ನಾಳೆಯಿಂದ ಪಾಂಡುರಂಗ ವಿಠ್ಠಲ ಪ್ರವಚನ

ನಾಳೆಯಿಂದ ಪಾಂಡುರಂಗ ವಿಠ್ಠಲ ಪ್ರವಚನ  Panduranga Vitthala discourses starting tomorrow

ತಾಳಿಕೋಟಿ 19: ಆಷಾಢ ಏಕಾದಶಿ ನಿಮಿತ್ಯವಾಗಿ ಪಾಂಡುರಂಗ ವಿಠ್ಠಲ ಮಂದಿರ ಟ್ರಸ್ಟ್‌ ವತಿಯಿಂದ ಪಾಂಡುರಂಗ ವಿಠ್ಠಲ ಪ್ರವಚನ ಜುಲೈ 21 ರಿಂದ ಆರಂಭವಾಗಲಿದೆ. ಪ್ರತಿದಿನ ಸಾಯಂಕಾಲ 6 ರಿಂದ 7ಗಂಟೆಯವರೆಗೆ ವಿಠ್ಠಲ ಮಂದಿರದಲ್ಲಿ 25ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಈ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜುಲೈ 21ರಂದು ಸಂಜೆ 6ಗಂಟೆಗೆ ನಡೆಯಲಿದ್ದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಉದ್ಘಾಟಿಸುವರು. ನಾಡಿನ ಖ್ಯಾತ ಪ್ರವಚನಕಾರ ಸಿದ್ದರಾಮ ಶಿವಯೋಗಿಗಳು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿರುವರು. ಪ್ರವಚನದ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಪಾಂಡುರಂಗ ವಿಠ್ಠಲ ಮಂದಿರ ಟ್ರಸ್ಟ್‌ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.