ದಲಿತ ಸಂಘರ್ಷ ಸಮಿತಿಯ ಗ್ರಾವ ಸಂಚಾಲಕರಾಗಿ ಪರಶುರಾಮ ಆಯ್ಕೆ
Parashuram elected as village coordinator of Dalit Sangharsh Samiti
ಕಂಪ್ಲಿ 20: ಪಟ್ಟಣದ ಅತಿಥಿ ಗೃಹದಲ್ಲಿ ಗುರುವಾರ ಸಂಜೆ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ)ಯ ತಾಲೂಕು ಸಂಚಾಲಕ ಹೆಚ್.ಗುಂಡಪ್ಪ ನೇತೃತ್ವದಲ್ಲಿ ಹಾಗೂ ತಾಲೂಕು ಸಂಘಟನಾ ಸಂಚಾಲಕ ಹೆಚ್.ಮರಿಯಪ್ಪ ಅವರ ಸಮ್ಮುಖದಲ್ಲಿ ಸಂಘಟನೆ ಸಭೆ ಹಾಗೂ ದೇವಲಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ದೇವಲಾಪುರ ಗ್ರಾಮ ಘಟಕದ ಸಂಚಾಲಕರಾಗಿ ಪರಶುರಾಮ, ಸಂಘಟನಾ ಸಂಚಾಲಕರಾಗಿ ಹೆಚ್.ತಿಪ್ಪೇಶ, ಶಿವರಾಜ, ಮಾರುತಿ, ಖಜಾಂಚಿಯಾಗಿ ಹೆಚ್.ಹನುಮಂತ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜಾ, ಪರಶುರಾಮ, ಇಮಂತರಾಜ, ಹೆಚ್.ವಿನೋದ, ಅಶೋಕ, ಅಭಿಷೇಕ, ಯಲ್ಲಪ್ಪ, ದುರುಗೇಶ, ಉಮೇಶ, ಹಿರಿಯ ಸಲಹೆಗಾರರಾಗಿ ಹೆಚ್.ನಾಗರಾಜ, ವಿರೇಶ, ರವಿ ಆಯ್ಕೆಗೊಂಡರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರೆ್ಣಯೊಂದಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹುಲುಗಪ್ಪ, ಲಕ್ಷ್ಮಣ ಸೇರಿದಂತೆ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 