ಶಿಂದಿಕುರಬೇಟ ಗ್ರಾಮದಲ್ಲಿ ಪಾಂಡುರಂಗ ಸಪ್ತಾಹ ಪ್ರಾರಂಭ
Pandurang Saptah begins in Shindikurabeta village
ಲೋಕದರ್ಶನ ವರದಿ
ಗೋಕಾಕ 29: ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ 21ನೇ ವರ್ಷದ ಅಂಗವಾಗಿ ಶ್ರೀ ಶ್ರೇಷ್ಠ ಜ್ಞಾನೇಶ್ವರಿ ಪಾರಾಯಣ ಅಖಂಡ ಹರಿನಾಮ ಸೋಹಳಾ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ಸಪ್ತಾಹವು ದಿ.29ರಿಂದ 31ರವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ.ದಿ.29 ಮತ್ತು 30ರಂದು ಮುಂಜಾನೆ ಕಾಕಡಾರತಿ ಹಾಗೂ ಪೋಥೀ ವಾಚನ, ರಾಮಜಪ,ಹರಿಪಾಠ,ಕೀರ್ತನ ಜರುಗಲಿದೆ.ದಿ.31ರಂದು ಮುಂಜಾನೆ ಕಾಕಡಾರತಿ ನಂತರ ಶ್ರೀ ಜ್ಞಾನೇಶ್ವರಿ ಪಾರಾಯಣ ಸಮಾಪ್ತಿ,ದಿಂಡಿ ಸೋಹಳಾ, ಸುಮಂಗಲೆಯರ ಆರತಿಯೊಂದಿಗೆ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿಯರ ಪಲ್ಲಕ್ಕಿ ಉತ್ಸವ ನಂತರ ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ. ಘಟಪ್ರಭಾದ ಮಾರುತಿ ವಂಜೇರಿ ಇವರು ಪಾರಾಯಣ ನಡೆಸಿಕೊಡುವರು.ಶ್ರೀ ಬಾಳು ಮಹಾರಾಜ ಭೋಸಲೆ ಮತ್ತು ಮಾಣಿಕ್ ಬೀಸೆ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಪ್ತಾಹ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 