ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಸಾಧನೆ
Performance of female students in NMMS exams
ಕೊಲ್ಹಾರ 13: ತಾಲೂಕಿನ ಚಿಕ್ಕ ಆಸಂಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿಯರು ಈಚೆಗೆ ಜರುಗಿದ ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಅಶೋಕ ಗಿಡ್ಡಪ್ಪಗೋಳ ತಿಳಿಸಿದ್ದಾರೆ.ಬಸವನ ಬಾಗೇವಾಡಿ ತಾಲ್ಲೂಕಿಗೆ ವಿದ್ಯಾರ್ಥಿನಿಯರಾದ ಸೃಷ್ಠಿ ಮಲ್ಲಿಕಾರ್ಜುನ ಮಾಚಕನೂರ 101 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಸುಮನ್ ರಮೇಶ ಪತ್ತಾರ 95 ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನೂಳಿದ ಅದೇ ಶಾಲೆಯ ವಿದ್ಯಾರ್ಥಿಗಳಾದ ಅಂಕಿತಾ ಮಾಚಕನೂರ 76 ಅಂಕ, ರೇಣುಕಾ ಆಸಂಗಿ 75 ಅಂಕ,ಸುಮಯಾ ಮುಲ್ಲಾ 74 ಅಂಕ ಪಡೆದುಕೊಂಡು ಶಾಲೆಗೆ ಕೀರ್ತೀಯನ್ನು ತಂದಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಯನ್ನು ಕಂಡು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸಮನ್ವಯಾಧಿಕಾರಿ ಸುನೀಲ ನಾಯಕ, ಎನ್ ಎಮ್ ಎಮ್ ಎಸ್ ತಾಲ್ಲೂಕು ನೋಡಲ್ ಅಧಿಕಾರಿ ಅನುಜಾ ಗುಬ್ಬಾ, ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಅಂಬರೀಷ ಹುಣಶಿಕಟ್ಟಿ,ಮುಖ್ಯ ಶಿಕ್ಷಕ ಅಶೋಕ ಗಿಡ್ಡಪ್ಪಗೋಳ, ಶಿಕ್ಷಕರಾದ ಎಂ ಎಸ್ ಬಿರಾದಾರ, ಎಂ ಎಸ್ ಕಮತಗಿ, ರಾಜಕುಮಾರ ಕಾಖಂಡಕಿ ಶಿಕ್ಷಕಿಯರಾದ ಪ್ರಿಯಾಂಕಾ ಬಿರಾದಾರ, ವಿದ್ಯಾಶ್ರೀ ಡಾನಿ, ಭಾರತ ಕೋಳೂರ ಸೇರದಂತೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 