ಪಾಲಕರು ಮಕ್ಕಳಿಗೆ ಸಮಯ ಕೊಡಬೇಕು: ಬಬಲೇಶ್ವರ
Parents should give time to children: Babaleshwar
ಲೋಕದರ್ಶನ ವರದಿ
ಜಮಖಂಡಿ 25: ಪಾಲಕರು ಮಕ್ಕಳಿಗೆ ಸಮಯ ಕೊಡಬೇಕು, ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಅಂದಾಗಮಾತ್ರ ಒಬ್ಬ ಉತ್ತಮ ಪ್ರಜೆಯನ್ನಾಗಿ ರೂಪಿಸಬಹುದು ಎಂದು ರಾಜ್ಯ ಬಾಲವಿಕಾಸ ಅಕಾಡಮಿಯ ಅಧ್ಯಕ್ಷ ಸಂಗಮೇಶ.ಎ.ಬಬಲೇಶ್ವರ ಹೇಳಿದರು.
ನಗರದ ರಾಯಲ್ ಪ್ಯಾಲೇಸ್‌ಶಾಲೆ ಮತ್ತು ಪಿಯು ಕಾಲೇಜಿನ 21ನೇಯ ರಾಯಲ್ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ತಂದೆ-ತಾಯಿಗಳನ್ನು ಅನುಕರಣೆ ಮಾಡುವ ಗುಣವಿರುತ್ತದೆ. ಯಾವಾಗಲು ಮಕ್ಕಳು ಗಮನಿಸುತ್ತಿರುತ್ತಾರೆ ಉತ್ತಮ ನಡುವಳಿಕೆ, ಆಚರಣೆಗಳನ್ನು ಮಾಡುತ್ತಿದ್ದರೆ ಮಕ್ಕಳಲ್ಲಿ ಸಂಸ್ಕಾರದಿಂದ ಬೆಳೆಯುತ್ತದೆ. ಅಜ್ಜ ಅಜ್ಜಿಯರ ಜೊತೆಗೆ ಮಕ್ಕಳನ್ನು ಬೆಳೆಯಲು ಬಿಡಬೇಕು ಶಿಕ್ಷಕರು ಮತ್ತು ಪಾಲಕರು ಮಕ್ಕಳನ್ನು ಸಿದ್ಧ ಪಡಿಸುವ ಶಿಲ್ಪಿಗಳಾಗಬೇಕು. ಬಾಲವಿಕಾಸ ಅಕಾಡಮಿಯ ವತಿಯಿಂದ ಅನಾಥ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೊತ್ಸಾಹಿಸುವ ಕೆಲಸ ನಡೆದಿದೆ. ರಾಜ್ಯಾದ್ಯಂತ 128 ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದರು.
ದಿ. ಸಿದ್ದು ನ್ಯಾಮಗೌಡರ ಕನಸಿನ ಕೂಸಾಗಿ ಬೆಳೆದ ರಾಯಲ್ ಪ್ಯಾಲೇಸ್ ಶಾಲೆ ಅರವಿನ ಅರಮನೆಯಾಗಿ ಬೆಳೆದಿದ್ದು ಸಂತಸ ತಂದಿದೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭಕೊರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ನಮ್ಮ ಶಾಲೆಯಲ್ಲಿ ಕಲಿತ ಮಕ್ಕಳು 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದ್ದಾರೆ. ಶೇಕಡಾ 95ಕ್ಕೂ ಹೆಚ್ಚು ಅಂಕಗಳನ್ನು 7 ಜನ ಪಡೆದರೆ, ಶೇ.90 ರಷ್ಟು ಅಂಕಗಳನ್ನು 16 ಜನ ಪಡೆದಿದ್ದಾರೆ. ಶೇಕಡಾ 80 ರಷ್ಟು 27ಜನ, ಶೇ.70ರಷ್ಟು 16ಜನ ವಿದ್ಯಾರ್ಥಿಗಳು ಸ್ಕೊರ ಮಾಡಿದ್ದಾರೆ. ಜೊತೆಗೆ ಕ್ರೀಡಾಕೂಟಗಳಲ್ಲೂ ನಮ ್ಮಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದು 16 ವರ್ಷ ವಯೋಮಿತಿಯಲ್ಲಿ ಇಬ್ಬರು ಮಕ್ಕಳು ಕ್ರಿಕೇಟ್‌ನಲ್ಲಿ (ಕೆಎಸ್‌ಸಿಎ) ಆಯ್ಕೆಯಾಗಿದ್ದಾರೆ. ಶಿಕ್ಷಕರು ಪಾಲಕರು ಸೇರಿ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಬಹುದು ಎಂದರು.
ವೇದಿಕೆಯ ಮೇಲೆ ಸುಮಿತ್ರಾ ಸಿದ್ದು. ನ್ಯಾಮಗೌಡ, ಶಾಲೆಯ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ, ಪದವಿ ಕಾಲೇಜಿನ ಪ್ರಾಂಶುಪಾಲ ಎನ್.ಎಮ್.ರೊಳ್ಳಿ, ಪ್ರಾಚಾರ್ಯ ರೀಟಾ ಜೈನರ ಇದ್ದರು. ಸಾಧನೆ ಮಾಡಿದ ಮಕ್ಕಳನ್ನು ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 