ಅಗಸನಾಳದಲ್ಲಿ ಪಿಂಚಣಿ ಅದಾಲತ್

ಅಗಸನಾಳದಲ್ಲಿ ಪಿಂಚಣಿ ಅದಾಲತ್  Pension Adalat in Agasanala

ಇಂಡಿ  06: ತಾಲೂಕಿನ ಬಳ್ಳೊಳ್ಳಿ ಹೋಬಳಿ ವ್ಯಾಪ್ತಿಯ ಬಸನಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಂದಾಯ-ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ   ಮಾತನಾಡಿದ ಇಂಡಿ ಗ್ರೇಡ್ -2 ತಹಶೀಲ್ದಾರ ಧನಪಾಲ್ ಶೆಟ್ಟಿ ದೇವೂರ ಅವರು ಸಾರ್ವಜನಿಕರಿಗಾಗಿ ಸರ್ಕಾರ  ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಆ ಯೋಜನೆಗಳ ಸಮರ​‍್ಕವಾಗಿ ತಲುಪಿಸಲು ನಿಮಗೆ ಸೂಕ್ತ ರೀತಿಯಲ್ಲಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನಲೆಯಲ್ಲಿ ಗ್ರಾಮಕ್ಕೆ ಅಧಿಕಾರಿಗಳ ಜತೆ ಆಗಮಿಸಿ ಸ್ಥಳದಲ್ಲಿಯೇ ದಾಖಲಾತಿಗಳನ್ನು ಪರೀಶೀಲನೆ ಮಾಡಿ, ಪ್ರಮಾಣ ಪತ್ರಗಳನ್ನು ನೀಡಲಾಗುವುದು.

ಈಗಾಗಲೇ ಪ್ರಮಾಣ ಪತ್ರಗಳು ಇದ್ದರೂ ಮಾಸಾಶನ ನಿಂತು ಹೋಗಿದ್ದರೆ ಗಮನಕ್ಕೆ ತನ್ನಿ. ಪಿತ್ರಾರ್ಜಿತ ಜಮೀನು ವರ್ಗಾವಣೆಯಾಗಬೇಕಾದರೆ ಪೋತಿ ಮಾಡಿಸಿಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ನಿಮಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.ಈ ಸಂದರ್ಭದಲ್ಲಿ ಬಳ್ಳೊಳ್ಳಿ ಉಪ ತಹಶೀಲ್ದಾರ್ ಅಣ್ಣಪ್ಪ ಗೊಟ್ಯಾಳ ಬಳ್ಳೊಳ್ಳಿ ಕಂದಾಯ ನೀರೀಕ್ಷಕರಾದ ಪಿ ಕೆ ಕೊಡವನ್ನ ಗ್ರಾಮ ಆಡಳಿತ ಅಧಿಕಾರಿ ಬಸವರಾಜ ಗುರವ್ ಬಸನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಪ್ಪ ಬಗಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲ್ ಶಿವಗದ್ದಿಗೆ ಅರ್ಜುನ್ ಮೇತ್ರಿ ಲಕ್ಷ್ಮಣ ಗುಂಡಗರ್ಜಿ ಮೈಬೂಬ ಮುಲ್ಲಾ ಸುರೇಶ ಇವತ್ಗಾವ್ ಹಾಗೂ ಶಿವಪ್ಪ ಅಜನಾಳ ಮಹಾಂತೇಶ ಗಣಿ ಶಿವಲಿಂಗಪ್ಪ ಡೊಳ್ಳಿ ಸಿದ್ದಪ್ಪ ಹೂಗಾರ ಹಾಗೂ ಗ್ರಾಮ ಅನೇಕರು ಉಪಸ್ಥಿತರಿದ್ದರು