ಬೆಳಗಾವಿ ಕಾಳೆನಟ್ಟಿ ಗ್ರಾಮದಲ್ಲಿ ಸ್ಮಶಾನ ಭೂಮಿಗಾಗಿ ಜನರ ಪರದಾಟ

ಬೆಳಗಾವಿ ಕಾಳೆನಟ್ಟಿ ಗ್ರಾಮದಲ್ಲಿ ಸ್ಮಶಾನ ಭೂಮಿಗಾಗಿ ಜನರ ಪರದಾಟ People's march for cemetery land in Kalenatti village, Belgaum

ಲೋಕದರ್ಶನ ವರದಿ 

ಬೆಳಗಾವಿ 22: ಬೆಳಗಾವಿ ತಾಲೂಕಿನ ಕಾಳೆನಟ್ಟಿ ಗ್ರಾಮದಲ್ಲಿ ಸಾರ್ವಜನಿಕರು ಸಾವನ್ನಪ್ಪಿದಾಗ ಅಂತ್ಯಕ್ರಿಯೆ ಮಾಡಲು ಸ್ಮಶಾನ ಭೂಮಿ ಇಲ್ಲದೆ ಹಲವು ಅವಾಂತರಗಳು ಸೃಷ್ಟಿಯಾಗುತ್ತಿವೆ.  ಈ ವಿಚಾರವಾಗಿ ಕೆಲವು ದಿನಗಳ ಹಿಂದೆ ಗ್ರಾಮದ ಜನ ಈ ಸಮಸ್ಯೆಗಳನ್ನು ಒಳಗೊಂಡು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ರಾಜ್ಯಾದ್ಯಕ್ಷರಾದ ಮಹೇಶ್ ಎಸ್ ಶೀಗಿಹಳ್ಳಿ ರವರ ಜೊತೆ ಚರ್ಚಿಸಿ ಜಿಲ್ಲಾಡಳಿತದ ಗಮನಕ್ಕೆ ತರಲು ಕೋರಿದ್ದರು.

ನಂತರ ಬೆಳಗಾವಿಗೆ ಖಅ/ಖಖಿ ಬುಡಕಟ್ಟು ಸಮುದಾಯಗಳ ಆಯೋಗದ ಅಧ್ಯಕ್ಷ ಡಾ. ಎಲ್ ಮೂರ್ತಿ ಬೆಳಗಾವಿಗೆ ಆಗಮಿಸಲಾದಾಗ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಮಸ್ಯೆ ಕುರಿತು ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಮಹೇಶ್ ಶೀಗಿಹಳ್ಳಿ ಸಮಸ್ಯೆಗಳ ಕುರಿತು ಮಾತನಾಡಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಮುಖಂಡರ ಸಮ್ಮುಖದಲ್ಲಿ ಆಯೋಗದ ಅಧ್ಯಕ್ಷರಿಗೆ ಮತ್ತೆ ಸಮಸ್ಯೆ ಬಗ್ಗೆ ವಿವರಿಸಿದ ಮತ್ತೆ ಇದೆ ತರಹ ಬೆಳಗಾವಿ ಜಿಲ್ಲೆಯಲ್ಲಿ ಶೇಖಡಾ70ಅ ಸಮಸ್ಯೆಗಳಿವೆ. ಅನ್ಯಾಯಕ್ಕೆ ಒಳಗಾದ ಸೌಲಭ್ಯ ವಂಚಿತ ಇಂತಹ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಿಸುವಂತೆ ವಿನಂತಿಸಿದ್ದರು.

ಆದರೆ ಇದಾದಬಳಿಕ ಕಾಳೆನಟ್ಟಿ ಗ್ರಾಮದಲ್ಲಿ ಯುವಕನೋರ್ವ ಸಾವನ್ನಪಿದ್ದು, ಅಂತ್ಯಕ್ರಿಯೆ ಮಾಡಲು ಸ್ಥಳವಿಲ್ಲದೆ ಗ್ರಾಮದ ಜನ ಸಮಸ್ಯೆಗೆ ಒಳಗಾಗಿದ್ದರು. ಗ್ರಾಮದ ಜನರು ಕರೆಗೆ ಒಗ್ಗಟ್ಟು ಸ್ಥಳಕ್ಕೆ ಭೇಟಿ ಮಾಡಿ ಗ್ರಾಮದ ಜನರ ಜಮೀನಿನ ಮಾಲೀಕರಾದ ಹಿರಿಯರಿಗೆ ತಿಳಿಹೇಳಿವ ಮೂಲಕ ದಯವಿಟ್ಟು ಸ್ಮಶಾನ ಭೂಮಿಗಾಗಿ ಸ್ಥಳಾವಕಾಶ ಕೊಡಬೇಕು. ಸರ್ಕಾರದಿಂದ ನಿಮ್ಮ ಜಮೀನಿಗೆ ಬೆಲೆ ನಿಗದಿ ಮಾಡಿ ಸ್ಮಶಾನ ಭೂಮಿ ಮಂಜೂರು ಮಾಡಿಕೊಳ್ಳುತ್ತೇವೆ ಎಂದು ಹಿರಿಯರಿಗೆ ಸಾಮಾಜಿಕ ಹಾಗೂ ಕನ್ನಡಪರ ಹೋರಾಟಗಾರ ಮಹೇಶ್ ಎಸ್ ಶೀಗಿಹಳ್ಳಿ ತಿಳಿಸಿದ್ದರು. 

ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತನಾಡಿ ಸ್ಮಶಾನ ಭೂಮಿ ಮಂಜೂರು ಮಾಡಲು ತಾವುಗಳು ಕ್ರಮ ಜರುಗಿಸಬೇಕು ಹಾಗೂ ಸ್ಥಳಕ್ಕೆ ಬೇಟಿ ಮಾಡಬೇಕು ಮತ್ತು ಜಮೀನು ನೀಡಿದ ಮಾಲೀಕರ ಜಮೀನಿಗೆ ಸರ್ಕಾರದಿಂದ ಬೆಲೆ ನಿಗದಿ ಮಾಡಿ ಅನುಕೂಲಮಾಡಿಕೊಡಬೇಕು ಎಂದು ಚರ್ಚೆ ನಡೆಸಲಾಯಿತು.ಜಮೀನು ಮಾಲೀಕರಿಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಕರೆ ಮುಖಾಂತರ ಮಾತನಾಡಿಸಿ ಎಲ್ಲರನ್ನೂ ಒಪ್ಪಿಸಿ ತಕ್ಕ ಮಟ್ಟಿಗೆ ಸಮಸ್ಯೆ ಬಗೆಹರಿಸಿ ಮೃತ ಹೊಂದಿದ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಮಹೇಶ್ ಶೀಗಿಹಳ್ಳಿ ಸ್ಥಳಾವಕಾಶ ಕೊಡಲಾಗಿದೆ.ಈ ವಿಚಾರವಾಗಿ ನ್ಯಾಯ ಸಿಗುವರೆಗೂ ಪ್ರಯತ್ನ ಮಾಡುತ್ತೇವೆ ಹೋರಾಟದ ಅಗತ್ಯ ಬಿದ್ದರೆ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂಬ ಮಾತನ್ನು ಗ್ರಾಮದ ಜನರಿಗೆ ಹಾಗೂ ಅಧಿಕಾರಿಗಳಿಗೆ ಮಹೇಶ್ ಎಸ್ ಶೀಗಿಹಳ್ಳಿ ತಿಳಿಸಿದರು.