ಸಾಮಾಜಿಕ ಪರಿಶೋಧನಾ ಸಮಿತಿಯಿಂದ ಪೋಷಕರ ಸಭೆ

ಸಾಮಾಜಿಕ ಪರಿಶೋಧನಾ ಸಮಿತಿಯಿಂದ ಪೋಷಕರ ಸಭೆ Parents' meeting by the Social Audit Committee

ದೇವರಹಿಪ್ಪರಗಿ  25: ತಾಲ್ಲೂಕಿನ ಮುಳಸಾವಳಗಿ ಸರಕಾರಿ ಪ್ರೌಢಶಾಲೆಯಲ್ಲಿ ಸಾಮಾಜಿಕ ಪರಿಶೋಧನಾ ಸಮಿತಿಯಿಂದ ಪೋಷಕರ ಸಭೆಯನ್ನು ಶುಕ್ರವಾರ ಆಯೋಜಿಸಲಾಗಿತ್ತು. ಸನ್ 2025ನೇ ಸಾಲಿನ  ಸಾಮಾಜಿಕ ಪರಿಶೋಧನೆಯ ಶಾಲಾ ಸಭೆಯನ್ನು ದೇವರಹಿಪ್ಪರಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಲಕ್ಷ್ಮಣ ಸಂಗೊಗಿ ಅವರ ಅಧ್ಯಕ್ಷತೆಯಲ್ಲಿ ತುಂಬಾ ಸಡಗರದಿಂದ ಹಮ್ಮಿಕೊಳ್ಳಲಾಯಿತು.ನಂತರ ಮಾತನಾಡಿದ ಅವರು,ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶಾಲೆಯ ಫಲಿತಾಂಶ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಒಳ್ಳೆಯ ವಾತಾವರಣ ಇದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾದ ದೇವರಹಿಪ್ಪರಗಿ ತಾ.ಪಂ ವ್ಯವಸ್ಥಾಪಕರಾದ ಬಸವರಾಜ.ಎಮ್‌.ಮದನಶೆಟ್ಟಿ ಅವರು ಮಾತನಾಡಿ, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ  ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ವಾಚನಾಲಯ, ಪ್ರೊಜೆಕ್ಟರ್ ಹಾಗೂ ಸ್ಮಾರ್ಟ್‌ ಕ್ಲಾಸ್ ಮೂಲಕ ಪಾಠ ಬೋಧನೆ, ಮಕ್ಕಳಿಗೆ ಸುರಕ್ಷತೆಯ ಭಾವನೆ, ದಾನಿಗಳ ಸಹಕಾರ, ವೃತ್ತಿಪರ ಮಾರ್ಗದರ್ಶನ, ವಿಶೇಷ ತರಗತಿ, ಸರಕಾರದ ಸೌಲಭ್ಯಗಳ ವಿತರಣೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಸಭೆಯಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಬೋಜನಾಲಯದ ಕೊರತೆ ಹೀಗೆ ಗಂಭೀರ ವಿಚಾರಗಳ ಮೇಲೆ ಚರ್ಚೆ ನಡೆಯಿತು.ಮೇಲಾಧಿಕಾರಿಗಳ ಗಮನಕ್ಕೆ ತಂದು ಶಾಲೆಯ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. 

ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಮನೋಹರ ಪೂಜಾರಿ, ಉಪಾಧ್ಯಕ್ಷರಾದ ಸಾಹೇಬಗೌಡ ನಾಗರಳ್ಳಿ, ಸದಸ್ಯರಾದ ಅರ್ಜುನ ಹಿಪ್ಪರಗಿ, ಶ್ರೀಶೈಲ ಹೊಸಮನಿ, ಸಿ.ಆರಿ​‍್ಪ ಶ್ರೀಶೈಲ ರೋಡಗಿ, ಮುಖ್ಯ ಗುರುಗಳಾದ ಈರಣ್ಣ.ಎಸ್‌.ನರೋಣಿ, ಶಿವಾನಂದ ಬಿರಾದಾರ, ದಾನಿಗಳಾದ ಬಸಗೊಂಡಪ್ಪ ರೋಡಗಿ,ಪಾಲಕರಾದ ಭೀಮು ಬಸರಕೋಡ,ಅರವಿಂದ ನಾಯ್ಕೋಡಿ ಸೇರಿದಂತೆ ಹಲವಾರು ಜನ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಸ್ವಾಗತವನ್ನು ಅರ್ಜುನ ವಾಲಿಕಾರ, ನಿರೂಪಣೆ ಪ್ರೇಮಸಿಂಗ ಜಾದವ ಹಾಗೂ ವಂದನಾರೆ​‍್ಣ ಎ.ಎ.ಗಚ್ಚಿಮಹಲ ಶಿಕ್ಷಕರು ನಡೆಸಿಕೊಟ್ಟರು. ವೇದಿಕೆಯ ಮೇಲೆ ಎಸ್ಡಿಎಂಸಿ ಅಧ್ಯಕ್ಷ ಮನೋಹರ ಪೂಜಾರಿ,ಉಪಾಧ್ಯಕ್ಷ  ಸಾಹೇಬಗೌಡ ನಾಗರಳ್ಳಿ, ಸದಸ್ಯರಾದ ಅರ್ಜುನ ಹಿಪ್ಪರಗಿ, ಶ್ರೀಶೈಲ ಹೊಸಮನಿ ಏಉಊಕಖ ಶಾಲೆಯ  ಶಿವಾನಂದ ಬಿರಾದಾರ ಮುಖ್ಯೋಪಾಧ್ಯಾಯ ಈರಣ್ಣ ಎಸ್ ನರೂಣಿ,ಅಖಕ ಶ್ರೀಶೈಲ ರೋಡಗಿ,ಹಿರಿಯ ಹಾಗೂ ದಾನಿಗಳಾದ  ಬಸಗೊಂಡಪ್ಪ ರೋಡಗಿ ಪಾಲ್ಗೊಂಡಿದ್ದರು. 

ದಿನಾಂಕ 22 ರಿಂದ 25 ಜುಲೈ 2025 ರವರೆಗೆ ಶಾಲಾ ಹಂತದ ಸಾಮಾಜಿಕ ಪರಿಶೋಧನೆ ನಡೆಸಲಾಯಿತು.ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಯ ಫಲಿತಾಂಶ  ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಒಳ್ಳೆಯ ವಾತಾವರಣ ಇದೆ ಎಂದು ಅಧ್ಯಕ್ಷತೆ ವಹಿಸಿದ ಲಕ್ಷ್ಮಣ ಸಂಗೋಗಿ ಸರ್ ತಿಳಿಸಿದರು.ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ  ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ವಾಚನಾಲಯ, ಪ್ರೊಜೆಕ್ಟರ್ ಹಾಗೂ ಸ್ಮಾರ್ಟ್‌ ಕ್ಲಾಸ್ ಮೂಲಕ ಪಾಠ ಬೋಧನೆ, ಮಕ್ಕಳಿಗೆ ಸುರಕ್ಷತೆಯ ಭಾವನೆ, ದಾನಿಗಳ ಸಹಕಾರ, ವೃತ್ತಿಪರ ಮಾರ್ಗದರ್ಶನ, ವಿಶೇಷ ತರಗತಿ, ಸರಕಾರದ ಸೌಲಭ್ಯಗಳ ವಿತರಣೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಉತ್ತಮ ಅಭಿಪ್ರಾಯವನ್ನು  ಬಸವರಾಜ ಮದನಶೆಟ್ಟಿ ಅವರು ವರದಿಯಲ್ಲಿ ತಿಳಿಸಿದರು.ಇದರಲ್ಲಿ ಮುಖ್ಯವಾಗಿ ಕುಡಿಯುವ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ವರದಿ ಬಂದಿದೆ ಕಾರಣ  ಗ್ರಾಮ ಪಂಚಾಯತಿಯಿಂದ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. 

ಗಂಡು ಮಕ್ಕಳಿಗೆ ಶೌಚಾಲಯ ಹಾಗೂ ಗಂಡು ಮಕ್ಕಳಿಗೆ ಶೌಚಾಲಯ ಕೊರತೆ ಇದೆ. ಬೋಜನಾಲಯವಾಗಬೇಕಿದೆ  ಹೀಗೆ ಕೊರತೆಗಳ ವಿಚಾರದಲ್ಲಿ ಗಂಬೀರ ಚರ್ಚೆಯಾಯಿತು. ಸಭೆಯಲ್ಲಿ ಇದ್ದ ಪಂಚಾಯತಿ ಲೆಕ್ಕ ಸಹಾಯಕರು ಸಭೆಯಲ್ಲಿ ಅಭಿವೃಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಮಾಡಿಕೊಡುವ ಬರವಸೆ ನೀಡಿದರು. ಪ್ರಯೋಗಾಲಯ ಮತ್ತು ಕಂಪ್ಯೂಟರ್ಗಳಿಗೆ ಕೊಠಡಿಗಳ ವ್ಯವಸ್ಥೆ, ಬೆಂಗಾವಲು ಭತ್ಯೆ ಬಗೆಗೆ, ಶಾಲಾ ಕಾಂಪೌಂಡ್ ದುರಸ್ತಿ,ಗೇಟ್ ಮತ್ತು ಸಿಸಿಟಿವಿ ಹಾಗೂ ವಾಚನಾಲಯಕ್ಕೆ ಕೊಠಡಿ ವ್ಯವಸ್ಥೆ ಬಗೆಗೆ ಸುಧೀರ್ಘ ಚರ್ಚೆಯಾಯಿತು. ಶಾಲೆಯ ಮಕ್ಕಳ ಕಲಿಕಾ ಮಟ್ಟ ಉತ್ತಮವಾಗಿದ್ದು ಇನ್ನಷ್ಟು ಸುಧಾರಿಸಲು ಈ ಸಂದರ್ಭದಲ್ಲಿ ಪಾಲಕರು ತಿಳಿಸಿದರು.ಪಾಲಕರಾದ ಭೀಮ್ಶ ಬಸರಕೋಡ್ ಹಾಗೂ ಅರವಿಂದನಾಯ್ಕೋಡಿ ಮತ್ತು ಇನ್ನಿತರರು ಮಾತನಾಡಿದರು.ಕಾರ್ಯಕ್ರಮದ ಸ್ವಾಗತವನ್ನು ಅರ್ಜುನ್ ಎಸ್ ವಾಲಿಕಾರ,  ನಿರೂಪಣೆ ಪ್ರೇಮಸಿಂಗ ಜಾದವ, ವಂದನಾರೆ​‍್ಣ ಎ ಎ ಗಚ್ಚಿನಮಾಲ ನಡೆಸಿಕೊಟ್ಟರು.