ರಸ್ತೆ ಸುರಕ್ಷತೆ ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ಪಥಸಂಚಲನ
Parade on road safety and mandatory helmets
ರಸ್ತೆ ಸುರಕ್ಷತೆ ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ಪಥಸಂಚಲನ
ರಾಣಿಬೆನ್ನೂರ:3 ತಾಲೂಕಿನ ಚಳಗೇರಿ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ಹಾಗೂ ಹೆದ್ದಾರಿ ಪೊಲೀಸ್ ಗಸ್ತು ತಂಡದ ವತಿಯಿಂದ ರಸ್ತೆ ಸುರಕ್ಷತೆ ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರದಲ್ಲಿ ಪಥಸಂಚಲನ ನಡೆಸಿದರು.
ನಗರದ ಹಳೇ ಪಿ.ಬಿ.ರಸ್ತೆಯ ಎನ್.ವಿ.ಹೋಟೆಲ್‌ನಿಂದ ಆರಂಭವಾದ ಪಥಸಂಚಲನ ರಾಜೇಶ್ವರಿ ನಗರ, ಉಮಾಶಂಕರ ನಗರ, ಕೆ.ಇ.ಬಿಗಣೇಶ ದೇವಸ್ಥಾನ, ಬಸ್ ನಿಲ್ದಾಣ, ಮೆಡ್ಲೇರಿ ಕ್ರಾಸ್, ಅಂಚೆ ವೃತ್ತ, ಎಮ್.ಜಿ.ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್ ಸೇರಿದಂತೆ ವಿವಿಧ ಕಡೆ ನಡೆಯಿತು.
ಇದೇ ಸಮಯದಲ್ಲಿ ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಹೂವು ನೀಡಿ ಪೋತ್ಸಾಹಿಸಲಾಯಿತು. ಚಳಗೇರಿ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ವ್ಯವಸ್ಥಾಪಕ ಕೇಶವ ರೆಡ್ಡಿ, ಸಿಬ್ಬಂದಿ ವಿರೇಶ, ಹನುಮಂತ, ಪಿಎಸ್‌ಐ ಮತ್ತು ಪೊಲೀಸ್ ಹಾಗೂ ಟೋಲ್ ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 