ಕೃಷ್ಣಾ ಸಕ್ಕರೆ ಕಾರಖಾನೆಗೆ ಪರ್ಪ ಸವದಿ ಅಧ್ಯಕ್ಷರಾಗಿ 5 ನೇ ಬಾರಿಗೆ ಅವಿರೋಧ ಆಯ್ಕೆ
Parpa Savadi elected unopposed as the President of Krishna Sugar Factory for the 5th time
ಅಥಣಿ, 10 : ದೇಶದಲ್ಲಿ ಅತಿ ಹೆಚ್ಚು ಕಬ್ಬಿಗೆ ಬೆಲೆ ನೀಡಿದ್ದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ, ಸರ್ಕಾರದ ನಿರ್ದೇಶನದಂತೆ ಈ ಹಂಗಾಮಿಗೆ 3300 ಪ್ರತಿ ಟನ್ ಕಬ್ಬಿಗೆ ಬೆಲೆ ನೀಡಲು ನಿರ್ಧಾರ ಮಾಡಿದ್ದು, ಬರುವ ವರ್ಷಗಳಲ್ಲಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ರಾಜ್ಯದಲ್ಲೇ ಮಾದರಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಅಧ್ಯಕ್ಷ ಪರ್ಪ ಸವದಿ ಹೇಳಿದರು.
ಅಥಣಿ ತಾಲೂಕಿನ ಸಂಕೋನಹಟ್ಟಿ ಗ್ರಾಮದ ಬಳಿಯ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಕಚೇರಿಯಲ್ಲಿ ಸೋಮವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಪರ್ಪ ಸವದಿ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಹಾಗೂ ಶಂಕರ ವಾಘಮೋರೆ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಪರ್ಪ ಸವದಿ ಅವರು ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಕಳೆದ 20 ವರ್ಷಗಳಲ್ಲಿ ರಾಜ್ಯ ಮತ್ತು ದೇಶದಲ್ಲಿ ರೈತರ ಕಬ್ಬಿಗೆ ಹೆಚ್ಚು ಬೆಲೆಯನ್ನು ನೀಡಿ ರೈತರಿಗೆ ಸಹಕಾರಿಯಾಗಿದೆ. ಅಲ್ಲದೆ ಪ್ರಸಕ್ತ ವರ್ಷದಲ್ಲಿ ಕಾರ್ಖಾನೆಯ ಸರ್ವತೋಮುಖ ಬೆಳವಣಿಗೆಯನ್ನು ಮಾಡಲು ಹಾಗೂ ರೈತಾಪಿ ವರ್ಗದ ಕಬ್ಬು ನುರಿಸಿ ಉತ್ತಮ ಬೆಲೆ ನೀಡುಲು ಕ್ರಮ ಕೈಗೊಳ್ಳಲಾಗುವುದು ಎಂದರು. ಅಥಣಿ ಹಾಗೂ ಸುತ್ತಮುತ್ತಲಿನ ರೈತ ಬಾಂಧವರು ಕಾರ್ಖಾನೆಗೆ ಉತ್ತಮ ಗುಣಮಟ್ಟದ ಹೆಚ್ಚು ಇಳುವರಿ ಉಳ್ಳ ಕಬ್ಬನ್ನು ಸರಬರಾಜು ಮಾಡಿ ಕಾರ್ಖಾನೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಅಲ್ಲದೆ ಪಕ್ಕದ ಮಹಾರಾಷ್ಟ್ರದ ಹಲವು ಸಕ್ಕರೆ ಕಾರ್ಖಾನೆಗಳು ಕರ್ನಾಟಕದ ಕಬ್ಬನ್ನು ನುರಿಸಲು ಹೆಚ್ಚಿನ ಬೆಲೆ ನೀಡುವ ಆಮಿಷವನ್ನು ಒಡ್ಡುತ್ತಿದ್ದಾರೆ. ರೈತರಿಗೆ ತೂಕದಲ್ಲಿ ಮೋಸ ಆಗುವುದು ಖಚಿತ ಅಂತಹ ವಂಚನೆಗಳಿಗೆ ರೈತರು ಜಾಗರೂಕರಾಗಬೇಕು ಎಂದ ಅವರು ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಈ ವರ್ಷ ಎಂಟು ಲಕ್ಷ ಟನ್ ಕಬ್ಬನ್ನು ನುರಿಸುವ ಗುರಿಯನ್ನು ಹೊಂದಲಾಗಿದ್ದು ಇದರಿಂದ ಕಾರ್ಖಾನೆ ನಷ್ಟದಿಂದ ಲಾಭದ ಕಡೆಗೆ ಕೊಂಡೊಯ್ಯುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಂಕರ ವಾಘಮೋರೆ, ನಿರ್ದೇಶಕ ಶಾಂತಿನಾಥ ನಂದೇಶ್ವರ, ಗುರುಬಸು ತೆವರಮನಿ, ಘೋಳಪ್ಪ ಜತ್ತಿ, ದಯಾ ಕುಲಕರ್ಣಿ, ಸುನಂದಾ ನಾಯಿಕ, ಸೌರಭ ಪಾಟೀಲ, ಸಿದ್ರಾಯ ನಾಯಿಕ, ರಮೇಶ ಪಟ್ಟಣ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಗೊಟಖಿಂಡಿ, ಹಣಮಂತ ಜಗದೇವ, ವ್ಯವಸ್ಥಾಪಕ ನಿರ್ದೆಶಕ ಜಿ ಎಮ್ ಪಾಟೀಲ, ಮುಖಂಡರಾದ ಮಲ್ಲೇಶ ಸವದಿ, ಶ್ರೀಶೈಲ ನಾಯಿಕ, ಶಿವಾನಂದ ಸವದಿ, ರಾಮಣ್ಣ ಗುಮತಾಜ, ಶಿವಾನಂದ ಗುರುಬಾವಿ, ಲೋಕೇಶ ಪಾಟೀಲ, ಸಿಬ್ಬಂದಿಗಳಾದ ಸುರೇಶ ಠಕ್ಕಣ್ಣವರ, ಶಂಕರ ಗೊಟಖಿಂಡಿ, ಹೆಚ್ ಡಿ ಧರಿಗೌಡರ ಸೇರಿದಂತೆ ಕಾರಖಾನೆಯ ಸಿಬ್ಬಂದಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 