ವಿದ್ಯಾರ್ಥಿಗಳ ಜೀವನದಲ್ಲಿ ರಾಷ್ಟ್ರಭಕ್ತಿ ರಾಷ್ಟ್ರೇ್ರಮ ಬೆಳಸಿಕೊಳ್ಳಬೇಕು: ಶ್ರೀ ಲಕ್ಷ್ಮಣ ಗುಂಥಾ
Patriotism and nationalism should be inculcated in the lives of students: Shri Lakshman Guntha
ಹಾವೇರಿ 18: ವಿಕಸಿತ ಭಾರತ ಅನೇಕ ವಿಷಯಗಳಲ್ಲಿ ಅಭಿವೃದ್ದಿ ಸಾಧಿಸುತ್ತಿದ್ದು, ಅದು ಅಭಿವೃದ್ದಿ ಹೊಂದಿದ ರಾಷ್ಟ್ರವೆನಿಸಿಕೊಳ್ಳಲು ಯುವಜನಾಂಗ ಕೌಶಲ್ಯ ಪರಿಣಿತಿ ಪಡೆಯುವುದರ ಜೊತೆಗೆ ನಿರಂತರ ಶ್ರಮವಹಿಸಬೇಕೆಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ದೆಹಲಿ ಇದರ ಸಂಘಟನಾ ಕಾರ್ಯದರ್ಶಿಗಳಾಗಿರುವ ಶ್ರೀ ಲಕ್ಷ್ಮಣ ಗುಂಥಾರವರು ತಿಳಿಸಿದರು. ಅವರು ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಪರಂಪರೆ ಕೂಟವು ಆಯೋಜಿಸಿದ್ದ ಭರತ ವರ್ಷದ ಅದಮ್ಯ ಸ್ಪೂರ್ತಿ, ಪರಾಕ್ರಮ ಹಾಗೂ ಪರಚಿಂತನೆಗಳ ಪ್ರತೀಕದಂತಿರುವ ಮೂವರು ಮಹಾನ್ ಮಹಿಳಾ ಹೋರಾಟಗಾರರ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರಾಷ್ಟ್ರಭಕ್ತಿ ರಾಷ್ಟ್ರೇ್ರಮ ಬೆಳಸಿಕೊಳ್ಳಲು ಇತಿಹಾಸದಲ್ಲಿ ಆಗಿಹೋದ ಮಹನೀಯರ ಸಾಧನೆಗಳ ಕುರಿತು ತಿಳಿದು ಕೊಳ್ಳುವಂತೆ ಸೂಚಿಸಿದರು. ಈ ವಿಚಾರ ಸಂಕಿರಣದಲ್ಲಿ ಆಶಯ ಭಾಷಣ ಮಾಡಿದ ಹಾವೇರಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳಾದ ಶ್ರೀಮತಿ ಯಶೋಧಾ ವಂಟಗೋಡಿ ಹೆಣ್ಣುಮಕ್ಕಳಿಗೆ ಯಾವುದೇ ಅವಕಾಶ ಇಲ್ಲದಿದ್ದ ಸಂದರ್ಭದಲ್ಲಿಯೂ ತಮ್ಮ ಪರಾಕ್ರಮ ಹಾಗೂ ಉದಾತ್ತತೆಗಳ ಮೂಲಕ ಇತಿಹಾಸದಲ್ಲಿ ಪ್ರಖ್ಯಾತಿ ಪಡೆದ ಮಹಿಳಾ ರಾಣಿಯರನ್ನು ಆದರ್ಶವಾಗಿಟ್ಟುಕೊಂಡು ವಿಧ್ಯಾರ್ಥಿಗಳು ಸ್ಪಷ್ಟ ಉನ್ನತ ಗುರಿಯನ್ನು ಹೊಂದಿ ಸಾಧನೆಯತ್ತ ಸಾಗುವಂತೆ ಕರೆಯಿತ್ತರು.
ನಂತರ ಉಪನ್ಯಾಸ ನೀಡಿದ ಬೆಂಗಳೂರಿನ ರಾಜ್ಯ ಮಹಿಳಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ, ಸಿ ವಿ. ಶೈಲಜಾ ಹಾಗೂ ನಗರದ ಎಂ ಆರ್.ಎಂ ಕಾಲೇಜಿನ ಚೇರಮನ್ ಡಾ. ರಾಮ ಮೋಹನ ರಾವ್ ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದ ಆರಂಭಿಕ ಹೋರಾಟಗಾರರಲ್ಲಿ ಕಿತ್ತೂರಿನ ರಾಣಿ ಚನ್ನಮ್ಮ ಅದ್ವಿತೀಯಳಾಗಿದ್ದಾಳೆ. ಕಿತ್ತೂರು ಸಂಸ್ಥಾನವನ್ನು ಬ್ರಿಟೀಷರಿಂದ ರಕ್ಷಿಸುವುದಕ್ಕಾಗಿ ಅವರ ವಿರುದ್ದ ಜೀವನದ ಹಂಗು ತೊರೆದು ಹೋರಾಡಿರುವುದು ಅವಳ ಸ್ವಾಭಿಮಾನ ಹಾಗೂ ಶೌರ್ಯಕ್ಕೆ ಸಾಕ್ಷಿಯಾಗಿದೆ ಎಂದರು. ತತ್ವಜ್ಞಾನಿ ರಾಣಿ ಎಂದು ಪ್ರಸಿದ್ಧರಾದ ಮಾಳ್ವಾದ ಮರಾಠಾ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಪ್ರತಿಪಾದಿಸಿದ ಮೌಲ್ಯಗಳು, ಜಾರಿಗೊಳಿಸಿದ ಸುಧಾರಣೆಗಳು, ನಿರ್ಮಿಸಿದ ಅನೇಕ ದೇವಾಲಯಗಳು, ಧರ್ಮಶಾಲೆಗಳು ಮತ್ತು ಸಾರ್ವಜನಿಕ ಕಾರ್ಯಗಳು ಅವರು ಮಹಾನ್ ರಾಣಿಯಾಗಿದ್ದಕ್ಕೆ ಸಾಕ್ಷಿಯಾಗಿ ನಿಂತಿವೆ. ಕಾಶಿ ವಿಶ್ವನಾಥ ದೇವಾಲಯ ಹಾಗೂ ಗುಜರಾತ್‌ನ ಸೋಮನಾಥ ದೇವಾಲಯದ ನಾಶವಾದಾಗ, ಅದನ್ನು ಪುನರ್ನಿರ್ಮಿಸಿದವರು ಅಹಲ್ಯಾಬಾಯಿ ಹೋಳ್ಕರ್. ಇವರ ಜೀವನವು ಸಮಾಜಕ್ಕೆ ಮಾರ್ಗದರ್ಶನದ ದಾರೀದೀಪವಾಗಿದೆ ಎಂದರು. ಮತ್ತೊಬ್ಬ ರಾಣಿ ಉಳ್ಳಾಲದ ಅಬ್ಬಕ್ಕರಾಣಿ ಚೌಟ ತನ್ನ ಪತಿಯೇ ತನ್ನ ವಿರುದ್ದ ಒಳಸಂಚು ರೂಪಿಸಿ ವೈರಿಗಳನ್ನು ಸೇರಿದರೂ ಧೃತಿಗೆಡದೇ ಛಲದಿಂದ ತನ್ನ ರಾಜ್ಯ ರಕ್ಷಣೆಗಾಗಿ ವಿದೇಶಿಗರಾಗಿದ್ದ ಪೋರ್ಚುಗೀಸರ ವಿರುದ್ಧ ಹಲವಾರು ಯುದ್ದಗಳನ್ನು ಮಾಡಿದಳು. ಸ್ವಾಭಿಮಾನ, ಸ್ವಾತಂತ್ರ್ಯ, ರಾಜತಾಂತ್ರಿಕತೆಯ ಸಂಕೇತವಾಗಿದ್ದ ಅಬ್ಬಕ್ಕ ತುಳುನಾಡಿನ ವೀರರಾಣಿಯಾಗಿ ಮಿಕ್ಕ ಅರಸರಿಗಿಂತ ಬೇರೆಯಾಗಿ ನಿಲ್ಲುತ್ತಾಳೆ ಎಂಬುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಂಜುನಾಥ ಹೊಳ್ಳಿಯವರ ರಾಜ್ಯ ರಕ್ಷಣೆಗೆ ರಾಣಿಯರು ಮಾಡಿದ ಹೋರಾಟಗಳು ಹಾಗೂ ಜನತೆಯ ಕಲ್ಯಾಣಕ್ಕಾಗಿ ಕೈಕೊಂಡ ಕ್ರಮಗಳು ಉದಾತ್ತವಾಗಿವೆ. ಇಂತಹ ಮಹಿಳಾ ಮಣಿಗಳ ಹೋರಾಟ ಇಂದಿನ ಯುವಜನಾಂಗಕ್ಕೆ ಸ್ಪೂರ್ತಿದಾಕವಾಗಿದ್ದು, ವಿದ್ಯಾರ್ಥಿಗಳಲ್ಲಿ ರಾಷ್ಟ್ರೇ್ರಮ ರಾಷ್ಟ್ರಭಕ್ತಿ ಮೂಡಿಸುವಲ್ಲಿ ಪ್ರೇರಕವಾಗಲಿ ಎಂಬುದಾಗಿ ಆಶಿಸಿದರು. ಕು. ಸಮಷ್ಠಿ ಹಾಗೂ ಸಂಗಡಿಗರು ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ. ಶಿವಯೋಗಿ ಕೋರಿಶೆಟ್ಟರ ಸರ್ವರನ್ನು ಸ್ವಾಗತಿಸಿದರು. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ಬೆಂಗಳೂರಿನ ಸಂಚಾಲಕರಾದ ಡಾ. ಶಿವಪೂಜಿ ಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯ್ ಕ್ಯೂ ಎ ಸಿ ಸಂಯೋಜಕರಾದ ಶ್ರಿಮತಿ. ರೂಪಾ ಕೋರೆ ಅತಿಥಿಗಳನ್ನು ಪರಿಚಯಿಸಿದರು. ಪರಂಪರೆ ಕೂಟದ ಸಂಚಾಲಕರಾದ ಡಾ. ಶರಣಪ್ಪ ಜಗ್ಗಲ್, ಡಾ. ಮಹಾಂತೇಶ ಕುತನಿ, ಪ್ರೊ. ಕೃಷ್ಣಾ ಎಲ್ ಎಚ್. ಪ್ರೊ. ನಾಗರಾಜ ಮುಚ್ಚಟ್ಟಿ ಹಾಜರಿದ್ದರು. ಶ್ರೀಮತಿ ಚೇತನಾ ಪರ್ಪನವರ ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಇದರಲ್ಲಿ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 