ಆನ್ ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಿ : ಮಹೇಂದ್ರ ಜೈನ್
ಬೆಂಗಳೂರು, ಏ 3, ವಿದ್ಯುತ್ ಉತ್ಪಾದಕರಿಗೆ ಹಣ ಪಾವತಿಸಲು ಹಾಗೂ ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡಲು ಅನುವಾಗುವಂತೆ ಗ್ರಾಹಕರು ಆನ್‌ಲೈನ್, ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಬೇಕೆಂದು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದ್ದಾರೆ. ಗ್ರಾಹಕರು ಮೂರು ತಿಂಗಳ ಅವಧಿಗೆ ಬಿಲ್ ಪಾವತಿಸುವುದನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಬಿಲ್ ಪಾವತಿಯ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ ಮಾಹೆಯ ಮಾಸಿಕ ಮಾಪಕ ಓದುವಿಕೆ ಹಾಗೂ ಬಿಲ್ ವಿತರಣೆಯನ್ನು ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ ಬಿಲ್‌ನ್ನು ನೀಡುವ ಮೂಲಕ ನಿರ್ವಹಿಸಲಾಗುವುದು. ಹಾಲಿ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಎಲ್ಲಾ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಬಿಲ್‌ನ್ನು ಇ-ಮೇಲ್, ಎಸ್‌ಎಮ್‌ಎಸ್, ಪಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು. ಗ್ರಾಹಕ ಸಹಾಯವಾಣಿ ೧೯೧೨ ಕ್ಕೆ ಕರೆ ಮಾಡಿ, ಅಕೌಂಟ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ ಬಿಲ್ ವಿವರಗಳನ್ನು ಪಡೆಯಬಹುದು ಎಂದಿದ್ದಾರೆ.
ಅಲ್ಲದೇ ವಿದ್ಯುತ್ ಸರಬರಾಜು ಕಂಪನಿಯ ಮೊಬೈಲ್ ಆಪ್, ಜಾಲತಾಣದಲ್ಲಿ ನೋಂದಾಯಿಸಿಕೊಂಡು ಸಹ ಬಿಲ್ ವಿವರಗಳನ್ನು ಪಡೆಯಬಹುದಾಗಿದೆ. ಗ್ರಾಹಕರು ಸಂಬಂಧಪಟ್ಟ ಉಪವಿಭಾಗ ಕಛೇರಿಯನ್ನು ಸಂಪರ್ಕಿಸಿ ಬಿಲ್ ವಿವರಗಳನ್ನು ಪಡೆಯಬಹುದಾಗಿದೆ. ಆನ್‌ಲೈನ್ ಪಾವತಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ಜಾಲತಾಣ, ಕರ್ನಾಟಕ-೧ ರ ಜಾಲತಾಣ, ಮೊಬೈಲ್ ಆಪ್‌ಗಳಲ್ಲಿ ಬಿಬಿಪಿಎಸ್ ಮೂಲಕ ಪಾವತಿಸಬಹುದು. ಈ ಎಲ್ಲಾ ಬ್ಯಾಂಕುಗಳ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ವಾಲೆಟ್ ಪೇಮೆಂಟ್, ಯುಪಿಐ ಪೇಮೆಂಟ್, ಪೇಯು ಆಪ್ ಹಾಗೂ ಐಎಂಐ ಮೊಬೈಲ್ ಆಪ್ ಇವುಗಳಲ್ಲಿ ಯಾವುದೇ ವಿಧಾನದ ಮೂಲಕ ಪಾವತಿಸಬಹುದಾಗಿದೆ ಎಂದಿದ್ದಾರೆ. ಯಾವುದೇ ಗ್ರಾಹಕರು ಬಿಲ್ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ, ಅಂತಹ ಗ್ರಾಹಕರು ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳ ಉಪವಿಭಾಗಾಧಿಕಾರಿಗಳ ಕಛೇರಿಗೆ ಲಿಖಿತ ಮನವಿ ಸಲ್ಲಿಸಲು ಕೋರಿದ್ದಾರೆ. ಈ ವಿಧಾನವು ಏಪ್ರಿಲ್ ತಿಂಗಳಿಗೆ ಮಾತ್ರ ಅನ್ವಯವಾಗಲಿದ್ದು, ಮೇ ನಿಂದ ಹಿಂದಿನಂತೆ ಮಾಪಕ ಓದುವಿಕೆ, ಬಿಲ್ ಹಂಚುವಿಕೆ ಹಾಗೂ ಬಿಲ್ ಸ್ವೀಕೃತಿ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು. ಸರಾಸರಿ ಬಿಲ್ಲಿನಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮುಂದಿನ ಮಾಹೆಯ ಬಿಲ್ಲಿನಲ್ಲಿ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 