ಪವಿತ್ರಾಗೆ ಪಿಎಚ್‌ಡಿ ಪದವಿ

ಪವಿತ್ರಾಗೆ ಪಿಎಚ್‌ಡಿ ಪದವಿ Pavitra gets PhD degree

ಲೋಕದರ್ಶನ ವರದಿ 

ವಿಜಯಪುರ  27: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಪವಿತ್ರ ಎನ್ ಅವರು ಸಲ್ಲಿಸಿದ್ದ “ಇನ್ಫು-್ಲಯೆನ್ಸ್‌ ಆಫ್ ಮಾರ್ಫಲಜಿಕಲ್ ಕ್ಯಾರೆಕ್ಟರ್‌ಸ್ಟಿಕ್ಸ್‌ ಆನ್ ಸೆಲೆಕ್ಟೆಡ್ ಫಸಿಕಲ್ ಆ್ಯಂಡ್ ಫಿಜಿಯೋಲಾಜಿಕಲ್ ವೇರಿಯಬಲ್ಸ್‌ ಆಫ್ ಸ್ಪೋರ್ಟ್ಸ್‌ ವುಮನ್‌” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.   ಪವಿತ್ರ ಎನ್ ಅವರು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ. ಸಕ್ಪಾಲ್ ಹೂವಣ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಪವಿತ್ರ ಎನ್ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.