ಜನತೆ ಮೊಬೈಲ್ ಟಿವಿ ಬಳಕೆಯಲ್ಲಿ ನಿರತರಾಗಿ ಸಂಸ್ಕೃತಿಯನ್ನು ಮರೆತವರಂತಾಗಿದ್ದಾರೆ : ಕರ್ಣಕುಮಾರ
People are busy using mobile TV and have forgotten their culture: Karnakumar
ಲೋಕದರ್ಶನ ವರದಿ
ಕೊಪ್ಪಳ 20: ನಾದಯೋಗಿ ಗುರು ಪುಟ್ಟರಾಜ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ (ರಿ) ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ/ಬೆಂಗಳೂರು ಸಹಯೋಗದಲ್ಲಿ ಬಿನ್ನಾಳದ ಶ್ರೀ ಹಿರಿಯಮ್ಮದೇವಿ ದೇವಸ್ಥಾನದ ಹಿಂಭಾಗ ಮಾತೊಶ್ರೀ ಹನುಮವ್ವ ತಾಯಿ ಬಯಲು ವೇದಿಕೆಯಲ್ಲಿ “ನಾದಯೋಗಿ ಪರಂಪರಾ ಉತ್ಸವ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರರವರು ಮಾತನಾಡಿ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಹುದೊಡ್ಡ ಕಾರ್ಯವನ್ನು ನಿರ್ವಹಿಸುತ್ತಿದೆ,
ಆಧುನಿಕ ಕಾಲಘಟ್ಟದಲ್ಲಿ ಬಹಳಷ್ಟು ಜನತೆ ಮೊಬೈಲ್ ಟಿವಿ ಬಳಕೆಯಲ್ಲಿ ನಿರತರಾಗಿ ಸಂಸ್ಕೃತಿಯನ್ನು ಮರೆತವರಂತಾಗಿದ್ದಾರೆ, ಪಾಲಕರು ಕೂಡ ತಮ್ಮ ಮಕ್ಕಳಿಗೆ ಸಂಸ್ಕೃತಿಯ ಬದಲಾಗಿ ಮೊಬೈಲಗಳನ್ನು ನೀಡಿ ಅದರ ಗೀಳು ಹೆಚ್ಚಿಸಿದ್ದಾರೆ, ಮನೆಯೇ ಮೊದಲ ಪಾಠಶಾಲೆ ಅಲ್ಲಿ ಎಲ್ಲವೂ ಸರಿಪಡಿಸಬಹುದಾಗಿದೆ ಅಂದಾಗ ಮಾತ್ರ ಮಕ್ಕಳು ಯುವಜನತೆ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ.
ಹೀಗಾಗಿ ಎಲ್ಲರೂ ಕಲೆ ಸಂಸ್ಕೃತಿಯಂತಹ ಜೀವನಕ್ಕೆ ಒಗ್ಗೂಡಿಕೊಂಡರೆ ಬದುಕು ಇನ್ನಷ್ಟು ಸುಮಧುರವಾಗಿರುತ್ತದೆ ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ವೇದಮೂರ್ತಿ ಮಹೇಶ್ವರ ತಾತನವರು ವಹಿಸಿದ್ದು, ಅಧ್ಯಕ್ಷತೆಯನ್ನು ಮಹಮ್ಮದಸಾಬ ವಾಲಿಕಾರ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶಂಕರ ಬಿನ್ನಾಳ, ಕಳಕಪ್ಪ ಶೆಟ್ಟಿ, ಹಿರಿಯಪ್ಪ ಕಡೆಮನಿ, ಶೇಖಪ್ಪ ದೊಡ್ಡಮನಿ, ಮುಂತಾದವರು ಉಪಸ್ಥಿತರಿದ್ದರು.
ಆದರ್ಶ ಬಗಾಡೆಯವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮೆಹಬೂಬ ಕಿಲ್ಲೆದಾರರಿಂದ ಜನಪದ ಸಂಗೀತ, ಅಲ್ಲಾಭಕ್ಷಿ ಭೀಮನೂರವರಿಂದ ಹಾಗೂ ವಿಜಯಲಕ್ಷ್ಮೀ ನಾಗರಾಜರವರಿಂದ ಸುಗಮ ಸಂಗೀತ, ಅಂಬರೀಶ್ ಹಾಗೂ ತಂಡದವರಿಂದ ತಬಲಾ ಸೋಲೋ ಅಂಬಣ್ಣ ದಳವಾಯಿಯವರಿಂದ ತತ್ವಪದ, ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಗೀತ ಪಾಠ ಶಾಲೆಯಿಂದ ಸಮೂಹ ಗಾಯನ ಹಾಗೂ ದೀಕ್ಷಾ ಹೆಗಡೆ ತಂಡದವರಿಂದ ಭರತನಾಟ್ಯ ಕಾರ್ಯಕ್ರಮಗಳು ಸೊಗಸಾಗಿ ಮೂಡಿ ಬಂದವು. ವಾದ್ಯ ವೃಂದದ ಕೀಬೋರ್ಡನಲ್ಲಿ ರಾಮಚಂದ್ರ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ ಹಾಗೂ ಕುಮಾರೇಶ ಬಿನ್ನಾಳ, ರಿಧಮ ಪ್ಯಾಡನಲ್ಲಿ ಸಂಜನ ಬೆಲ್ಲದ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 