ಸ್ವಂತ ಅಭಿರುಚಿಯಿಂದ ಜನ ಬರುವಂತಾಗಬೇಕು: ಸಂಸದ ಶೆಟ್ಟರ್
People should be able to come based on their own preferences: MP Shettar
ಬೆಳಗಾವಿ 23- ನಾಡಹಬ್ಬದ ಮೂಲ ಉದ್ದೇಶವನ್ನು ನಾವು ಇಂದಿನ ಪೀಳಿಗೆಯವರಿಗೆ ತಿಳಿಸಬೇಕು. ಉತ್ಸವದ ಮಹತ್ವ ತಿಳಿದುಕೊಂಡು ಜನ ತಾವಾಗಿಯೇ ಬಂದಾಗ ಮಾತ್ರ ಅದೊಂದು ಯಶಸ್ವಿ ಕಾರ್ಯಕ್ರಮವಾಗುತ್ತದೆ. ಕೇವಲ ಜನ ಸೇರಿಸುವ ಕಾರ್ಯಕ್ರಮಗಳು ಆಗಬಾರದು. ಸ್ವತಃ ಅಭಿರುಚಿಯಿಂದ ಬರುವಂತಹ ವಾತಾವರಣ ನಿರ್ಮಾಣವನ್ನುಂಟು ಮಾಡಬೇಕು ಎಂದು ಸಂಸದ ಜಗಧೀಶ ಶೆಟ್ಟರ ಅವರು ಇಂದಿಲ್ಲಿ ಹೇಳಿದರು.
ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದ ಹೊರವೇದಿಕೆಯಲ್ಲಿ ಇದೇ ದಿ.22 ಸೋಮವಾರದಂದು ಸಾಯಂಕಾಲ 6 ಗಂಟೆಗೆ ಹಮ್ಮಿಕೊಂಡಿದ್ದ 98 ನೇ ನಾಡಹಬ್ಬದ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶೆಟ್ಟರ್ ಅವರು ಮೇಲಿನಂತೆ ಅಭಿಪ್ರಾಯಪಟ್ಟರು. ಮುಂದೆ ಮಾತನಾಡುತ್ತ ಅವರು ಹೊರದೇಶಗಳಲ್ಲಿಯೂ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಉತ್ಸವಗಳು ನಡೆಯುತ್ತಿರುವುದು ನಮಗೆ ಹೆಮ್ಮೆ ತರುತ್ತದೆ ಎಂದು ಹೇಳಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಡಾ. ಸಿ. ಎಂ. ತ್ಯಾಗರಾಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ನದಿ, ಗಾಳಿ, ಬೆಳಕು, ನಿಸರ್ಗದೊಂದಿಗೆ ಬದುಕುವವನೇ ನಿಜವಾದ ಪುಣ್ಯವಂತ. ಕಲೆ ಸಾಹಿತ್ಯದ ಅಭಿರುಚಿಯನ್ನು ಇಂದಿನ ಮಕ್ಕಳಲ್ಲಿ ಮೂಡಿಸುವ ಕೆಲಸವಾಗಬೇಕು. ತಮ್ಮತನವನ್ನು ಉಳಿಸಿಕೊಳ್ಳುವ ಬೆಳೆಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಕರ್ನಾಟಕಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ರ ಕೊಡುಗೆ ವಿಷಯ ಕುರಿತು ಗೋಕಾಕದ ಶ್ರೀಮತಿ ವಿದ್ಯಾ ರೆಡ್ಡಿ ಮಾತನಾಡಿದರು. ಪೂಜ್ಯ ಅಲ್ಲಮಪ್ರಭು ಮಹಾಸ್ವಾಮಿಗಳು,ನಾಗನೂರು ರುದ್ರಾಕ್ಷಿಮಠ ಅವರು ಆಶಿರ್ವದಿಸಿದರು. ಆರ್. ಪಿ. ಪಾಟೀಲ, ಶ್ರೀಮತಿ ಸುಜಾತಾ ಉಳ್ಳಾಲ, ಶ್ರೀಮತಿ ವಿಜಯಾ ಹಿರೇಮಠ ುಪಸ್ಥಿತರಿದ್ದರು.
ಶ್ರೀಮತಿ ಸುನಿತಾ ಪಾಟೀಲರ ವಿದ್ಯಾರ್ಥಿನಿಯರು ಹಾಡಿದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ಎಚ್. ಬಿ. ರಾಜಶೇಖರ ಸ್ವಾಗತಿಸಿದರು. ಡಾ. ಸಿ.ಕೆ. ಜೋರಾಪುರ ವರದಿ ವಾಚನ ಮಾಡಿದರು. ಪ್ರೊ. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಸೋಮಲಿಂಗ ಮಾವಿನಕಟ್ಟಿ ವಂದಿಸಿದರು. ವಿನಾಯಕ ಮುತಾಲಿಕ ದೇಸಾಯಿ ಇವರಿಂದ ದಾಸವಾಣಿ, ಕು. ಸಮೃದ್ಧಿ ಪಾಟೀಲರಿಂದ ಮಹಿಷಾಸು ಮರ್ದಿನಿ ನೃತ್ಯ ಕಾರ್ಯಕ್ರಮಗಳು ಜರುಗಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 