ಪೋಲಿಯೊ ಲಸಿಕೆ ಹಾಕಿಸಲು ಪೋಷಕರಿಗೆ ಕರೆ
Parents urged to get polio vaccination
ಬ್ಯಾಡಗಿ 29: ಪೋಲಿಯೊ ರೋಗವು ಜೀವನಪರ್ಯಂತ ಅಂಗವೈಕಲ್ಯ ಉಂಟುಮಾಡುವ ಅಪಾಯಕಾರಿ ವೈರಸ್ ಸೋಂಕಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ, ಸಮಯಕ್ಕೆ ಸರಿಯಾಗಿ ಪೋಲಿಯೊ ಹನಿ ಹಾಕಿಸುವುದರ ಮೂಲಕ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಭಾರತವು ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಲಾಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಪೋಲಿಯೊ ಹನಿ ಅಭಿಯಾನ ಜಾರಿಯ ಲ್ಲಿದೆ. ಪೋಷಕರು ತಮ್ಮ ಐದು ವರ್ಷ ವಯಸ್ಸಿನ ಒಳಗಿನ ಮಕ್ಕ ಳಿಗೆ ಎರಡು ಹನಿ ಲಸಿಕೆ ಹಾಕಿಸಲು ಮರೆಯ ಬಾರದು ಎಂದು ನಾಗರಾಜ ಗುತ್ತಲ ಹೇಳಿದರು.
ತಾಲೂಕಿನ ಅಗಸನಹಳ್ಳಿ ಗ್ರಾಮದ ಅಂಗನವಾಡಿ 1.2 ಕೆಂದ್ರದಲ್ಲಿ ಇಂದು ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನ ಕಾರ್ಯಕ್ರಮವನ್ನು ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಈರಣ್ಣ ಹುಲಗೆಜ್ಜಿ.ಗುಡ್ಡಪ್ಪ ಕನವಳ್ಳಿ.ದಯಾನಂದ ಚೌಡಪ್ಪನವರ.ಹನುಮಂತಪ್ಪ ಮಡಿವಾಳರ.ರಮೇಶ ಗಾಜೇರ. ಬೋಜರಾಜ ಬಣಕಾರ. ಮಂಜುನಾಥ ಬೇಳಕೆರಿ. ಮದೇವಪ್ಪ ಗೌಡ್ರು.ಶಾಂತವ್ವ ಬೇಳಕೆರಿ. ಶಶಿಕಲಾ ಬೇಳಕೆರಿ.ಅಂಗನವಾಡಿ ಕೆಂದ್ರದ ಶೋಭಾ ಕ್ಯಾತಗೌಡ್ರ.ರಾಜೇಶ್ವರಿ ಶಿದ್ದನಗೌಡ್ರ.ಲಕ್ಷೀ ಚೌಟಿ.ಬಸಮ್ಮ ಚೌಟಿ.ಸವಿತಾ ಬಮ್ಮನಹಳ್ಳಿ.ಲಕ್ಷೀ ಮಡಿವಾಳರ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 