ಎಸ್ ಆರ್ ಎಮ್ ಕಾಲೇಜಿನಲ್ಲಿ ಪಾಲಕರ ಸಭೆ

ಎಸ್ ಆರ್ ಎಮ್ ಕಾಲೇಜಿನಲ್ಲಿ ಪಾಲಕರ ಸಭೆ  Parents' meeting at SRM College


ಯಮಕನಮರಡಿ, 06 : ಸ್ಥಳೀಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2025-26 ನೇ ಸಾಲಿನ ಪಾಲಕರ ಸಭೆ ಏರಿ​‍್ಡಸಲಾಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್‌.ಎ.ರಾಮನಕಟ್ಟಿ ವಹಿಸಿದ್ದರು. ಎಸ್‌.ಆರ್‌.ತಬರಿ ಸಭೆಯನ್ನು ಪ್ರಾರಂಭಿಸಿ ಗ್ರಾಮೀಣ ಭಾಗದಲ್ಲಿ ನಮ್ಮ ಕಾಲೇಜು ಯಾವುದೇ ಖಾಸಗಿ  ಕಾಲೇಜು ಗಳಿಗಿಂತ ಕಡಿಮೆಯಿಲ್ಲ ಇಲ್ಲಿ ಎಲ್ಲ ಸೌಲಭ್ಯಗಳು ಇದ್ದು ಇದನ್ನು ಬಡ ಪೋಷಕರ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.  

ಕಾಲೇಜು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಈರಣ್ಣ ಬಿಸಿರೊಟ್ಟಿ ಮಾತನಾಡಿ ಇಲ್ಲಿನ ಶಿಕ್ಷಕರು ಉತ್ತಮವಾಗಿ ಬೋದಿಸುತ್ತಿದ್ದು ಮಕ್ಕಳ ಪ್ರಗತಿ ಹಾಗೂ ದೈನಂದಿನ ಅಭ್ಯಾಸದ ಕುರಿತು ಮನೆಯಲ್ಲಿ ಪಾಲಕರು ಕಾಳಜಿ ವಹಿಸಬೇಕೆಂದು ತಿಳಿಸಿದರು.  

ಉಪನ್ಯಾಸಕರ ಬಿ.ಬಿ.ಕೊಡ್ಲಿ ಮಾತನಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಯಲ್ಲಿ ಶಿಕ್ಷಕರು ಹಾಗೂ ಪೋಷಕರ ಸಮಾನ ಜವಾಬ್ದಾರಿ ಯಿದ್ದು ಸಮೂಹ ಮಾಧ್ಯಮಗಳಿಂದ  ಮಕ್ಕಳನ್ನು ದೂರವಿಟ್ಟಲ್ಲಿ ಅವರ ಶೈಕ್ಷಣಿಕ ಪ್ರಗತಿ ಇನ್ನೂ ಉತ್ತಮ ಗೊಳ್ಳಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು. ನಂತರದಲ್ಲಿ ಭಾಗವಹಿಸಿದ್ದ ಪಾಲಕರು ಹಲವಾರು ಸಲಹೆ ಸೂಚನೆ ಹಾಗೂ ಅಭಿಪ್ರಾಯಗಳನ್ನು ತಿಳಿಸಿದರು. ಸಭೆಯಲ್ಕಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸಿದ್ದಪ್ಪ ಶಿಳ್ಳಿ, ಶಾಂತಕುಮಾರ ಹಾಲದೇವರಮಠ ಹಾಗೂ ಪಾರೇಶ ಮಲಾಜಿ ಭಾಗವಹಿದ್ದರು. ಸಭೆಯ ಕೊನೆಯಲ್ಲಿ ಎಸ್‌.ಆರ್‌. ತಬರಿ ವಂದನೆ ಸಲ್ಲಿಸಿದರು.