ಪಂಚಾಯತಿ ನೀರು ನಿರ್ವಹಣೆ: ಪಡಿತರ ಚೀಟಿ ರದ್ದು ಆಕ್ಷೇಪಿಸಿ ಮನವಿ

ಪಂಚಾಯತಿ ನೀರು ನಿರ್ವಹಣೆ: ಪಡಿತರ ಚೀಟಿ ರದ್ದು ಆಕ್ಷೇಪಿಸಿ ಮನವಿ Panchayat water management: Appeal objecting to cancellation of ration cards

ಶಿಗ್ಗಾವಿ 15: ಗ್ರಾಮ ಪಂಚಾಯತಿ ಕುಡಿಯುವ ನೀರು ನಿರ್ವಹಣೆಯಂತಹ ಕೆಲಸ ನಿರ್ವಹಿಸುವ ಅರ್ಥಿಕ ಸಭಲತೆಯಿಲ್ಲದ ಕೆಳವರ್ಗದ ಕಾರ್ಮಿಕ ವಲಯದವರನ್ನು ಗುರಿಯಾಗಿಸಿ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ರದ್ದುಗೊಳಿಸುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ  ಶ್ರೇಯಾಭಿವೃದ್ಧಿ ಸಂಘ (ಆರ್‌.ಡಿ.ಪಿಆರ್) ರಿ. ಶಿಗ್ಗಾವಿ ತಾಲೂಕು ಘಟಕದ ಸದಸ್ಯರು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಅವರಿಗೆ ಮನವಿ ಅರ​‍್ಿಸಿದರು. 

ಸಂಘದ ಶಿಗ್ಗಾವಿ ತಾಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಮಂಚಿನಕೊಪ್ಪ ಮಾತನಾಡಿ, ಈಗಾಗಲೇ ಸರ್ಕಾರದ ನಿರ್ದೇಶನದಂತೆ ತಾಪಂ ಅಧಿಕಾರಿಗಳು ಗ್ರಾಮ ಪಂಚಾಯತಿ ಸ್ವಚ್ಛತಾ ಕಾರ್ಮಿಕರು, ನೀರು ನಿರ್ವಹಣೆ ಮಾಡುವಂತಹ ಬಡಕುಟುಂಬಗಳ ಪಡಿತರ ಚೀಟಿಗಳನ್ನು ಪರೀಶೀಲನೆ ವಾಪಸ್ಸು ಪಡೆಯುವಂತಹ ಕ್ರಮ ನಡೆಯುತ್ತಿದೆ. ಕಾರ್ಮಿಕರ ಮಕ್ಕಳ ಶಿಕ್ಷಣ,ಕುಟುಂಬ ಸದಸ್ಯರ ಆರೋಗ್ಯ ಬದ್ರತೆ, ತಪಾಷಣೆಯಂತಹ ಯೋಜನೆಗಳಿಗೂ ಪಡಿತರ ಅವಶ್ಯಕತೆಯಿದ್ದು. ಪ್ರಸಕ್ತ ಚೀಟಿ ರದ್ದುಪಡಿಸುವುದರಿಂದ ಸಾಕಷ್ಟು ಅನಾನುಕೂಲವಾಗಲಿದೆ. ದುಡಿಯುವ ವರ್ಗ ಸಾಮಾಜಿಕವಾಗಿ, ಅರ್ಥಿಕವಾಗಿ ಹಿಂದುಳಿದಿದೆ. ಸರ್ಕಾರಕ್ಕೆ ಈ ಹಿಂದೇಯೇ ಸಾಕಷ್ಟು ಬಾರಿ ಸಂಘಟನೆ ಮೂಲಕ ಡಿ.ದರ್ಜೇ ನೌಕರರೆಂದು ಪರಿಗಣಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಪಂಚಾಯತ ರಾಜ್ಯ ಇಲಾಖೆ ಕ್ರಮ ವಹಿಸಿಲ್ಲ. ಕನಿಷ್ಠ ಸಂಬಳದಲ್ಲಿ ಕುಟುಂಬಗಳು ಜೀವನರೂಪಿಸಿಕೊಂಡಿದ್ದು ಸರ್ಕಾರದ ಕ್ರಮದಿಂದ ಸೌಲಭ್ಯತೆ ಕಾಣದೇ ಬೀದಿಗೆ ಬರಲಿವೆ. ಕಂದಾಯ ಇಲಾಖೆ ಪಡಿತರ ಪರೀಶೀಲನೆಯಂತಹ ಕ್ರಮ ಸ್ಥಗಿತಗೊಳಿಸಬೇಕು. ತಪ್ಪಿದಲ್ಲಿ ರಾಜ್ಯಾಧ್ಯಂತ ಸಂಘಟನೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.  

ಸಂಘದ ಕಾರ್ಯದರ್ಶಿಮಾದೇವಪ್ಪ ನೀರಲಗಿ, ಗದಿಗೆಪ್ಪ ಜಿಗಳಿ.ನಿಂಗಪ್ಪ ಕೊಳಲ,ಹನುಮಂತ್ತಪ್ಪ ವಡ್ಡರ. ಹನುಮಂತ್ತಪ್ಪ ಮಾಳಾಪೂರ.ಪುಟ್ಟಪ್ಪ ತಳವಾರ,ಶೇಖಪ್ಪ ಗುಳೇದ ಗುಡ್ಡಪ್ಪ ಗಿಡ್ಡಣ್ಣವರ ಉಪಸ್ಥಿತಿಯಿದ್ದರು.