲೈರ್ಸ ಕೋ-ಆಫರೇಟಿವ್ಹ್ ಲಿ ಇವರಿಂದ ವ್ಯವಸ್ಥೆಗೊಳಿಸಲಾದ ಡ್ರೋನಗೆ ಚಾಲನೆ ಮತ್ತು ಸಿಂಪರಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಕ್ಷೇತ್ರ ಭವಿಷ್ಯದ ಸವಾಲುಗಳನ್ನು ಮುಂದಿಟ್ಟುಕೊಂಡು ಶಾಶ್ವತ ಡ್ರೋನ್ ಸೇವೆಯನ್ನು ಆರಂಭಿಸಿದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ದೂರದೃಷ್ಠಿಯು ಈ ಭಾಗದ ರೈತರಿಗೆ ವರವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜೈನ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಮಹೇಂದ್ರ ಬಿರಾದಾರ ಮಾತನಾಡಿ ಕಾರ್ಮಿಕರ ಕೊರತೆಯನ್ನು ನೀಗಿಸಿ ಕಡಿಮೆ ಖರ್ಚಿನ ಜೊತೆ ಅಲ್ಪಾವಧಿಯಲ್ಲಿ ಹೆಚ್ಚಿನ ಪ್ರದೇಶದ ಬೆಳೆಗಳಲ್ಲಿ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಡ್ರೋನ್ ಆಧುನಿಕ ಉಪಕರಣವಾಗಿದ್ದು ಈ ಭಾಗದ ರೈತರನ್ನು ಅಂತಹ ಆಧುನಿಕ ಕೃಷಿ ತಂತ್ರಜ್ಞಾನಗಳಿಗೆ ತೆರದುಕೊಳ್ಳಲು ಅವಕಾಶ ಕಲ್ಪಿಸಿದ ರೈತ ಕಂಪನಿಯ ಕಾರ್ಯ ಅನನ್ಯವಾದುದೆಂದರು.
ಡ್ರೋನ್‌ಗೆ ಚಾಲನೆ ನೀಡಿದ ಪ್ರಗತಿಪರ ರೈತ ಮಡಿವಾಳಪ್ಪಗೌಡ ಬಿರಾದಾರ(ಢವಳಗಿ) ಮಾತನಾಡಿ ಸಾಂಪ್ರದಾಯಿಕ ಕೃಷಿ ಪದ್ದತಿಗಳ ಮಧ್ಯೆ ಕಾಲಕ್ರಮೇಣ ಆಧುನಿಕತೆಗಳಿಗೆ ತೆರೆದುಕೊಳ್ಳುವ ಅನಿವಾರ್ಯತೆಯನ್ನು ರೈತರಿಗೆ ಮನವರಿಕೆ ಮಾಡಿ ಬೆಳೆ ವಿಧಾನ, ತಂತ್ರಜ್ಞಾನಗಳ ಅಳವಡಿಕೆ ಮತ್ತು ಅತ್ಯುನತ ಸೌಲಭ್ಯಗಳನ್ನು ಈ ನಾಡಿಗೆ ಪರಿಚಯಿಸಿ ಯಶಸ್ವಿಗೊಳಿಸುವ ಬಹು ದೊಡ್ಡ ಜವಾಬ್ದಾರಿಯನ್ನು ನಾವೆಲ್ಲ ಸೇರಿ ಕಟ್ಟಿದ ಕಂಪನಿಯಿಂದ ಯಶಸ್ವಿಯಾಗಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯವೆಂದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಸಂಸ್ಥಾಪಕ ಅರವಿಂದ ಕೊಪ್ಪ ಮಾತನಾಡಿ ಸಮಕಾಲೀನ ನಿಖರ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ ವೆಚ್ಚ ಮತ್ತು ನಷ್ಟವನ್ನು ತಗ್ಗಿಸಿ ಆದಾಯ ಹೆಚ್ಚಿಸುವ ಮಾರ್ಗಗಳ ಅನ್ವೇಷಣೆ ಮತ್ತು ಅನುಷ್ಠಾನದಲ್ಲಿ ನಿರಂತರತೆ ಕಾಯ್ದುಕೊಂಡು ಯಶಸ್ಸಿನೆಡೆಗೆ ತೆಗೆದುಕೊಂಡು ಹೋಗುವ ಬದ್ಧತೆಯ ಅಭಿವ್ಯಕ್ತಿಯಲ್ಲಿ ರೈತರ ಪಾಲ್ಗೊಳ್ಳುವಿಕೆ ಮಹತ್ವದ್ದಾಗಿದೆ ಎಂದರು.
ದಾಸೋಹಿ ಎಫ್.ಪಿ.ಸಿ ಉಪಾಧ್ಯಕ್ಷ ಆರಿ್ಬ ಸಜ್ಜನ, ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಸಿ.ಆರ್ ಬಿರಾದಾರ, ನಿರ್ದೇಶಕರಾದ ಸೋಮನಗೌಡ ಬಿರಾದಾರ, ಶ್ರೀಶೈಲ ಮೇಟಿ, ಪರಸಪ್ಪ ಮೇಟಿ, ಪ್ರಗತಿಪರ ರೈತರಾದ ಶಿವನಗೌಡ ಅಲ್ಲಾಪೂರ, ನಾನಾಗೌಡ ಗು. ಪಾಟೀಲ, ಬಸನಗೌಡ ಗು. ಹಿರೇಗೌಡರ, ನಾಗನಗೌಡ ಸೋ. ಸಾರವಾಡ, ಶಿವು ನಾಗೂರ(ಬಳಗಾನೂರ), ಈರಯ್ಯ ಗು. ಬಿರಾದಾರ, ಮದನಪ್ಪಗೌಡ ಶಿ. ಮೇಟಿ, ಕಾಶೀನಾಥ ಶಿ. ಬಿರಾದಾರ, ನಾಗಯ್ಯ ಗು. ಬಿರಾದಾರ, ರಾಜಶೇಖರ ಜಲಪೂರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು. ಮಡಿವಾಳಯ್ಯ ಗು. ಪೂಜಾರಿ ಪ್ರಾರ್ಥಿಸಿ ಸ್ವಾಗತಿಸಿದರು. ಸಿದ್ದಣ್ಣ ಹೊಳಿ ನಿರೂಪಿಸಿದರು. ಮುತ್ತು ಮೆಣಸಿನಕಾಯಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 