ಹದಿನೈದು ವರ್ಷಗಳಿಂದ ದುರಸ್ಥಿ ಕಾಣದ ಪಂಚಾಯಿತಿ ಬಾಕ್ಸ್
Panchayat box that has not been repaired for fifteen years
ಲೋಕದರ್ಶನ ವರದಿ
ಯಮಕನಮರಡಿ 24: ಸಮೀಪದ ಹತ್ತರಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಇಂದಿರಾನಗರ ಗ್ರಾಮದಲ್ಲಿ ಅಳವಡಿಸಲಾದ ವಿದ್ಯುತ್ ಮೀಟರ್ ಬಾಕ್ಸ್ ಸುಮಾರು 15 ವರ್ಷಗಳ ಕಾಲ ರಿಪೇರಿ ಕಾಣದೆ ಭಯಾನಕ ಸ್ವರೂಪದಲ್ಲಿ ನಿಂತಿರುವ ಮೀಟರ್ ಬಾಕ್ಸಿನಲ್ಲಿ ಅಳವಡಿಸಲಾದ ವಿದ್ಯುತ್ ತಂತಿಗಳು ಹೊರಗಡೆ ಕಾಣುತ್ತದೆ. ಈ ಕುರಿತು ಸಾಕಷ್ಟು ಸಲ ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರು ಸಹಿತ ರಿಪೇರಿ ಆಗುತ್ತಿಲ್ಲ ಬೇರೆ ಬಾಕ್ಸ್ ಅಳವಡಿಸಿರುವದಿಲ್ಲ ಇದರಿಂದಾಗಿ ಸಾರ್ವಜನಿಕ ಹಾಗೂ ಶಾಲಾ ಮಕ್ಕಳಿಗೆ ಪ್ರಾಣ ಕಳೆದುಕೊಳ್ಳುವ ಉಚಿತ ತಾಣವಾಗಿದೆ.
ಶಾಲೆಗೆ ಹೋಗುವ ವಿದ್ಯಾರ್ಥಿಗಳು ಅದರಲ್ಲಿ ಕೈ ಹಾಕಿ ದೀಪಗಳನ್ನು ಹಗಲು ಸಹಿತ ಪ್ರಾರಂಭ ಮಾಡುತ್ತಾರೆ ಅಲ್ಲದೆ ಯಾರೇ ಮುಗ್ಧ ಜನರು ಕೈ ಹಾಕಿದರೆ ಪ್ರಾಣಕ್ಕೆ ಅಪಾಯ ಹೀಗಿದ್ದರೂ ಸಹಿತ ಅಲ್ಲಿಯ ಜನಪ್ರತಿನಿಧಿಗಳು ಕಣ್ಣೆತ್ತಿ ನೋಡುತ್ತಿಲ್ಲ. ಕೇವಲ ಹೆಸರಿಗೆ ಮಾತ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾರೆ. ಅಭಿವೃದ್ಧಿ ಬಗ್ಗೆ ಪತ್ರಕರ್ತರು ವಿಚಾರಿಸಿದರೆ ಅವರಿಗೂ ಸಹಿತ ಬೆದರಿಕೆ ಹಾಕುತ್ತಾರೆ. ಹೀಗಿರುವಾಗ ಇಲ್ಲಿಯ ಸಾರ್ವಜನಿಕರಿಗೆ ಭಾರಿ ತೊಂದರೆ ಉಂಟಾಗಿದೆ. ಸುಮಾರು 15 ವರ್ಷಗಳ ಕಾಲ ಮಳೆಗಾಲದಲ್ಲೂ ಸಹಿತ ಇದೇ ತರ ಮೀಟರ್ ಬಾಕ್ಸ್ ಓಪನ್ ಆಗಿ ಉಳಿದಿರುತ್ತದೆ. ಈ ಕುರಿತು ಕೆಇಬಿ ಅವರಿಗೆ ಸಹಿತ ತಿಳಿಸಲಾಗಿದೆ, ಆದರೆ ಯಾರು ಇತ್ತ ಕಣ್ಣೆತ್ತಿ ನೋಡುತ್ತಿಲ್ಲ ಕೇವಲ ಅಭಿವೃದ್ಧಿ ಹೆಸರಿನ ಮೇಲೆ ಲೂಟಿ ಮಾಡುವ ಕಾಯಕವನ್ನು ಹೆಸರುವಾಸಿಯಾಗಿದೆ, ಅಲ್ಲದೆ ಕೆಲವೊಂದು ಗಲ್ಲಿಗಳಲ್ಲಿ ಸಮರ್ಕ ರಸ್ತೆಗಳು ಚರಂಡಿಗಳು ಇಲ್ಲದೆ ಇರುವುದು ಒಂದು ನೋವಿನ ಸಂಗತಿಯಾಗಿದೆ.
ಸದರಿ ಗ್ರಾ.ಪಂ ಚುನಾವಣೆ ಸಮೀಪಕ್ಕೆ ಬರುತ್ತಿದ್ದರು ಸಹಿತ ಇದರ ಬಗ್ಗೆ ಯಾರು ಕಾಳಜಿ ವಹಿಸುತ್ತಿಲ್ಲ. ಅಪಾಯದ ಅಂಚಿನಲ್ಲಿ ಇರುವ ಮೀಟರ್ ಬಾಕ್ಸ್ ಭಾವಚಿತ್ರವನ್ನು ಪತ್ರಿಕೆ ಮುಖಾಂತರ ಮಾಹಿತಿಗಾಗಿ ತಿಳಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಏಕೆ ಗ್ರಾಮದ ಗಲ್ಲಿಗಳಲ್ಲಿಯ ತೊಂದರೆಗಳನ್ನು ವೀಕ್ಷಿಸುತ್ತಿಲ್ಲ ಇದರಿಂದಾಗಿ ಇಂದಿರಾನಗರ ಗ್ರಾಮಸ್ಥರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸದಸ್ಯರ ಅವಧಿಯು ಸಮಿಪಿಸುತ್ತಿದ್ದಂತೆ ಮುಂದಿನ ಚುನಾವಣೆಯಲ್ಲಿ ಸದಸ್ಯರಿಗೆ ತಕ್ಕ ಪಾಠ ಕಲಿಸಲು ಸಿದ್ಧರಾಗಿರುತ್ತಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 