ಅನುದಾನ ದುರ್ಬಳಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮಾನತು
Panchayat Development Officer suspended for misuse of funds
ಲೋಕದರ್ಶನ ವರದಿ
ಇಂಡಿ 28 : ತಾಲೂಕಿನ ಚಿಕ್ಕಬೇವನೂರ ಗ್ರಾಮ ಪಂಚಾಯತ್ನ ಈ ಹಿಂದಿನ ಅಭಿವೃಧ್ಧಿ ಅಧಿಕಾರಿಯಾಗಿದ್ದ ಸಧ್ಯ ಆಲಮೇಲ ತಾಲೂಕಿನ ರಾಮನಹಳ್ಳಿ ಗ್ರಾ.ಪಂ ಅಭಿವೃಧ್ಧಿ ಅಧಿಕಾರಿಯಾದ ಪ್ರಭಾವತಿ ಕುಂಬಾರ್ ಅವರನ್ನು ಖಾಸಗಿ ಜಮೀನಿನಲ್ಲಿ ಚಿತಾಗಾರ ನಿರ್ಮಿಸಿ ಸರಕಾರದ ಅನುದಾನ ದುರ್ಬಳಕೆ ಮಾಡಿದ್ದರಿಂದ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಏಪ್ರಿಲ್ 23 ರಂದು ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದ್ದಾರೆ.2019-20 ನೇ ಸಾಲಿನಲ್ಲಿ ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಕಾಮಗಾರಿ ಸಂಕೇತ ಸಂಖ್ಯೆ: 1507003054/ಎಲ್ಡಿ/93393042892205835ಇದ್ದು ಸದರಿ ಕಾಮಗಾರಿಗೆ 71712 ರೂಪಾಯಿ ದುರ್ಬಳಕೆ ಮಾಡಿದ್ದರು. ಸದರಿ ಅವಧಿಯಲ್ಲಿ ಪ್ರಭಾವತಿ ಕುಂಬಾರ ಅಭಿವೃಧ್ದಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ನಿಯಮ ಬಾಹಿರವಾಗಿ ಚಿತಾಗಾರ ಕಟ್ಟಿದ್ದು ಕಂಡು ಬಂದಿದ್ದರಿಂದ ಅವರನ್ನು ಈಗ ಅಮಾನತ್ತು ಮಾಡಲಾಗಿದೆ.
ರಾಜಶೇಖರ ಕಟ್ಟೀಮನಿ ಎಂಬ ರೈತರ ಜಮೀನಿನಲ್ಲಿ ಈ ಚಿತಾಗಾರ ನಿರ್ಮಾಣ ಮಾಡಲಾಗಿದೆ. ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಾಜಶೇಖರ ಅವರು ಇದು ನನ್ನ ಜಮೀನಿದೆ. ಇಲ್ಲಿ ಕಟ್ಟಬೇಡಿ ಎಂದು ಮನವಿ ಮಾಡಿದರೂ ಇದು ಸ್ಮಶಾನ ಭೂಮಿ ಇದೆ. ಇಲ್ಲಿ ಕಟ್ಟಲು ತೊಂದರೆ ಮಾಡಿದರೆ ಪೊಲೀಸರನ್ನು ಕರೆಸಬೇಕಾಗುತ್ತದೆ ಎಂದು ಹೆದರಿಸಿ, ಕೊನೆಗೆ ಪೊಲೀಸರಿಗೂ ಮಾಹಿತಿ ನೀಡಿ ಕರೆಯಿಸಿ ದರಿ್ದಂದ ಚಿತಾಗಾರ ನಿರ್ಮಿಸಿದ್ದರು ಎಂದು ಕಟ್ಟೀಮನಿ ಅವರು ತಾಲೂಕಾ ಪಂಚಾಯತ್ ಇಓ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು.*ಚಿಕ್ಕಬೇವನೂರ ಗ್ರಾ.ಪಂ ವ್ಯಾಪ್ತಿಯಲ್ಲಿ ಖಾಸಗಿಯವರ ಜಮೀನಿನಲ್ಲಿ ಚಿತಾಗಾರ ನಿರ್ಮಾಣ ಮಾಡಲಾಗಿತ್ತು.
ಸದರಿ ಪ್ರಕರಣಕ್ಕೆ ಸಂಭಂಧಿಸಿದಂತೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆ ಸಂದರ್ಭದಲ್ಲಿ ಖಾಸಗಿಯವರ ಜಮೀನಿನಲ್ಲಿ ಚಿತಾಗಾರ ನಿರ್ಮಿಸಿ ಸರಕಾರದ ಹಣ ದುರ್ಬಳಕೆ ಮಾಡಿದ್ದೀರಿ ಎಂದು ಕಾನೂನಿನ ಪ್ರಕಾರ ಆಗಿನ ಪಿಡಿಓ ಪ್ರಭಾವತಿ ಕುಂಬಾರ್ ಅವರಿಗೆ ಈಗ ಅಮಾನತ್ತಿಲ್ಲಿಟ್ಟು ಆದೇಶ ಮಾಡಿದ್ದಾರೆಡಾ.ಭೀಮಾಶಂಕರ ಕನ್ನೂರ. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಇಂಡಿ. ಚಿತಾಗಾರ ನಿರ್ಮಿಸುವ ಸಂದರ್ಭದಲ್ಲಿ ಇದು ಖಾಸಗಿ ಜಮೀನು ಇಲ್ಲಿ ಚಿತಾಗಾರ ನಿರ್ಮಾಣ ಮಾಡಬೇಡಿ ಎಂದು ಪಿಡಿಓ ಅವರಿಗೆ ಹೇಳಿದ್ದೆ ಆದರೆ ಅವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಚಿತಾಗಾರ ನಿರ್ಮಿಸಿದ್ದರು. ನಾನು ಸಂಭಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದ ಪ್ರಯುಕ್ತ ಈಗ ಪಿಡಿಓ ಅವರನ್ನು ಅಮಾನತ್ತು ಮಾಡಿದ್ದಾರೆ* ರಾಜಶೇಖರ ಕಟ್ಟೀಮನಿ. ಚಿಕ್ಕಬೇವನೂರ ಗ್ರಾಮಸ್ಥ.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 