ಪಾಲಕರಿಂದು ಅಂಕಗಳ ಬೆನ್ನು ಹತ್ತಿ ನೈತಿಕ ಶಿಕ್ಷಣ ಮರೆತ್ತಿದ್ದಾರೆ: ಪ್ರೊ. ಯಾವಗಲ್ಲ
Parents are forgetting moral education in the name of grades: Prof. Yagagalla
ಬೆಳಗಾವಿ 26 - ಪಾಲಕರಿಂದು ಅಂಕಗಳ ಬೆನ್ನು ಹತ್ತಿ ಉತ್ತಮ ನಡವಳಿಕೆ, ಚಾರಿತ್ರ್ಯ ಶಿಕ್ಷಣವನ್ನು ಮರೆಯುತ್ತಿದ್ದಾರೆ. ನಾವು ಇಂದು ಭದ್ರ ಮುನಾದಿಯಿಲ್ಲದ ಶಿಕ್ಷಣದ ಸೌದವನ್ನು ಕಟ್ಟುತ್ತಿದ್ದೇವೆ. ಮೊಬೈಲ್, ಆದುನಿಕ ಜೀವನದ ಬೆನ್ನು ಹತ್ತಿ ಮಕ್ಕಳು ನೈತಿಕತೆಯಿಂದ ದೂರ ಮಾಡುತ್ತಿದ್ದೇವೆ ಎಂದು ನಿವೃತ್ತ ಪ್ರಾಚಾರ್ಯರಾದ ಪ್ರೊ. ಎಂ.ಎಸ್. ಯಾವಗಲ್ ಇಂದಿಲ್ಲಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ದಿ.25 ಗುರುವಾರದಂದು 98 ನೇ ನಾಡಹಬ್ಬ ಉತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ “ಕುಗ್ಗುತ್ತಿರುವ ಸಾಹಿತ್ಯಿಕ್ ಸಾಂಸ್ಕೃತಿಕ ಆಸಕ್ತಿ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತ ನಿವೃತ್ತ ಪ್ರಾಚಾರ್ಯರಾದ ಪ್ರೊ.ಯಾವಗಲ್ಲ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮಂದೆ ಮಾತನಾಡುತ್ತ ಪ್ರೊ. ಯಾವಗಲ್ಲ ಅವರು ಹೆತ್ತ ತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಶ್ರೇಷ್ಠ ಎಂದು ಹಿರಿಯರು ಹೇಳುತ್ತಾರೆ. ಹೆತ್ತ ತಾಯಿಯ ಗರ್ಭದಿಂದ ಭೂಮಿಗೆ ಬರುತ್ತದೆ. ಹೊತ್ತ ತಾಯಿಯ ಗರ್ಭವನ್ನು ಸೇರುತ್ತದೆ. ಗರ್ಭದಿಂದ ಗರ್ಭ ಸೇರುವ ಮಧ್ಯದಲ್ಲಿರುವ ಜೀವನ ಅರ್ಥಪೂರ್ಣವಾಗಿರಬೇಕು. ಸಾರ್ಥಕ ಜೀವನವಾಗಿರಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿಯವರು ವಾತಾವರಣಕ್ಕೆ ತಕ್ಕಂತೆ ನಮ್ಮ ಬದುಕು ರೂಪುಗೊಳ್ಳುತ್ತಿರುತ್ತದೆ. ಇಂದಿನ ಕಾಲಕ್ಕೆ ತಕ್ಕಂತೆ ಮಕ್ಕಳು ಬದಕುತ್ತಿದ್ದಾರೆ. ಇಂದಿನ ಕಾಲಕ್ಕೆ ತಕ್ಕಂತೆ ಮಕ್ಕಳು ಬದಕುತ್ತಿದ್ದಾರೆ. ಮೊಬೈಲ್ ಕಂಪ್ಯೂಟರ್ ಜೊತೆ ಜೊತೆಗೇನೆ ಒಳ್ಳೆಯ ಸಂಸ್ಕಾರವನ್ನು ಕೊಡುವಂತಹ ಶಿಕ್ಷಣವನ್ನು ನೀಡಬೇಕಾಗುತ್ತದೆ. ವಾಸ್ತವಿಕತೆಗೆ ತಕ್ಕಂತೆ ವಿಚಾರ ಮಾಡುವುದನ್ನು ಹಿರಿಯರು ಕಲಿಯಬೇಕು ಎಂದು ಹೇಳಿದರು.
ಡಾ. ನಿರ್ಮಲಾ ಬಟ್ಟಲ ಅವರು ಮಾತನಾಡುತ್ತ ಸಾಂಸ್ಕೃತಿ ಆಸಕ್ತಿಗಳು ಪರ್ಯಾಯ ರೂಪವನ್ನು ಪಡೆದುಕೊಂಡು ಹೊರಬರುತ್ತಲಿವೆ ಅವು ಕುಗ್ಗುತ್ತಿವೆ ಎಂದು ನನಗನ್ನಿಸುವುದಿಲ್ಲ. ಯುವ ಪೀಳಿಗೆಯಲ್ಲಿ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ ಆಸಕ್ತಿ ಮರುಕಳಸುತ್ತಲಿದೆ. ಬೆಳಗಾವಿಯಲ್ಲಿಯೇ ನಾಟಕ, ಸಂಗೀತ, ನೃತ್ಯ, ಸಾಹಿತ್ಯ ಹೀಗೆ ಎಲ್ಲದಕ್ಕೂ ವೇದಿಕೆಗಳಿಗೆ ಪಾಲಕರೂ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಿದರು.
ಭಾರತಿ ಇಂಗಳಿಗೆ ತಂಡದವರು ಹಾಡಿದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ಸಿ. ಕೆ. ಜೋರಾಪುರ ಸ್ವಾಗತಿಸಿದರು. ಡಾ. ಎಚ್.ಬಿ.ರಾಜಶೇಖರ, ಶ್ರೀಮತಿ ಸುಧಾ ಪಾಟೀಲ, ಯೋಗೇಶ ತಳವಾರ, ರಾಜು ಕಣ್ಣಪ್ಪನವರ, ಕೆಂಪಣ್ಣ ಕೊಣ್ಣೂರ ಉಪಸ್ಥಿತರಿದ್ದರು. ಬಸವರಾಜ ಗಾರ್ಗಿ ನಿರೂಪಿಸಿದರು. ವಿರುಪಾಕ್ಷಯ್ಯ ನೀರಲಗಿಮಠ ವಂದಿಸಿದರು. ರವಿ ಕಲಾಮಂದಿರ ನೃತ್ಯಾಲಯ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 