ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವದು ಮುಖ್ಯ: ಸಂಯುಕ್ತಾ ಪಾಟೀಲ
Participation is more important than winning or losing in sports: Samyukta Patil
ಲೋಕದರ್ಶನ ವರದಿ
ಕ್ರಿಕೆಟ್ ಪಂದ್ಯಾವಳಿ ಸಮಾರೋಪ : ಬಹುಮಾನ ವಿತರಣೆ
ಮಹಾಲಿಂಗಪುರ 22 : ಯಾವುದೇ ಕ್ರೀಡೆಗಳಲ್ಲಿ ಕೇವಲ ಸೋಲು-ಗೆಲುವಿನ ಲೆಕ್ಕಾಚಾರಕ್ಕಿಂತ ಭಾಗವಹಿಸಿ, ಏಕಾಗ್ರತೆಯಿಂದ ಆಟವಾಡುವದು ಬಹುಮುಖ್ಯ ಎಂದು ವಿಜಯಪುರ ಡಿಸಿಸಿ ಬ್ಯಾಂಕಿನ ನಿರ್ದೇಶಕಿ, ಬಾಗಲಕೋಟೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರಾದ ಸಂಯುಕ್ತಾ ಶಿ.ಪಾಟೀಲ ಹೇಳಿದರು.
ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಪವರ್ ಸ್ಟಾರ್ ಪುನೀತರಾಜಕುಮಾರ, ದಿ.ಜಾವೇದ ಬಾಗವಾನ ಅವರ ಸ್ಮರಣಾರ್ಥ 6 ದಿನಗಳ ಕಾಲ ಜಾಮಿಯಾ ಕ್ರಿಕೇಟ್ ಕ್ಲಬ್ ವತಿಯಿಂದ ಜರುಗಿದ ಬಾಗಲಕೋಟೆ ಪ್ರೇಮಿಯರ್ ಲೀಗ್ ಪಂದ್ಯಾವಳಿಯ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ಯುವಜನತೆಯ ನೆಚ್ಚಿನ ಆಟ ಕ್ರಿಕೆಟ್‌ಗೆ ಮನಸೋಲದವರೇ ಇಲ್ಲ.
ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಮತ್ತು ದೈಹಿಕ ಸದೃಡತೆ ಹೊಂದಲು ಪ್ರಯತ್ನಿಸಬೇಕು. ಮಹಾಲಿಂಗಪುರದಂತಹ ಹೊಬಳಿ ಭಾಗದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಹಾಗೂ ಗೆಳೆಯರ ಬಳಗದವರು ಆಯ್‌ಪಿಎಲ್ ಮಾದರಿಯಲ್ಲಿ ಬಾಗಲಕೋಟೆ ಪ್ರೇಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು ಸ್ವಾಗತಾರ್ಹ ಎಂದರು.
ಹೆಸ್ಕಾಂ ಸೆಕ್ಷನ್ ಆಪೀಸರ್ ರಾಜೇಶ ಬಾಗೋಜಿ, ಗೋಕಾಕನ ಸಂತೋಷ ಮಾಲಪಾನಿ,ತೇರದಾಳದ ಯುವ ಮುಖಂಡ ಸಚಿನ ಮುರಗುಂಡಿ, ಪತ್ರಕರ್ತ ಜಯರಾಮಶೆಟ್ಟಿ ಮಾತನಾಡಿ ಮಹಾಲಿಂಗಪುರ ಪಟ್ಟಣದಲ್ಲಿ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ, ಪ್ರಥಮ 2ಲಕ್ಷ, ದ್ವಿತೀಯ 1 ಲಕ್ಷ ಬಹುಮಾನ ಇಟ್ಟು, ಆಯ್‌ಪಿಎಲ್ ಮಾದರಿಯಲ್ಲೇ ಪಂದ್ಯಾವಳಿ ನಡೆಸಿದ ಬಸವರಾಜ ರಾಯರ ಹಾಗೂ ಸ್ನೇಹಿತರ ಬಳಗದ ಕ್ರೀಡಾಪ್ರೇಮವು ಮಾದರಿಯಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಅಧ್ಯಕ್ಷತೆವಹಿಸಿ ಮಾತನಾಡಿದರು. ಪುರಸಭೆ ಮಾಜಿ ಸದಸ್ಯೆ ಸವಿತಾ ರಾಯರ ಅವರು ಕಾಂಗ್ರೆಸ್ ಮಹಿಳಾ ಮುಖಂಡರಾದ ಸಂಯುಕ್ತಾ ಪಾಟೀಲ, ಕವಿತಾ ಕೊಣ್ಣೂರ ಅವರನ್ನು ಸನ್ಮಾನಿಸಿದರು.
ಗೋಕಾಕನ ಉದ್ಯಮಿ ಕಿಶೋರ ಭಟ್ಟ, ಸಮೀರ ಗೋಕಾಕ, ರಮೀಜ್ ಗೋಕಾಕ, ಶ್ರೀಶೈಲ ಭಜಂತ್ರಿ, ಅಶೋಕ ಜ.ಅಂಗಡಿ, ಶ್ರೀಶೈಲಗೌಡ ಪಾಟೀಲ, ಪಾಪಾ ನಾಲಬಂದ, ಹುಚ್ಚೇಶ ವಡ್ಡರ, ಶ್ರೀಕಾಂತ ಮಾಗಿ, ಇಸಾಕ ಐನಾಪೂರ, ಇಲಿಯಾಸ್ ಯಾದವಾಡ, ಜೀತು ಕೆಸರಗೊಪ್ಪ ಅತಿಥಿಗಳಾಗಿ ಬಾಗವಹಿಸಿದ್ದರು.
ಪಂದ್ಯಾವಳಿಯ ಸಂಘಟಕರಾದ ಮಹಾದೇವ ಕಡಬಲ್ಲವರ, ಸೈಯದ್ ಶೇಕ್, ಇಜಾಜ್ ಯಾದವಾಡ, ಆವೇಶ ನದಾಫ್, ಆಪ್ರೀದಿ ಫಕಾಲಿ, ಪ್ರಭು ನೀಲಾರಿ, ಅವಿನಾಶ ಜಾಧವ, ಯಾಸೀನ ಪಾಂಡು, ಸಾಜೀದ ಸಿಂದಗಿ, ಸಲ್ಮಾನ ಡಾಂಗೆ, ಮೋದಿನ ತಟಗಾರ, ಸಿಕಂದರ ಸಾಂಗ್ಲೀಕರ ಸೇರಿದಂತೆ ಹಲವರು ಇದ್ದರು. ಜಿಲ್ಲಾ ಕಾನಿಪ ಸದಸ್ಯ ಚಂದ್ರಶೇಖರ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿ-ವಂದಿಸಿದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 