ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಸಂಸತ್ ಚುನಾವಣೆ
Parliamentary elections at Sangameshwar High School
ತಾಳಿಕೋಟಿ 17: ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಪ್ರೌಢಶಾಲೆಯಲ್ಲಿ 2025-2026ನೇ ಸಾಲಿನ ಶಾಲಾ ಸಂಸತ್ತಿನ ಚುಣಾವಣೆ ಬುಧವಾರ ನಡೆಸಲಾಯಿತು.
ಚುನಾವಣೆಯ ಮತಗಟ್ಟೆ ಅಧಿಕಾರಿಗಳಾಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ ಕಾರ್ಯ ನಿರ್ವಹಿಸಿದರು. ಉಪಮತಗಟ್ಟೆ ಅಧಿಕಾರಿಗಳಾಗಿ ಎಸ್.ವಿ.ಜಾಮಗೊಂಡಿ, ಸಹಾಯಕ ಮತಗಟ್ಟೆ ಅಧಿಕಾರಿಗಳಾಗಿ ಎಸ್.ಗುಡಗುಂಟಿ, ಬಿ.ಆಯ್.ಹಿರೇಹೊಳಿ, ಚುಣಾವಣೆ ಕಾರ್ಯ ನಿರ್ವಹಿಸಿದರು. ಸಿಬ್ಬಂದಿಗಳಾದ ಎಚ್.ಬಿ.ಪಾಟೀಲ, ಎಮ್.ಎಸ್. ರಾಯಗೊಂಡ, ಯು.ಎಚ್.ಗಟನೂರ, ಕಾಶೀನಾಥ
ನಾಲತವಾಡ, ಚುನಾವಣೆ ಕಾರ್ಯಕ್ಕೆ ಸಹಾಯ ಮಾಡಿದರು. ಎಂಟನೇ ತರಗತಿಯ ವರ್ಗ ಪ್ರತಿನಿಧಿಯಾಗಿ ಅನುಶಾ ಚಲವಾದಿ, ನಿತಿನ ರಾಠೋಡ, ಒಂಬತ್ತನೇ ತರಗತಿಯಲ್ಲಿ ವರ್ಗ ಪ್ರತಿ ನಿಧಿಯಾಗಿ ವಿನೋದ ರಾಠೋಡ, ಚಂದ್ರಕಲಾ ದ್ಯಾಸರ,
ಹತ್ತನೇ ತರಗತಿಯಲ್ಲಿ ವರ್ಗ ಪ್ರತಿನಿಧಿಯಾಗಿ ಯಮನಪ್ಪ ಹಡಗಿನಾಳ, ಕಾಂಚನಾ ಚಲವಾದಿ, ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ
ಅರ್ಜುನ ಜಾಧವ, ಪೂಜಾ ಪೂಜಾರಿ ಆಯ್ಕೆಗೊಂಡ ಪ್ರಯುಕ್ತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ಪಾಟೀಲ (ಬಾವೂರ) ಯುವ ಕಾರ್ಯದರ್ಶಿ ಸಚಿನ ಎಚ್.ಪಾಟೀಲ ಆಡಳಿತಾಧಿಕಾರಿ ಕಿರಣ ಎಚ್.ಪಾಟೀಲ ಪ್ರೌಢಶಾಲೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 