ಧಾರವಾಡ : ಚಿಕ್ಕಮಗಳೂರಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆಗೈದಿದ್ದಾರೆ.
16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಿವಾಜಿ ಜಾಧವ (ಪ್ರಥಮ ಸ್ಥಾನ), 20 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರತಾಪ ಚಿಲಕವಾಡ (ತೃತೀಯ ಸ್ಥಾನ), ಪ್ರಕಾಶ ಹಾವೇರಿ (ನಾಲ್ಕನೇ ಸ್ಥಾನ).
16 ವರ್ಷದೊಳಗಿನ ಬಾಲಕಿಯ ವಿಭಾಗದಲ್ಲಿ ಸಂಜನಾ ಕಮ್ಮಾರ (ಪ್ರಥಮ ಸ್ಥಾನ), ವಚನಶ್ರೀ (9 ನೇ ಸ್ಥಾನ), 20 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅನಿತಾ ಓಲೇಕಾರ (ತೃತೀಯ ಸ್ಥಾನ).
ಪುರುಷರ ವಿಭಾಗದ 10 ಕೀ.ಮೀ. ಓಟದಲ್ಲಿ ಸುನೀಲ ಎನ್.ಡಿ. ( ದ್ವಿತೀಯ ಸ್ಥಾನ), ಲಕ್ಷ್ಮಣ ಲಮಾಣಿ (9 ನೇ ಸ್ಥಾನ). ಮಹಿಳೆಯರ 10 ಕೀ.ಮೀ. ಓಟದಲ್ಲಿ ಶಾಹೀನ ಧಾರವಾಡ (ತೃತೀಯ ಸ್ಥಾನ), ಜ್ಯೋತಿ ಕಟ್ಟಿಮನಿ (6ನೇ ಸ್ಥಾನ).
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಂಜನಾ ಕಮ್ಮಾರ, ಶಿವಾಜಿ ಜಾಧವ, ಅನಿತಾ ಓಲೇಕಾರ, ಪ್ರತಾಪ ಚಿಲಕವಾಡ, ಪ್ರಕಾಶ ಹಾವೇರಿ, ಸುನೀಲ ಎನ್.ಡಿ. ಮತ್ತು ಶಾಹೀನ ಧಾರವಾಡ ಇವರು ಬರುವ ಜನೇವರಿಯಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಗುಡ್ಡಗಾಡು ಓಟ ಸ್ಪಧರ್ೆಯಲ್ಲಿ ಭಾಗಹಿಸಲಿದ್ದಾರೆ.
ಉತ್ತಮ ಸಾಧನೆಗೈದ ಕ್ರೀಡಾಪಟುಗಳನ್ನು ಧಾರವಾಡ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಶನ್ ಪರವಾಗಿ ಇತ್ತೀಚೆಗೆ ಸನ್ಮಾನಿಸಲಾಯಿತು. ಅಧ್ಯಕ್ಷ ಮಹೇಶ ಶೆಟ್ಟಿ, ಧಾರವಾಡ ಜಿಲ್ಲಾ ಓಲಂಪಿಕ್ ಅಸೋಶಿಯೇಶನ್ ಅಧ್ಯಕ್ಷ ಶಿವು ಹಿರೇಮಠ, ಆನಂದ ನಡಿಗೇರ, ಕೆ.ಎಸ್.ಭೀಮಣ್ಣವರ, ಎಸ್.ಎಸ್.ಅಗಡಿ, ಶಕುಂತಲಾ ಬಿರಾದಾರ ಮತ್ತು ಶಾಮಲಾ ಪಾಟೀಲ ಉಪಸ್ಥಿತರಿದ್ದರು.