ಬಡವರಿಗಾಗಿ ಆಸ್ಪತ್ರೆ ಕಟ್ಟಿಸಿದ ಪಾಟೀಲರ ಸಂಕಲ್ಪವು ಮಾದರಿಯಾಗಿದೆ: ಗವಿಶ್ರೀ ಗಳು
Patil's resolve to build a hospital for the poor is exemplary: Gavishris
ಕೊಪ್ಪಳ 08: ಕಿಡ್ನಿ ಕಸಿಗಾಗಿ ತಾವು ಎದುರಿಸಿದ ತೊಂದರೆಯು ಬೇರೆ ಯಾರಿಗೂ ಬರಬಾರದು ಎಂದು ಯೋಚಿಸಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ಕಟ್ಟಿಸಿದ ಹುಲಕೋಟಿಯ ಕೆ ಎಚ್ ಪಾಟೀಲ ಅವರ ಸತ್ ಸಂಕಲ್ಪ ಇತರರಿಗೆ ಮಾದರಿಯಾಗಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ದಿ ರೂರಲ್ ಮೆಡಿಕಲ್ ಸರ್ವೀಸ್ ಸೊಸೈಟಿಯ ಕೆ ಎಚ್ ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಗದಗ್ ಜಿಲ್ಲೆಯ ಹುಲಕೋಟಿಗೆ ಜೂನ್ 07ರಂದು ಭೇಟಿ ನೀಡಿ ಅವರು ಹಿತವಚನ ನೀಡಿದರು.ಬಡವರು ಅಂದರೆ ದುಡ್ಡು ಇಲ್ಲದೇ ಇರೋರಲ್ಲ. ಒಳ್ಳೆಯ ಸಂಕಲ್ಪ ಇಲ್ಲದೇ ಇರುವವರು ಮಾತ್ರ ಬಡವರು. ಅಂದು ಕೆ ಎಚ್ ಪಾಟೀಲ ಅವರು ಉತ್ತಮ ಸಂಕಲ್ಪ ಹೊಂದಿದ್ದರಿಂದಾಗಿ ನಿರ್ಮಾಣಗೊಂಡ ಈ ಆಸ್ಪತ್ರೆಯಿಂದ ಕಡು ಬಡವರಿಗೆ ಕಿಡ್ನಿ ಕಸಿಗೆ ಅನುಕೂಲವಾಗಿದೆ.
ಮನುಷ್ಯನಿಗೆ ಇಂತಹ ವಿಚಾರ, ಸತ್ ಸಂಕಲ್ಪ ಇರಬೇಕು ಎಂದು ಶ್ರೀಗಳು ಹೇಳಿದರು.ಅಪಘಾತ ಸಂಭವಿಸಿ, ನಗರಕ್ಕೆ ತುರ್ತಾಗಿ ಕರೆದೊಯ್ಯಲು ಆಗದ್ದಕ್ಕೆ ತನ್ನ ಪತಿಯನ್ನು ಕಳೆದುಕೊಂಡ ಕಾಯಿಪಲ್ಲೆ ಮಾರುವ ಹೆಣ್ಣು ಮಗಳೊಬ್ಬಳು ತಾನು ಕಾಯಿಪಲ್ಲೇ ಮಾರಿದ ಅಲ್ಪ ಹಣ ಕೂಡಿಟ್ಟು ಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸುತ್ತಾಳೆ. ನನ್ನ ನೋವು ಬೇರೆಯವರು ಪಡಬಾರದು ಎಂದು ಆಸ್ಪತ್ರೆ ಕಟ್ಟಿಸಿದ ಅಂತಹ ಮಹಿಳೆಯ ಉತ್ತಮ ಗುಣವನ್ನು ನಾವುಗಳು ಹೊಂದಬೇಕು.ಊಟ ಮಾಡುವಾಗ ಕಲ್ಲು ಬಂದರೆ ಅದನ್ನು ತೆಗೆದು ಊಟ ಮಾಡುತ್ತೇವೆ. ಅದರಂತೆ ಕನಸು ಕಟ್ಟುವಾಗ ನೂರಾರು ತೊಂದರೆಗಳು ಎದುರಾಗುತ್ತವೆ.
ಅದನ್ನು ಎದುರಿಸಿ ಕನಸುಗಳ ಸಾಕಾರಕ್ಕೆ ಶ್ರಮಿಸಬೇಕು ಎಂದು ಗವಿಶ್ರೀ ಸಲಹೆ ಮಾಡಿದರು.ಕ್ಯಾನ್ಸರದಿಂದ ಬಳಲುತ್ತಿದ್ದ ರಮಣ ಮಹರ್ಷಿಗಳು ಉದುರುತ್ತಿದ್ದ ಹುಳುಗಳನ್ನು ಮತ್ತೆ ಕೈಗೆ ಹಾಕಿಕೊಂಡು ಅರಿಬಿ ಸುತ್ತುತ್ತಿದ್ದರು. ಸತ್ತರೆ ಈ ದೇಹ ಮಣ್ಣಾಗುತ್ತದೆ. ಬದುಕಿರುವ ತನಕ ಹುಳುಗಳಾದರು ನನ್ನ ದೇಹ ತಿಂದು ಬದುಕಲಿ ಎಂದು ಮಹರ್ಷಿಗಳು ಹೇಳುತ್ತಿದ್ದ ಮಾತುಗಳ ಹಿಂದಿನ ಭಾವನೆಯನ್ನು ನಾವು ಅರ್ಥೈಸಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.*ಪತ್ರಕರ್ತನ ಯೋಗಕ್ಷೇಮ ವಿಚರಣೆ*: ಆಸ್ಪತ್ರೆಗೆ ಆಗಮಿಸಿದ ವೇಳೆ ಮೊದಲಿಗೆ ಆಸ್ಪತ್ರೆ ಅಂಗಳದಲ್ಲಿ ಸಸಿ ನೆಟ್ಟ ಶ್ರೀಗಳು,
ಬಳಿಕ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡ ಪತ್ರಕರ್ತ ಕೊಪ್ಪಳ ಜಿಲ್ಲೆಯ ಹನುಮಂತ ಹಳ್ಳಿಕೇರಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ಕಿಡ್ನಿ ಕಸಿ ಮಾಡಿಕೊಂಡ ಇನ್ನೀತರರ ಯೋಗಕ್ಷೇಮ ವಿಚಾರಿಸಿದರು. ಬಹುವರ್ಷಗಳ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇದು ತಮಗೆ ಸಂತಷ ನೀಡಿದೆ ಎಂದು ಶ್ರೀಗಳು ತಿಳಿಸಿದರು.ಈ ವೇಳೆ ಆಸ್ಪತ್ರೆಯ ವೈದ್ಯರಾದ ಅವಿನಾಶ ಓದುಗೌಡ್ರ, ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವೇಮನ, ಜಿಲ್ಲೆಯ ಪತ್ರಕರ್ತರಾದ ರಾಜು ಹೆಬ್ಬಳ್ಳಿ, ಶರಣು ಪಾಟೀಲ, ಸುರೇಶ, ಕೊಪ್ಪಳ ಜಿಲ್ಲೆಯ ಪತ್ರಕರ್ತರಾದ ಹರೀಶ್ ಹೆಚ್ ಎಸ್., ಸಂತೋಷ ದೇಶಪಾಂಡೆ, ಮೌಲಾಹುಸೇನ್ ಬುಲ್ಡಿಯಾರ್ ಸೇರಿದಂತೆ ಇತರರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 