ಭಾವೈಕ್ಯತೆ ಪುನರುತ್ಥಾನವಾದಾಗ ಮಾತ್ರ ಶಾಂತಿ ನೆಮ್ಮದಿ: ಹಾಫೀಝಾ
Peace and tranquility will only come when unity is revived: Hafeezah
ರಾಣೇಬೆನ್ನೂರು 26: ನಾಡು ಮತ್ತು ದೇಶದಲ್ಲಿ ಇಂದು ಅನೇಕ ರೀತಿಯಲ್ಲಿ ಅವಘಡಗಳು ಸಂಭವಿಸುತ್ತಲಿವೆ. ಇಂದಿನ ಸಂಕ್ರಮಣ ಕಾಲದಲ್ಲಿ ಭಾರತೀಯ ಪ್ರಜೆಗಳಾದ ನಾವುಗಳು ಯಾವುದೇ ಶಾಂತಿ, ಸೌಹಾರ್ದತೆ, ನೆಮ್ಮದಿ ಪ್ರೀತಿ, ವಿಶ್ವಾಸ, ಬ್ರಾತತ್ವವಿಲ್ಲದೆ ದಾಯಾದಿಗಳಂತೆ ನಿತ್ಯವೂ ಕಾದಾಟದಲ್ಲಿ ತೊಡಗಿದ್ದೇವೆ ಇದರ ಪರಿಣಾಮ ನಮ್ಮ ಅವನತಿಗೆ ನಾವೇ ಕಾರಣವಾಗುತ್ತಿದ್ದೇವೆ. ಸಾವಿರಾರು ವರ್ಷಗಳ ಹಿಂದಿನ ಇತಿಹಾಸದ ಭಾವೈಕ್ಯತೆಯ ಭಾರತ ಪುನರುತ್ಥಾನವಾದಾಗ ಮಾತ್ರ ಶಾಂತಿ ನೆಮ್ಮದಿಯಿಂದ ಬದುಕಿ ಬಾಳಲು ಸಾಧ್ಯವಾಗುವುದು ಎಂದು ಎಸ್ ಎಸ್ ಎಫ್ ಕ ರಾಜ್ಯಾಧ್ಯಕ್ಷ, ಮುಸ್ಲಿಂ ಧರ್ಮ ಗುರು ಹಾಫೀಝಾ ಸುಫಿಯಾನ್ ಸಖಾಫಿ ಹೇಳಿದರು. ಅವರು, ಬುಧವಾರ ಕರ್ನಾಟಕ ರಾಜ್ಯದಿಂದ ವಾಣಿಜ್ಯ ನಗರಕ್ಕಾಗಮಿಸಿದ "ಸುನ್ನಿ ಸ್ಟುಡೆಂಟ್ ಫೆಡರೇಶನ್ ಕರ್ನಾಟಕ" ಆಯೋಜಿತ "ಸೌಹಾರ್ದ ನಡಿಗೆ ಜಾತಾ" ದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಭಾರತ ಮತ್ತು ಭಾರತೀಯರು ವೇದ ಇತಿಹಾಸ ಕಾಲಗಳಿಂದಲೂ ಯಾವುದೇ ಜಾತಿ, ಮತ, ಭೇದ, ಭಾವ, ಕಾಣದೆ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬದುಕಿ ಬಾಳುತ್ತಾ ಬಂದಿದ್ದೇವೆ. ಎಂದು ಸಮಗ್ರ ಇತಿಹಾಸವನ್ನು ವಿವರಿಸಿದ ಹಾಫೀಝಾ ಸಖಾಫಿ, ಪ್ರೀತಿ, ವಿಶ್ವಾಸ, ಸೌಹಾರ್ದತೆ, ಸಹಬಾಳ್ವೆ ನಮ್ಮೆಲ್ಲರ ಅವಿಭಾಜ್ಯ ಅಂಗವಾದಾಗ ಮಾತ್ರ ಇತಿಹಾಸದ ಭಾರತ ಪುನರುತ್ಥಾನವಾಗಲು ಸಾಧ್ಯವಾಗುವುದು ಎಂದರು. ಇಂದಿನ ರಾಜಕೀಯ ವ್ಯವಸ್ಥೆ, ಪ್ರಬಲವಾದ ಜಾತಿಯತೆ ನಮ್ಮೆಲ್ಲರ ಮನಸ್ಸುಗಳು ನಿತ್ಯ ಸುಡುತ್ತಲಿವೆ ಇದರಿಂದ ಹೊರ ಬರಬೇಕು. ರಾಜಕೀಯ ಮಾಡುವವರು ಮಾಡಲಿ. ಅವರ ಮೋಸಕ್ಕೆ ಸುಳ್ಳು ಮಾತಿಗೆ ಬೆಲೆ ಕೊಡದೆ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ, ದೊಡ್ಡಪೇಟೆ ವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮಿಗಳವರು, ದೇಶದ ಪ್ರಗತಿ, ನಾಡಿನ ಆರ್ಥಿಕತೆ, ಸಂಪತ್ ಭರಿತ ದೇಶವಾಗಿ ಹೊರಹೊಮ್ಮುತ್ತಿರುವ ಇಂದಿನ ಸಂದರ್ಭದಲ್ಲಿ ದೇಶದ ಇತಿಹಾಸ ಪರಂಪರೆಯ ಸಂಸ್ಕೃತಿ, ಸಂಸ್ಕಾರ ಆಚಾರ, ವಿಚಾರ, ಪರಸ್ಪರ ಪ್ರೀತಿ ವಿಶ್ವಾಸ ಭಾವೈಕ್ಯತೆ ಅಳವಡಿಸಿಕೊಂಡು ಬಾಳಿದಾಗ ಮಾತ್ರ ಮತ್ತಷ್ಟು ಭಾರತ ಬಲಿಷ್ಠವಾಗುವುದು ಎಂದರು. ರಾಣೇಬೆನ್ನೂರ- ಗುಡ್ ಶಫರ್ಡ್ ಚರ್ಚಿನ ಕಾರ್ಯದರ್ಶಿ ಮಿಲನ್ ಕುಮಾರ ಬಳ್ಳಾರಿ ಅವರು, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವು ಇಂದು ಪ್ರತಿ ಮನೆ ಮತ್ತು ಮನಕ್ಕೆ ತಲುಪಬೇಕಾದ ಅಗತ್ಯವಿದೆ. ಎಸ್. ಎಸ್. ಎಫ್- ಕ ಆಯೋಜಿಸಿರುವ ಕಾರ್ಯಕ್ರಮವು ಪ್ರಸ್ತುತ ಸನ್ನಿವೇಶದಲ್ಲಿ ಸಕಾರವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ವರ್ತಕ ಮಲ್ಲೇಶಪ್ಪ ಅರಿಕೇರಿ ಅವರು, ಉತ್ತರ ಕರ್ನಾಟಕದ ಹೆಬ್ಬಾಗಿಲು, ವಾಣಿಜ್ಯ ನಗರಿ ರಾಣೆಬೆನ್ನೂರು ಹಾವೇರಿ ಜಿಲ್ಲೆ ಸಾದು, ಸಂತ, ಶರಣರ ನಾಡು, ಇಂತಹ ನಾಡಿನಲ್ಲಿ ಎಂದಿಗೂ ಜಾತಿ, ಮತ ಎಣಿಸದೆ ಸಾಮರಸ್ಯದಿಂದಲೇ ಬದುಕಿ ಬಾಳಿದ್ದೇವೆ, ಇಂತಹ ಸಂದರ್ಭದಲ್ಲಿ ಇಂತಹ ಸಂದೇಶ ಇಂದಿನ ಯುವ ಜನಾಂಗಕ್ಕೆ, ತಿಳಿಸಿ ಅರಿವು ಮೂಡಿಸುವ ಕರ್ತವ್ಯ ನಮ್ಮೆಲ್ಲರಿಂದಾಗಬೇಕಾಗಿದೆ ಎಂದರು.
ನಗರಸಭಾ ಸದಸ್ಯ ಮಲ್ಲಣ್ಣ ಅಂಗಡಿ ಮಾತನಾಡಿ, ತಪ್ಪು ಕಲ್ಪನೆ, ಸ್ವಾರ್ಥ ಮನೋಭಾವನೆ, ಅಧಿಕಾರದ ಲಾಲಸೆ ದ್ವೇಷ ವೈಶಮೈದಿಂದಾಗಿ ಇಂದು ಸಮಾಜದಲ್ಲಿ ಶಾಂತಿ, ನೆಮ್ಮದಿಗೆ ಭಂಗ ಬರುತ್ತಲ್ಲಿದೆ. ಪ್ರಜ್ಞಾವಂತರಾದ ನಾವೆಲ್ಲರೂ ಇಂತಹ ಸಾ ಮುದಾಯಕ ಕಾರ್ಯಗಳ ಮೂಲಕ ಭವಿಷ್ಯದ ಯುವ ಜನಾಂಗಕ್ಕೆ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹುಸೇನ್ ಸಾಬ್ ಬಿದರಿ, ಕರವೇ ಕೊಟ್ರೇಶಪ್ಪ ಎಮ್ಮಿ, ಸೇರಿದಂತೆ ವಿವಿಧ ಧರ್ಮಗಳ ಧರ್ಮ ಗುರುಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಪ್ರಧಾನ ಅಂಚೆ ಕಚೇರಿಯಿಂದ ಹೊರಟ ಸೌಹಾರ್ದತೆ ನಡಿಗೆ ಜನಜಾಗೃತಿ ಜಾತಾ ವು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜನತಾ ಬಜಾರ್ ಬಳಿ ಸಭೆಯಾಗಿ ಮಾರ್ಪಟಟು ಮಂಗಲ ಗೊಂಡಿತು ಎಸ್. ಎಸ್.ಎಫ್ -ಕ ರಾಜ್ಯ ಕಾರ್ಯದರ್ಶಿ ಜುನೈದ್ ಹಿಮಾಮಿ ಸಖಾಫಿ ಸ್ವಾಗತಿಸಿದರು. ಕೆ. ಕೆ.ಅಶ್ರಫ್ ಹಿಮಮಿ ಸಖಾಫಿ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 