ಡಿಸೇಲ್ ಸುರಿದು ಮಗನನ್ನೇ ಸಜೀವ ದಹನಗೊಳಿಸಿದ ಹೆತ್ತವರು
Parents burn their Son alive
ಜಮಖಂಡಿ 08: ತಾಲೂಕಿನ ಬಿದರಿ ಗ್ರಾಮದಲ್ಲಿ ಹೆತ್ತ ತಂದೆ, ತಾಯಿ ಹಾಗೂ ಸಹೋದರ ಬಿಎಸ್‌ಎಫ್ ಯೋಧ ಸೇರಿಕೊಂಡು ಡಿಸೇಲ್ ಸುರಿದು ಮಗನನ್ನೇ ಸಜೀವ ದಹನ ಮಾಡಿದ ಧಾರುಣ ಘಟನೆ ನಡೆದಿದೆ.
ಬಿದರಿ ಗ್ರಾಮದ ಅನೀಲ ಕಾನಟ್ಟಿ (32) ಸಜೀವ ದಹನದಲ್ಲಿ ಸಾವನ್ನಪ್ಪಿದ ದುರ್ದೈವಿ. ತಂದೆ ಪರ್ಪ, ತಾಯಿ ಶಾಂತಾ, ಸಹೋದರ ಬಸವರಾಜ ಮೂವರು ಸೇರಿಕೊಂಡು ಡಿಸೇಲ್ ಸುರಿದು ಸಜೀವ ದಹನ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ.
ಬಿದರಿ ಗ್ರಾಮದ ಅನೀಲ ಕಾನಟ್ಟಿ (32) ಮದ್ಯ ವ್ಯಸನಿಯಾಗಿದ್ದು. ನಿತ್ಯವೂ ತಂದೆ-ತಾಯಿಯೊಂದಿಗೆ ಜಗಳವಾಡುತ್ತಿದ್ದು. ಆತನ ಕಿರುಕುಳ ತಾಳದೆ ಕುಟುಂಬಸ್ಥರು ಬೇಸತ್ತು ಹೋಗಿದ್ದರು. ಆತನು ಕುಡಿದು ಬಂದು ಜಗಳಕ್ಕಿಳಿದಾಗ ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಅನೀಲನ ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ. ನಂತರ ಆತನ ಮೇಲೆ ಡಿಸೇಲ್ ಸುರಿದು ಸಜೀವವಾಗಿ ದಹಿಸಿದ್ದಾರೆ ಎಂದು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಜಿಲ್ಲಾ ಎಸ್‌ಪಿ, ಸಿದ್ದಾರ್ಥ ಗೋಯಲ್, ಡಿಎಸ್‌ಪಿ, ರೋಷನ್ ಜಮೀರ ಸೈಯದ ಅವರ ಮಾರ್ಗದರ್ಶನದಲ್ಲಿ ಸಿಪಿಐ, ಮಲ್ಲಪ್ಪ ಮಡ್ಡಿ, ಸಾವಳಗಿ ಪಿಎಸ್‌ಐ, ಅಪ್ಪು ಐಗಳಿ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿರುತ್ತದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 