ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೂ ಪಾಲಕರ ಪ್ರೋತ್ಸಾಹ ಅಗತ್ಯ: ಬಾಲನಟಿ ಶರ್ವರಿ
Parents need to encourage children's extracurricular activities too: Child actress Sharvari
ಹುಬ್ಬಳ್ಳಿ 26 : ವಿದ್ಯಾರ್ಥಿಗಳಿಗೆ ಓದು ತುಂಬಾ ಮುಖ್ಯ, ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ ಎಂದು ಬಾಲನಟಿ ಹಾಗೂ ಕುಮಾರಿ ಶರ್ವರಿ ವಿ. ಹೇಳಿದರುಇಲ್ಲಿನ ಲಿಂಗರಾಜ ನಗರ ದಸರಾ 2025ರ ನಾಲ್ಕನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಶರ್ವರಿ, ಪಾಲಕರು ಮಕ್ಕಳ ಮೇಲೆ ಕೇವಲ ಮಾರ್ಕ್ಸ ಗಳಿಸಲು ಒತ್ತಡ ಹಾಕದೆ, ಅವರು ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪ್ರೋತ್ಸಾಹಿಸಲು ಮನವಿ ಮಾಡಿದರು.
ನವರಾತ್ರಿಯಂಥ ಹಬ್ಬಗಳಲ್ಲಿ ಮಕ್ಕಳಿಗೆ ವೇದಿಕೆ ಒದಗಿಸಿಕೊಡುವ ಲಿಂಗರಾಜ ನಗರ ನಾಗರಿಕರ ಕಾರ್ಯವನ್ನು ಪ್ರಶಂಸಿಸಿದ ಶರ್ವರ ನವರಾತ್ರಿಯ ಒಂದೊಂದು ದಿನದ ಆಚರಣೆಗೂ ವಿಶೇಷ ಮಹತ್ವ ಇದೆ, ಈ ಮಹತ್ವವನ್ನು ಮಕ್ಕಳಿಗೆ ಅವರದೇ ಭಾಷೆಯಲ್ಲಿ ತಿಳಿಸಿಕೊಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಬಡಾವಣೆಯ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶಾಲೆಯಲ್ಲಿ ನಾವು ಯಾವಾಗಲೂ ಒಳ್ಳೆಯವರೊಂದಿಗೆ ಸ್ನೇಹ ಮಾಡಬೇಕು; ಪರೀಕ್ಷೆ ಬಂದಾಗ ಮಾತ್ರ ಓದದೆ ವರ್ಷದುದ್ದಕ್ಕೂ ನಿಯಮಿತವಾಗಿ ಓದುತ್ತಿರಬೇಕು; ಹಾಗೆ ಮಾಡಿದಾಗ ಮಾತ್ರ ನಮ್ಮ ಪಠ್ಯೇತರ ಚಟುವಟಿಕೆಗಳು ನಮ್ಮ ಓದಿಗೆ, ಭವಿಷ್ಯಕ್ಕೆ ಪೂರಕವಾಗುತ್ತವೆ ಎಂದು ಕಿವಿಮಾತು ಹೇಳಿದರು. ’777 ಚಾರ್ಲಿ’ ಸಿನಿಮಾದಲ್ಲಿ ನಾಯಿಯ ಜೊತೆ ನಟನೆಯ ಅನುಭವದ ಬಗ್ಗೆ ಹೇಳುತ್ತ, ಪ್ರಾಣಿಗಳಿಗೆ ನಾವು ಪ್ರೀತಿ ತೋರಿದರೆ, ಅವುಗಳೂ ನಮ್ಮನ್ನು ಪ್ರೀತಿಯಿಂದ ನೋಡುತ್ತವೆ ಎಂದರು.ನಂತರ ಲಿಂಗರಾಜನಗರದ ಮಕ್ಕಳಿಂದ ನಾಟಕ, ಕರಾಟೆ ಪ್ರದರ್ಶನ, ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರಂಭದಲ್ಲಿ ಕು. ಅವನಿ ಪಾಟೀಲ ಸ್ವಾಗತಿಸಿದರೆ, ಕು. ಅಂಜಲಿ ಮರಕಟ್ಟಿ ಹಾಗೂ ಕು. ಶ್ರೀನಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 