ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ : ಬಿಜೆಪಿ ಆಡಳಿತಕ್ಕೆ ಮತದಾರರು ಜಾತಕ ಪಕ್ಷಿ ಯಂತೆ ಕಾಯುತ್ತಿದ್ದಾರೆ- ಅರುಣಕುಮಾರ ಪೂಜಾರ
People are tired of Congress rule: Voters are waiting for BJP rule like a bird in a horoscope - Arun
ರಾಣಿಬೆನ್ನೂರು 30 : ಪ್ರಸ್ತುತ ಪಕ್ಷಕ್ಕೆ ಅಧಿಕಾರ ಇರಲಿ,ಇಲ್ಲದೇ ಇರಲಿ ನಾಡಿನ ಮತ್ತು ಜಿಲ್ಲೆಯ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಇಂದಿಗೂ ಪಕ್ಷದ ಮುಖಂಡರು ಕಾರ್ಯನಿರ್ತರಾಗಿದ್ದೇವೆ. ಜನಪರ ಸೇವೆಗೆ ಭಾರತೀಯ ಜನತಾ ಪಕ್ಷವು ಮತ್ತು ಕಾರ್ಯಕರ್ತರು ಪಕ್ಷದ ತತ್ವ ಸಿದ್ಧಾಂತದ ಅಡಿಯಲ್ಲಿ ಸದಾ ಕಾಲವು ಸೇವಾ ಸನ್ನದ್ದವಾಗಿದೆ ಎಂದು ಮಾಜಿ ಶಾಸಕ,ಅರುಣ ಕುಮಾರ
( ಗುತ್ತೂರ ) ಪೂಜಾರ ಹೇಳಿದರು. ಅವರು ರವಿವಾರ ಮುಂಜಾನೆ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠ ಸಭಾ ಭನದಲ್ಲಿ ಬಿಜೆಪಿ ಆಯೋಜಿಸಿದ್ದ, ಪಕ್ಷದ ಕಾರ್ಯಕರ್ತರ ಹಾಗೂ ಬೂತ್ ಮಟ್ಟದ ಅಧ್ಯಕ್ಷರ ಬಿಎಲ್‌ಇ -2 ಕಾರ್ಯಗಾರದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಅಧಿಕಾರದ ಅವಧಿಯಲ್ಲಿ ಅನೇಕ ಕ್ರಿಯಾ ಯೋಜನೆಗಳು ರೂಪಿಸಿ, ನಾಡಿನ ಸಮಗ್ರ ಅಭಿವೃದ್ಧಿ ಮತ್ತು ಪ್ರಗತಿಗೆ ಕಾರಣವಾಗಿ,ಜನಸಾಮಾನ್ಯರ ಬದುಕಿಗೆ ಆಸರೆಯಾಗಿ ನಿಂತಿರುವ ಹೆಮ್ಮೆ ಪಕ್ಷಕ್ಕಿದೆ ಎಂದರು. ಕಳೆದ ಚುನಾವಣೆಯಲ್ಲಿ ನಮ್ಮ ನಮ್ಮಗಳ ಕೆಲವು ತಪ್ಪಿಪ್ಪಿನಿಂದಾಗಿ ಸೋಲು ಅನುಭವಿಸಬೇಕಾಯಿತು ಹೊರತು, ಭವಿಷ್ಯದ ಚುನಾವಣೆಗೆ ಗಟ್ಟಿಯಾಗಲು ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಮುನ್ನಡೆಯಬೇಕಾಗಿದೆ ಎಂದರು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಯಾವ ರೀತಿ ಅಭಿವೃದ್ಧಿ ನಡೆಯುತ್ತಿದೆ, ಆಡಳಿತದಿಂದ ಏನಾಗುತ್ತಿದೆ ಎನ್ನುವುದು ಇಂದು ರಾಜ್ಯದ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಮತದಾರರು ಬರಲಿರುವ ಚುನಾವಣೆ ಎದುರಿಸಲು ಈಗಿನಿಂದಲೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷಕ್ಕೆ ಮತ್ತು ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ತಮ್ಮದೇ ಆದ ತತ್ವ ಸಿದ್ಧಾಂತವಿದೆ. ಜನ ಸೇವೆಯೇ ಜನಾರ್ದನ ಸೇವೆ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟು ಕಾಯಾ, ವಾಚಾ, ಮನಸಾ ಸೇವೆ ಸಲ್ಲಿಸುವಲ್ಲಿ ನಿರತರಾಗಿದ್ದಾರೆ ಕಾರ್ಯಕರ್ತರು ಎಂದಿಗೂ ಯಾವುದೇ ಕಾರಣಕ್ಕೂ ಎದೆಗುಂದುವ ಅವಶ್ಯಕತೆ ಇಲ್ಲ. ಕಾರ್ಯಕರ್ತರೊಂದಿಗೆ ಮುಖಂಡರು ಇದ್ದೇವೆ ಎಂದರು. ಎಂಎಲ್‌ಎ,ಎಂಪಿ, ಚುನಾವಣೆ ಹೊರತುಪಡಿಸಿ, ಕೆಲವೇ ತಿಂಗಳಲ್ಲಿ ಘೋಷಣೆಯಾಗಲಿರುವ ಗ್ರಾಪಂ. ತಾಪಂ. ಜಿಪಂ, ವಿ ಎಸ್ ಎಸ್, ಸಂಘ ಸಂಸ್ಥೆಗಳ ಇನ್ನಿತರ ಚುನಾವಣೆಗಳು ಕಾರ್ಯಕರ್ತರ ಚುನಾವಣೆಯಾಗಿವೆ. ಬಹಳಷ್ಟು ಜಾಗೃತೆಯಿಂದ ಚುನಾವಣೆ ಎದುರಿಸಬೇಕು. ಈ ಚುನಾವಣೆ ನಂತರ ಭವಿಷ್ಯದ ಎಲ್ಲಾ ಚುನಾವಣೆಗಳು ಪಕ್ಷದ ತತ್ವ ಸಿದ್ಧಾಂತಕ್ಕೆ ಸಾಕ್ಷಿಯಾಗಲಿವೆ ಅದಕ್ಕಾಗಿ ಇಂದಿನಿಂದಲೇ ಚುನಾವಣೆ ಎದುರಿಸುವಿಕೆ ಕುರಿತು ಅರಿವು ಮೂಡಿಸಿಕೊಳ್ಳಬೇಕು ಎಂದು ಪೂಜಾರ ಕರೆ ನೀಡಿದರು.
ಕಾರ್ಯಗಾರದಲ್ಲಿ ಬಿಜೆಪಿ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ಪಿ ರಾಜು, ಮುಖಂಡರಾದ ಕೆ. ಶಿವಲಿಂಗಪ್ಪ, ಗ್ರಾಮೀಣ ಅಧ್ಯಕ್ಷ ಸುಭಾಸ ಸಿರಿಗೇರಿ, ಮಂಜುನಾಥ ಓಲೇಕಾರ, ಪರಮೇಶಪ್ಪ ಗೋಳಣ್ಣನವರ, ಬಸವರಾಜ ಚಳಗೇರಿ, ಚೋಳಪ್ಪ ಕಸವಾಳ, ಭಾರತಿ ಜಂಬಿಗಿ, ಸಿದ್ದಪ್ಪ ಚಿಕ್ಕಬಿದರಿ, ಲಿಂಗರಾಜ ಕೋಡಿಹಳ್ಳಿ, ಪವನಕುಮಾರ ಮಲ್ಲಾಡದ, ಮತ್ತಿತರರು ಉಪಸ್ಥಿತರಿದ್ದರು ಕಲಾವಿದೆ ರಜನಿ ಕರಿಗಾರ ವಂದೇ ಮಾತರಂ ಗೀತೆ ಹಾಡಿದರು. ನಗರ ಅಧ್ಯಕ್ಷ ಮಂಜುನಾಥ ಕಾಟಿ ಸ್ವಾಗತಿಸಿ, ಅಮೋಘ ಬದಾಮಿ ನಿರೂಪಿಸಿ ವಂದಿಸಿದರು. ಕಾರ್ಯಗಾರದಲ್ಲಿ ನಗರ ಮತ್ತು ತಾಲೂಕಿನ 500ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 