ಇಂದು ಶಿವಮೊಗ್ಗ ರಂಗಾಯಣದಿಂದ ‘ಸ್ವಾತಂತ್ರ್ಯ ಓಟ’ ನಾಟಕ ಪ್ರದರ್ಶನ

ಇಂದು ಶಿವಮೊಗ್ಗ ರಂಗಾಯಣದಿಂದ ‘ಸ್ವಾತಂತ್ರ್ಯ ಓಟ’ ನಾಟಕ ಪ್ರದರ್ಶನ  Performance of the play ‘Swatantrya Ota’ by Shivamogga Rangayana today

ಲೋಕದರ್ಶನ ವರದಿ 

ಬೆಳಗಾವಿ, ಜು. 6: ಶಿವಮೊಗ್ಗ ರಂಗಾಯಣ ತಂಡದ ವತಿಯಿಂದ ಜುಲೈ 7, 2026ರಂದು (ಮಂಗಳವಾರ) ಸಂಜೆ 6 ಗಂಟೆಗೆ ನಗರದ ಕನ್ನಡ ಭವನದಲ್ಲಿ ‘ಸ್ವಾತಂತ್ರ್ಯ ಓಟ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಮಹಮ್ಮದ್ ಕುಂಟಿರವರ ರಚನೆಯಾದ ಈ ನಾಟಕವನ್ನು ವೇಣಾಸಂ ಹಾಗೂ ಕನ್ನಡ ಭವನದ ಆಶ್ರಯದಲ್ಲಿ ಪ್ರದರ್ಶಿಸಲಾಗುತ್ತಿದೆ.  ‘ಸ್ವಾತಂತ್ರ್ಯ ಓಟ’ ನಾಟಕವು ಮನಸ್ಸನ್ನು ತಟ್ಟುವ ಕಥಾಹಂದರ ಹೊಂದಿದ್ದು, ಸಮಾಜದ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಹೃದಯಸ್ಪರ್ಶಿಯಾಗಿ ಸಾರುತ್ತದೆ.  ಪ್ರದರ್ಶನವು ಸಂಜೆ 6 ಗಂಟೆಗೆ ನಿಗದಿತ ಸಮಯಕ್ಕೆ ಆರಂಭವಾಗಲಿದ್ದು, ಪ್ರೇಕ್ಷಕರು ಕನಿಷ್ಠ 10 ನಿಮಿಷಗಳ ಮುಂಚಿತವಾಗಿ ಆಗಮಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.