ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದು: ಸುಮಾ ಕಿತ್ತೂರ

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದು: ಸುಮಾ ಕಿತ್ತೂರ  Parents' role is important in shaping the future of their children: Suma Kittur

ಬೆಳಗಾವಿ 23 : ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು. ಪೋಷಕರು ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವ ಮೂಲಕ ಅವರ ಕಲಿಕೆ, ಕೌಶಲ್ಯಗಳು ಮತ್ತು ಮೌಲ್ಯಗಳನ್ನು ಹಂಚಿಕೊಳ್ಳಬೇಕು. ಈ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಕುಟುಂಬ ಬಾಂಧವ್ಯ ಬಲಪಡುತ್ತದೆ." ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ ಹೇಳಿದರು. 

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಲಾದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಲಿಂ, ಉಳವೀಶ ಹುಲೆಪ್ಪನವರಮಠ ದತ್ತಿ , ದಿ. ರಾಜಶೇಖರ ಎಸ್ ಕಿತ್ತೂರ ದತ್ತಿ, ಗಂಗಾ ಕಂಬಾರ ದತ್ತಿ, ದಿ.ಪ್ರಕಾಶ ನಾನಾ ಸಾಹೇಬ ದೇಶಪಾಂಡೆ ದತ್ತಿ ಅವರ ನಿಮಿತ್ತ ನಡೆದ ಚುಟುಕು, ವಾಚನ ಸ್ಪರ್ಧೆ ಹಾಗೂ ಸ್ವರಚಿತ ಭಾವಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿ ತಾಯಿಯಾದರೆ, ಆ ತಾಯಿಯ ಕನಸಿಗೆ, ಹೋರಾಟಕ್ಕೆ ಹೆಗಲು ಕೊಟ್ಟು, ಬೆಂಗಾವಲಾಗಿರುವುದು ತಂದೆ. ಹೀಗಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವವಾದದ್ದು. ಮಕ್ಕಳು ಶಿಕ್ಷಣ, ಸಮಾಜದಲ್ಲಿ ಹೇಗೆ ಬೆಳೆಬೇಕು ಎಂಬುವುದನ್ನು ಅಡಿಪಾಯ ಹಾಕಬೇಕು. ನಮ್ಮ ಭವಿಷ್ಯದ ಮೇಲೆ ಮಕ್ಕಳ ಭವಿಷ್ಯ ಅಡಗಿದೆ ಎಂದು ಅಭಿಪ್ರಾಯ ವ್ಯಕ್ತಪಸಿದರು. 

ಸ್ಪರ್ಧೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತವೆ. ತಮ್ಮ ಕವಿತೆಗೆ ತಾವೇರಾಗ ಸಂಯೋಜನೆ ಮಾಡಿ ಹಾಡಿದಾಗ ಅದರ ಅನುಭವ ಅದ್ಭುತವಾಗಿರುತ್ತದೆ. ಅಂತರಂಗದಲ್ಲಿ ಹುದುಗಿದ ಭಾವನೆಗಳು ಹಾಡಾದಾಗ ಅದರಲ್ಲಿನ ತಮ್ಮನದ ವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು. 

ಡಾ. ಗುರದೇವಿ ಹುಲೆಪ್ಪನವರಮಠ ಅವರು ಮಾತನಾಡಿ, ತಂದೆಯವರಾದ ಲಿಂ. ಉಳವೀಶ ಹುಲೆಪ್ಪನವರಮಠ ಅವರ ಬದ್ಧತೆಯ ಬದುಕು ಹಾಗೂ ಬರಹದ ಪರಿಚಯ ಮಾಡಿಕೊಟ್ಟರು. 

ಇನ್ನೋರ್ವ ದಾನಿಗಳಾದ ಯಮುನಾ ಕಂಬಾರ ಅವರು ತಮ್ಮ ತಾಯಿಯವರ ಸ್ಮರಣಾರ್ಥ ನೀಡಿದ ದತ್ತಿ ದಾನ ಲೇಖಕಿಯರ ಸಂಘದ ಕಾರ್ಯಕ್ರಮದಿಂದ ಸಾರ್ಥಕ ಗೊಂಡಿತು ಎಂದು ಹೇಳಿದರು. 

ಸ್ಪರ್ಧೆಯಲ್ಲಿ ವಿಜೇತರಾದ ಸದಸ್ಯರು: ಪ್ರಥಮ: ಪಾರ್ವತಿ ಪಾಟೀಲ್ , ದ್ವೀತಿಯ: ಸುನೀತಾ ನಂದೆನ್ನವರ , ತೃತೀಯ: ರಂಜಿತಾ ಮಹಾಜನ ಸಮಾಧಾನಕರ ವಿದ್ಯಾ ಹುಂಡೇಕರ , ಸರ್ವಮಂಗಳಾ ಅರಳಿಮಟ್ಟಿ ಹೀರಾ ಚೌಗಲೆ , ಪ್ರಭಾ ಪಾಟೀಲ ವಿಜೇತರಾದರು. 

ಆಶಾ ಸಂಸುದ್ದಿ , ರಂಜಿತಾ ಮಹಾಜನ, ಶುಭಾ ತೆಲಸಂಗ,ಪ್ರಭಾ ಪಾಟೀಲ, ದಾನಮ್ಮ ಅಂಗಡಿ , ಸುನೀತಾ ಸೊಲ್ಲಾಪುರೆ,ಗಂಗಾ ಚಕ್ರಸಾಲಿ, ಅಕ್ಕಮಹಾದೇವಿ ತೆಗ್ಗಿ , ವಿದ್ಯಾ ಹುಂಡೇಕರ , ಸುನೀತಾ ನಂದೆನ್ನವರ, ಸುನಂದಾ ಹಾಲಬಾವಿ, ಸರ್ವಮಂಗಳಾ ಅರಳಿಮಟ್ಟಿ , ಹೀರಾ ಚೌಗಲೆ, ಶಾಲಿನಿ ಚಿನವಾರ, ಪಾರ್ವತಿದೇವಿ ಪಾಟೀಲ್, ಸುಶೀಲಾ ಗುರವ ಚುಟುಕು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು 

ಭವ್ಯಾ ಸಂಪಗಾರ , ಶೈಲಜಾ ಕುಲಕರ್ಣಿ ,ಹೇಮಾ ಭರಭರೆ, ಅನ್ನಪೂರ್ಣಾ ಹಿರೇಮಠ, ಮಹಾನಂದಾ ಪರುಶೆಟ್ಟಿ, ರೂಪಾ ಹಿರೇಮಠ ಸ್ವರಚಿತ ಭಾವಗೀತೆ ಹಾಡಿದರು. 

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆಶಾ ಎಸ್ ಯಮಕನಮರಡಿ ಸ್ವಾಗತಿಸಿದರು. ಅಧ್ಯಕ್ಷ ಸುಮಾ ಕಿತ್ತೂರ, ಡಾ.ಗುರುದೇವಿ ಹುಲೆಪ್ಪನವರಮಠ, ನಿವೃತ್ತ ಪ್ರಾಚಾರ್ಯ ಬಿ ಎಸ್ ಗವಿಮಠ,ಯಮುನಾ ಕಂಬಾರ , ಸಂತೋಷ ದೇಶಪಾಂಡೆ, ಚುಟುಕು ಸ್ಪರ್ಧೆ ನಿರ್ಣಾಯಕರಾಗಿ ಪ್ರೋ.ರಾಜನಂದಾ ಗಾರ್ಗಿ , ಸುನಂದಾ, ಸುನೀತಾ, ಅನಿತಾ, ನಾಡಗೀತೆ ಹಾಡಿದರು. ಹಿರಿಯ ಸಂಗೀತಗಾರರಾದ ಶ್ರೀರಂಗ ಜೋಷಿ, ಹಿರಿಯ ಲೇಖಕಿಯರಾದ ಹಮೀದಾ ಬೇಗಂ ದೇಸಾಯಿ ಸಂಕೇಶ್ವರ, ಜ್ಯೋತಿ ಬದಾಮಿ,ಅನಿತಾ ದೇಸಾಯಿ, ಶ್ವೇತಾ ನರಗುಂದ,ಲಲಿತಾ ಕೋಪರ್ಡೆ,ಇಂದಿರಾ ಮೋಟೆಬೆನ್ನೂರ ಇತರರು ಇದ್ದರು. ಸುನೀತಾ ನಂದೇನ್ನವರ ನಿರೂಪಿಸಿದರು. ಮಮತಾ ಶಂಕರ ವಂದಿಸಿದರು.