ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ : ಕೆ.ಶ್ರೀನಿವಾಸರಾವ್

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ : ಕೆ.ಶ್ರೀನಿವಾಸರಾವ್  Participate in co-curricular activities alongside academics: K. Srinivasa Rao

ಲೋಕದರ್ಶನ ವರದಿ 

ಕಂಪ್ಲಿ 03 : ವಿದ್ಯಾರ್ಥಿಗಳು  ತಂದೆ-ತಾಯಿ,  ಗುರು-ಹಿರಿಯರಿಗೆ ಗೌರವ ನೀಡುವುದು ಕಲಿಯಬೇಕು. ಉತ್ತಮ ನಡವಳಿಕೆ, ಶಿಸ್ತು, ಪ್ರಾಮಾಣಿಕತೆ, ಕೌಶಲಗಳನ್ನು ಮೈಗೂಡಿಸಿಕೊಂಡು ಮುಂದೆ ಸಾಗಿದರೆ ಗುರಿ ತಲುಪಲು ಸಾಧ್ಯ ಎಂದು  ತಾಲೂಕು  ಗ್ಯಾರಂಟಿ ಯೋಜನೆಗಳ  ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್  ಹೇಳಿದರು.  ಪಟ್ಟಣದ ಷಾಮಿಯಾಚಂದ್ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.  ನಂತರ ಜವುಕು ಪ್ರೌಢಶಾಲ ಎಸ್ಡಿಎಂಸಿ ಅಧ್ಯಕ್ಷ ಪಕ್ಕೀರ​‍್ಪ ಕ್ರೀಡಾದ  ಧ್ವಜಾರೋಹಣ ಮಾಡಿದರು.  ತದನಂತರ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಎನ್‌.ಹಬೀಬ್ ರೆಹಮಾನ್, ಜಿಲ್ಲಾ ದೈಹಿಕ ಪರೀವೀಕ್ಷಕ ಕೊಟ್ಟೇಶಪ್ಪ, ತಾಲೂಕು ದೈಹಿಕ  ಪರೀವೀಕ್ಷಕಿ ಪದ್ಮಾರೆಡ್ಡಿ, ಕ್ರೀಡಾಕೂಟದ ಸಂಚಾಲಕ ಹೊಸಕೋಟೆ ಚಂದ್ರಶೇಖರ, ಇಸಿಒ ರೇವಣ್ಣ, ಸಿಆರ್‌ಪಿಗಳಾದ ಭೂಮೇಶ್ವರ, ಮುಖ್ಯಗುರು ರಾಮಚಂದ್ರರಾವ್, ಮುಖಂಡರಾದ ಎಂ.ಎ, ನಾಗನಗೌಡ, ಬಿ.ಸಿದ್ದಪ್ಪ, ಟಿ.ಎಂ.ಬಸವರಾಜ, ಗಂಗಾಧರ, ಬಸವರಾಜ,  ಸುಜಾತ, ಹನುಮಂತಪ್ಪ, ಗೀರೀಶ, ಹೊನ್ನಳ್ಳಿ ಗಂಗಾಧರ,  ರಮೇಶ ಶಿವಪೂರ, ಸೋಮಶೇಖರ, ಮೆಟ್ರಿ ಹೊನ್ನಳ್ಳಿ  ಶಿವಪುತ್ರ​‍್ಪ, ರಮೇಶ, ವಸಂತಕುಮಾರ, ಜಾಫರ್ ಸೇರಿದಂತೆ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.