ಪಾಲಕರುಹಿಪೋಷಕರು ಮತ್ತು ವಿದ್ಯಾರ್ಥಿಗಳು : ಭವಿಷ್ಯದ ನಿರ್ಮಾಣದಲ್ಲಿ ಸಮನ್ವಯದ ಸೇತುವೆ

ಪಾಲಕರುಹಿಪೋಷಕರು ಮತ್ತು ವಿದ್ಯಾರ್ಥಿಗಳು : ಭವಿಷ್ಯದ ನಿರ್ಮಾಣದಲ್ಲಿ ಸಮನ್ವಯದ ಸೇತುವೆ  Parents and Students: A Bridge of Harmony in Building the Future

ಗಂಗಾವತಿ 04: ಪ್ರಸ್ತುತ ಜಗತ್ತಿನಲ್ಲಿ ಶಿಕ್ಷಣವನ್ನು ಬಹುಮಟ್ಟಿಗೆ ಅಂಕಗಳ ಅಳತೆಯಲ್ಲಿ ಮಾತ್ರ ಪರಿಗಣಿಸುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಶಿಕ್ಷಣದ ನಿಜಸ್ವರೂಪ ಅಂಕಪಟ್ಟಿಯಲ್ಲಿ ಅಳೆಯಲಾಗದು. ಅದು ವ್ಯಕ್ತಿತ್ವದ ಬೆಳವಣಿಗೆ, ಚಿಂತನೆಯ ಸ್ಪಷ್ಟತೆ, ಮೌಲ್ಯಗಳ ಅರಿವು ಮತ್ತು ಸಮಾಜದತ್ತ ಜವಾಬ್ದಾರಿಯ ಮನೋಭಾವ ರೂಪಿಸುವ ಮಹತ್ತರ ಯಾತ್ರೆ. 

ಈ ಯಾತ್ರೆಯಲ್ಲಿ ಮೂರು ಪ್ರಮುಖ ಅಸ್ತಂಬಗಳು ಹಿ ಪಾಲಕರು, ಪೋಷಕರು ಮತ್ತು ವಿದ್ಯಾರ್ಥಿಗಳು. ಇವರು ಪರಸ್ಪರ ಸಹಕಾರದಿಂದ ಸಾಗಿದಾಗ ಮಾತ್ರ ಭವಿಷ್ಯ ದೃಢವಾಗುತ್ತದೆ. ಇಲ್ಲದಿದ್ದರೆ ಪ್ರಯತ್ನಗಳಿದ್ದರೂ ಫಲಿತಾಂಶ ಅಪೂರ್ಣವಾಗುತ್ತದೆ. 

1. ಕುಟುಂಬ ಹಿ ಶಿಕ್ಷಣದ ಮೂಲ ಬೇರು : 

ಮಗು ಶಾಲೆಯ ಗಡಿಪಾಯ ದಾಟುವ ಮೊದಲು ಮನೆಯಲ್ಲಿಯೇ ಮೊದಲ ಪಾಠ ಕಲಿಯುತ್ತದೆ. ಮಾತು, ನಡೆ, ಮೌಲ್ಯಗಳು, ಶಿಸ್ತು, ಪ್ರೀತಿ, ಗೌರವ ಇವೆಲ್ಲವು ಕುಟುಂಬದಿಂದಲೇ ಸಿಕ್ಕುವ ಧಾರ್ಮಿಕ-ನೈತಿಕ ಪಾಠಗಳು. ಪಾಲಕರು ಮಕ್ಕಳಿಗೆ ನೀಡುವ ಪ್ರೀತಿ ಕೇವಲ ಭಾವನಾತ್ಮಕ ಬೆಂಬಲವಲ್ಲ; ಅದು ಅವರ ಆತ್ಮವಿಶ್ವಾಸದ ಮೂಲಾಧಾರ. ಮನೆ ಒಂದು ಸುರಕ್ಷಿತ ವಾತಾವರಣವಾಗಿದ್ದರೆ, ಮಗು ಹೊರಗಿನ ಜಗತ್ತನ್ನು ಧೈರ್ಯದಿಂದ ಎದುರಿಸುತ್ತದೆ. ಮನೆಲ್ಲಿಯೇ ಸಂವಾದದ ವಾತಾವರಣ ಇಲ್ಲದಿದ್ದರೆ, ಮಗು ತನ್ನ ಸಂಕಟಗಳನ್ನು ಹಂಚಿಕೊಳ್ಳಲು ಹೆದರುತ್ತದೆ. ಹೀಗಾಗಿ, ಪಾಲಕರು ತಮ್ಮ ಮಕ್ಕಳಿಗೆ ಸಮಯ ಕೊಡಬೇಕು. ಹಣ, ಸೌಲಭ್ಯ, ಉತ್ತಮ ಶಾಲೆ ಇವು ಅಗತ್ಯ; ಆದರೆ ಅದಕ್ಕಿಂತ ಮುಖ್ಯವಾದುದು ಪಾಲಕರ ಸಾನ್ನಿಧ್ಯ. 

2. ಶಿಕ್ಷಣದ ನಿಜ ಉದ್ದೇಶ : 

ಶಿಕ್ಷಣವು ಉದ್ಯೋಗಕ್ಕಾಗಿ ಮಾತ್ರವಲ್ಲ; ಅದು ಉತ್ತಮ ಮಾನವನಾಗಿ ರೂಪುಗೊಳ್ಳಲು. ಅಂಕಗಳು ವಿದ್ಯಾರ್ಥಿಯ ಶ್ರಮದ ಫಲ; ಆದರೆ ವ್ಯಕ್ತಿತ್ವ ಅವನ ಜೀವನದ ನಿಜವಾದ ಸಂಪತ್ತು. ಸತ್ಯ, ನಿಷ್ಠೆ,  ಪರಿಶ್ರಮ , ಶಿಸ್ತು , ಸಹಾನುಭೂತಿ, ಜವಾಬ್ದಾರಿ ಈ ಗುಣಗಳು ಶಿಕ್ಷಣದ ಅಂತರಂಗ. ವಿದ್ಯಾರ್ಥಿ ವಿಜ್ಞಾನ, ಗಣಿತ, ಭಾಷೆಗಳನ್ನು ಕಲಿಯುವಷ್ಟೇ ಮೌಲ್ಯಗಳನ್ನು ಕಲಿಯಬೇಕು. ಪಾಲಕರು ತಮ್ಮ ನಡೆ-ನುಡಿಗಳ ಮೂಲಕ ಮಾದರಿಯಾಗಬೇಕು. ಮಕ್ಕಳು ಮಾತಿಗಿಂತ ನಡೆ ಅನುಸರಿಸುತ್ತಾರೆ. 

3. ಅಂಕಗಳ ಒತ್ತಡ ಹಿ ಒಂದು ತಾರ್ಕಿಕ ವಿಶ್ಲೇಷಣೆ : 

ಇಂದಿನ ಸಮಾಜದಲ್ಲಿ “ಎಷ್ಟು ಅಂಕ?” ಎಂಬ ಪ್ರಶ್ನೆ “ಏನು ಕಲಿತೆ?” ಎಂಬ ಪ್ರಶ್ನೆಯನ್ನು ಮೀರಿದೆ. ಈ ಮನೋಭಾವವೇ ಮಕ್ಕಳ ಮೇಲೆ ಅನಗತ್ಯ ಒತ್ತಡ ಉಂಟುಮಾಡುತ್ತದೆ. ಪಾಲಕರು ಮಕ್ಕಳನ್ನು ಇತರರೊಂದಿಗೆ ಹೋಲಿಸುವುದು ತಪ್ಪು. ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಸಾಮರ್ಥ್ಯವಿದೆ. ಹೋಲಿಕೆ ಆತ್ಮವಿಶ್ವಾಸ ಕುಗ್ಗಿಸುತ್ತದೆ; ಪ್ರೋತ್ಸಾಹ ಆತ್ಮವಿಶ್ವಾಸ ಬೆಳೆಸುತ್ತದೆ. ವಿದ್ಯಾರ್ಥಿಗಳು ಅಂಕಗಳಿಗಾಗಿ ಓದಲು ಬದಲಾಗಿ ಜ್ಞಾನಕ್ಕಾಗಿ ಓದಿದರೆ, ಅಂಕಗಳು ಸ್ವತಃ ಬರುತ್ತವೆ. ಒತ್ತಡದಿಂದ ಓದಿದ ಜ್ಞಾನ ತಾತ್ಕಾಲಿಕ; ಆಸಕ್ತಿಯಿಂದ ಓದಿದ ಜ್ಞಾನ ಶಾಶ್ವತ. 

4. ತಂತ್ರಜ್ಞಾನ - ಆಶೀರ್ವಾದವೇ? ಅಪಾಯವೇ? : 

ಮೊಬೈಲ್ ಫೋನ್, ಟಿವಿ, ಇಂಟರ್ನೆಟ್ ಇವು ಇಂದಿನ ಶಿಕ್ಷಣದ ಭಾಗ. ಸರಿಯಾಗಿ ಬಳಸಿದರೆ ಅವು ಜ್ಞಾನ ಸಾಗರ; ತಪ್ಪಾಗಿ ಬಳಸಿದರೆ ವ್ಯತ್ಯಯಗಳ ಕೇಂದ್ರ. 

ಸಿ ಪಾಲಕರ ಜವಾಬ್ದಾರಿ 

ಸಿ ಮಕ್ಕಳಿಗೆ ತಂತ್ರಜ್ಞಾನ ಬಳಕೆಯ ಮಿತಿ ನಿಗದಿ ಮಾಡುವುದು 

ಸಿ ಶಿಕ್ಷಣಾತ್ಮಕ ವಿಷಯಗಳತ್ತ ಮಾರ್ಗದರ್ಶನ 

ಸಿ ನಿಗಾ ಮತ್ತು ಸಂವಾದ 

ಸಿ ವಿದ್ಯಾರ್ಥಿಗಳ ಕರ್ತವ್ಯ 

ಸಿ ಸಮಯಪಾಲನೆ 

ಸಿ ಅನಾವಶ್ಯಕ ಬಳಕೆಯನ್ನು ತಗ್ಗಿಸುವುದು 

ಸಿ ಗುರಿ ಕೇಂದ್ರಿತ ಅಧ್ಯಯನ 

ಸಿ ತಂತ್ರಜ್ಞಾನವನ್ನು ನಿಯಂತ್ರಿಸಿದಾಗ ಅದು ಸಾಧನ; ನಿಯಂತ್ರಿಸದಿದ್ದರೆ ಅದು ಬಂಧನ. 

5. ಆರೋಗ್ಯ ಹಿ ಯಶಸ್ಸಿನ ಬೆನ್ನೆಲುಬು : 

ಅಧ್ಯಯನಕ್ಕೆ ಆರೋಗ್ಯ ಅವಶ್ಯ. ದೇಹ ಮತ್ತು ಮನಸ್ಸು ಸಮತೋಲನದಲ್ಲಿದ್ದರೆ ಮಾತ್ರ ಸಾಧನೆ ಸಾಧ್ಯ. 

* ನಿಯಮಿತ ವ್ಯಾಯಾಮ 

* ಪೌಷ್ಟಿಕ ಆಹಾರ 

* ಸಮರ​‍್ಕ ನಿದ್ರೆ 

* ಯೋಗ ಮತ್ತು ಧ್ಯಾನ 

ಪರೀಕ್ಷಾ ಸಮಯದಲ್ಲಿ ಹೆಚ್ಚು ಒತ್ತಡ ಕೊಡಬಾರದು. ‘ಪಾಸಾಗಬೇಕು’ ಎಂಬ ಮಾತಿಗಿಂತ ‘ಪ್ರಯತ್ನಿಸು’ ಎಂಬ ಮಾತು ಹೆಚ್ಚು ಶಕ್ತಿ ನೀಡುತ್ತದೆ 

6. ಶಿಕ್ಷಕರು ಮತ್ತು ಪಾಲಕರ ಸಹಕಾರ : 

* ಶಾಲೆ ಮತ್ತು ಮನೆ ಒಂದೇ ದಿಕ್ಕಿನಲ್ಲಿ ನಡೆದರೆ ವಿದ್ಯಾರ್ಥಿ ಗುರಿ ತಲುಪುತ್ತಾನೆ. ಶಿಕ್ಷಕರು ಜ್ಞಾನ ನೀಡುತ್ತಾರೆ; ಪಾಲಕರು     

  ಜೀವನ ಮೌಲ್ಯಗಳನ್ನು ಬೋಧಿಸುತ್ತಾರೆ. 

* ಪೋಷಕರ ಸಭೆಗಳಲ್ಲಿ ಪಾಲ್ಗೊಳ್ಳುವುದು, ಶಿಕ್ಷಕರೊಂದಿಗೆ ಸಂವಹನ, ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸುವುದು ಹಿ ಇವು 

  ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಪ್ರಮುಖ. 

7. ದುಶ್ಚಟಗಳು ಮತ್ತು ಯುವಜನತೆ : 

* ಯುವಜನತೆ ಕುತೂಹಲದಿಂದ ಕೆಲವು ಬಾರಿ ತಪ್ಪು ಮಾರ್ಗಕ್ಕೆ ತಿರುಗಬಹುದು. ಸ್ನೇಹಿತರ ಪ್ರಭಾವ, ಸಮಾಜದ ಒತ್ತಡ, 

  ತಾತ್ಕಾಲಿಕ ಆಕರ್ಷಣೆ - ಇವು ದುಶ್ಚಟಗಳಿಗೆ ಕಾರಣ. 

* ಪಾಲಕರು ಮಕ್ಕಳ ಸ್ನೇಹವಲಯ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು “ಇಲ್ಲ” ಎನ್ನುವ ಧೈರ್ಯ ಹೊಂದಬೇಕು. ಜೀವನದ    

  ಗುರಿ ಸ್ಪಷ್ಟವಾಗಿದ್ದರೆ ವ್ಯತ್ಯಯಗಳು ಕಡಿಮೆಯಾಗುತ್ತವೆ. 

8. ಸಂವಾದದ ಶಕ್ತಿ : 

* ಮನೆಗಳಲ್ಲಿ ಸಂವಾದದ ಕೊರತೆ ಸಮಸ್ಯೆಗಳ ಮೂಲ. ದಿನಕ್ಕೆ ಕನಿಷ್ಠ ಒಂದು ಗಂಟೆ ಕುಟುಂಬ ಸಂವಾದ , ಮಕ್ಕಳ 

  ಮಾತುಗಳನ್ನು ತಾಳ್ಮೆಯಿಂದ ಕೇಳುವುದು , ಟೀಕೆಗಿಂತ ಮಾರ್ಗದರ್ಶನ ನೀಡುವುದು, ಸಂವಾದವು ಸೇತುವೆ; ಮೌನವು 

  ಅಂತರ. 

9. ವಿಫಲತೆ ಹಿ ಪಾಠವೇ ಹೊರತು ಅಂತ್ಯವಲ್ಲ : 

* ವಿಫಲತೆ ಜೀವನದ ಭಾಗ. ಅದು ಒಂದು ತಾತ್ಕಾಲಿಕ ಸ್ಥಿತಿ; ಶಾಶ್ವತ ಗುರುತು ಅಲ್ಲ. ಪಾಲಕರು ವಿಫಲತೆಯಲ್ಲಿ ಮಕ್ಕಳಿಗೆ 

  ಬೆಂಬಲವಾಗಬೇಕು. ವಿದ್ಯಾರ್ಥಿಗಳು ತಪ್ಪುಗಳಿಂದ ಪಾಠ ಕಲಿಯಬೇಕು. ಯಶಸ್ಸಿಗಿಂತ ವಿಫಲತೆ ಹೆಚ್ಚು ಕಲಿಸುತ್ತದೆ. 

10. ವಿದ್ಯಾರ್ಥಿಗಳ ಜವಾಬ್ದಾರಿ : 

* ವಿದ್ಯಾರ್ಥಿಗಳು ತಮ್ಮ ಭವಿಷ್ಯದ ನಿರ್ಮಾತೃಗಳು., ಸಮಯಪಾಲನೆ , ನಿಯಮಿತ ಅಧ್ಯಯನ , ಗುರಿ ನಿಗದಿ , 

  ಆತ್ಮಪರೀಶೀಲನೆ, ಸ್ವಯಂಪ್ರೇರಣೆ ಇಲ್ಲದೆ ಹೊರಗಿನ ಪ್ರೋತ್ಸಾಹ ಪ್ರಯೋಜನಕಾರಿಯಲ್ಲ. 

11. ಗ್ರಾಮೀಣ ಮತ್ತು ನಗರ ಸವಾಲುಗಳು : 

* ಗ್ರಾಮೀಣ ಪ್ರದೇಶದಲ್ಲಿ ಸಂಪನ್ಮೂಲಗಳ ಕೊರತೆ ಇದ್ದರೂ ಪರಿಶ್ರಮ ಮತ್ತು ಶಿಸ್ತು ಗಟ್ಟಿಯಾಗಿರುತ್ತವೆ. ನಗರ ಪ್ರದೇಶದಲ್ಲಿ 

  ಸೌಲಭ್ಯಗಳಿವೆ; ಆದರೆ ವ್ಯತ್ಯಯಗಳೂ ಹೆಚ್ಚು. ಎರಡೂ ಕಡೆ ಸಮತೋಲನ ಮುಖ್ಯ. 

12. ಭವಿಷ್ಯದ ದೃಷ್ಟಿಕೋನ : 

ಒಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ, ಪ್ರತಿಯೊಂದು ಮನೆ ಶಿಕ್ಷಣದ ಮೌಲ್ಯ ಅರಿಯಬೇಕು, ಪಾಲಕರು ಪ್ರೀತಿ ಮತ್ತು ಶಿಸ್ತಿನ ಸಮತೋಲನ ಕಾಯ್ದುಕೊಳ್ಳಬೇಕು, ವಿದ್ಯಾರ್ಥಿಗಳು ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು, ಅಳವಡಿಸಿಕೊಳ್ಳಬೇಕು , ಶಾಲೆಗಳು ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. 

ಕೊನೆಯಲ್ಲಿ :  

ಪಾಲಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಮೂರು ಒಂದೇ ಸರಪಳಿಯ ಕೊಂಡಿಗಳು. ಒಂದು ಕೊಂಡಿ ದುರ್ಬಲವಾದರೆ ಸರಪಳಿ ತುಂಡಾಗುತ್ತದೆ. ಶಿಕ್ಷಣವು ಕೇವಲ ಅಂಕಗಳ ಸಾಧನೆ ಅಲ್ಲ; ಅದು ಮಾನವೀಯತೆ ಬೆಳೆಸುವ ಯಾತ್ರೆ. ಪ್ರೀತಿ, ಶಿಸ್ತು, ಸಂವಾದ ಮತ್ತು ಮೌಲ್ಯಗಳು ಇವುಗಳ ಸೇತುವೆಯ ಮೇಲೆ ಭವಿಷ್ಯ ನಿರ್ಮಾಣವಾಗುತ್ತದೆ. ಭವಿಷ್ಯ ಮಕ್ಕಳ ಕೈಯಲ್ಲಿದೆ; ಆದರೆ ಆ ಕೈಗಳಿಗೆ ದಿಕ್ಕು ತೋರಿಸುವ ಬೆಳಕು ಪಾಲಕರಿಂದಲೇ ಬರುತ್ತದೆ. ಅದೇ ಸಮನ್ವಯದ ಸೇತುವೆ ಅದು ದೃಢವಾಗಿದ್ದರೆ, ಸಮಾಜದ ಭವಿಷ್ಯವೂ ದೃಢವಾಗಿರುತ್ತದೆ. 

ಆತ್ಮೀಯ ಸಂಪಾದಕರೇ/ಸಹ ಸಂಪಾದಕರೇ 

ಇದು ಮಾರ್ಚ ತಿಂಗಳು. ವಿದ್ಯಾರ್ಥಿಗಳ ಪರೀಕ್ಷಾ ಸಮಯ. ವಿದ್ಯಾರ್ಥಿಗಳು, ಪಾಲಕರಿಗೆ ಒಂದು ಉತ್ತಮ ಸಂದೇಶ ಕೊಡುವ ಲೇಖನವಿದು. ನನ್ನ ಸ್ನೇಹಿತ ಶ್ರೀಕಾಂತ ಅವರು ಬರೆದ ಪರಿಣಾಮಕಾರಿ ಲೇಖನ. ದಯವಿಟ್ಟು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದರೆ ಓದುಗರಿಗೆ ಒಂದು ಉತ್ತಮ ಸಂದೇಶ ಕೊಟ್ಟಂತಾಗುತ್ತದೆ.