ಜನರಿಗೆ ವೈಜ್ಞಾನಿಕ ತಳಹದಿಯ ಲೈಂಗಿಕ ಶಿಕ್ಷಣ ಅವಶ್ಯ : ಡಾ. ಸಂಜೀವ ಕುಲಕರ್ಣಿ

ಜನರಿಗೆ ವೈಜ್ಞಾನಿಕ ತಳಹದಿಯ ಲೈಂಗಿಕ ಶಿಕ್ಷಣ ಅವಶ್ಯ : ಡಾ. ಸಂಜೀವ ಕುಲಕರ್ಣಿ People need scientifically based sex education: Dr. Sanjeev Kulkarni

ಲೋಕದರ್ಶನ ವರದಿ 

ಧಾರವಾಡ 26 : ಪ್ರತಿ ವರ್ಷ ನಮ್ಮದೇಶದಲ್ಲಿ ಸುಮಾರು 50 ಲಕ್ಷ ಬಲವಂತದ ಗರ್ಭಪಾತ ಘಟನೆಗಳು ನಡೆಯುತ್ತಿದ್ದು, ಜನರಿಗೆ ಲೈಂಗಿಕ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಹಿರಿಯ ಮಹಿಳಾ ಆರೋಗ್ಯತಜ್ಞಡಾ. ಸಂಜೀವ ಕುಲಕರ್ಣಿ ಹೇಳಿದರು.  

ಅವರು ಪಂ. ಬಸವರಾಜಶಾಸ್ತ್ರಿ ಕೊಂಡಿ ಕೊಪ್ಪಮಠ ಸ್ಮರಣಾರ್ಥದತ್ತಿ ನಿಮಿತ್ತ ಬುಧವಾರ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಭಾರತೀಯ ವೈದ್ಯಕೀಯ ಸಂಘ ಗೋಕಾಕ ಶಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲಿ ್ಲ'ಜೀವಜಗತ್ತಿನಲ್ಲಿ ಸಂತಾನೋತ್ಪತ್ತಿಯ ವಿಚಿತ್ರಗಳು ಕುರಿತು ಉಪನ್ಯಾಸ ನೀಡಿದರು. 

ಲೈಂಗಿಕ ಜ್ಞಾನದ ಕೊರತೆಯಿಂದಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗದಲ್ಲಿ ಯೂಗರ್ಭಪಾತ ಘಟನೆಗಳು ಹೆಚ್ಚಾಗುತ್ತಿವೆ. ಈಗಲೂ ಲೈಂಗಿಕ ಶಿಕ್ಷಣ ನೀಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜನರಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಕುರಿತು ವೈಜ್ಞಾನಿಕ ತಳಹದಿಯ ಶಿಕ್ಷಣ ನೀಡುವುದು ಅಗತ್ಯ ಎಂದರು.