ಕಾಯಕ ನಗರದಲ್ಲಿ ಅಲೆಮಾರಿಗಳಿಗೆ ನಿವೇಶನ: ಪಲ್ಲವಿ ಭರವಸೆ
Pallavi promises housing for vagrants in Kayak Nagar
ಹೂವಿನಹಡಗಲಿ 19: ಪಟ್ಟಣದ ಕಾಯಕ ನಗರದ ಹಿಂಭಾಗದ ಬಯಲಿನಲ್ಲಿ ಜೋಪಡಿ ಕಟ್ಟಿಕೊಂಡು ನೆಲೆಸಿರುವ 44 ಅಲೆಮಾರಿ ಕುಟುಂಬಗಳಿಗೆ ಅದೇ ಸ್ಥಳದಲ್ಲಿ ನಿವೇಶನ ಕಲ್ಪಿಸಲು ಆದ್ಯತೆ ನೀಡುತ್ತೇವೆ’ ಎಂದು ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಭರವಸೆ ನೀಡಿದರು.
ಪಟ್ಟಣದ ಕಾಯಕ ನಗರದಲ್ಲಿ ಸೋಮವಾರ ಅಲೆಮಾರಿ ಸಮುದಾಯ ವಾಸಿಸುವ ಸ್ಥಳ ಪರೀಶೀಲನೆ ಬಳಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ’ನಿವೇಶನ. ಇಲ್ಲದೇ ಜತೆಗೆ ಬದುಕಿನ ಭದ್ರತೆ ಇಲ್ಲದೇ ತೀರಾ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಅವಕಾಶ ವಂಚಿತ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವುದು ಮೊದಲ ಆದ್ಯತೆಯಾಗಿದೆ. ಅಲೆಮಾರಿ ಪರವಾಗಿ ಸರಕಾರ ಗಮನ ಸೆಳೆಯುವೆ ಎಂದರು. ಈಗಾಗಲೇ ಕರ ಕುಶಲ ಕರ್ಮಿಗಳಿಗೆ ಸಣ್ಣ ಕೈಗಾರಿಕೆ ಇಲಾಖೆ 17.38 ಎಕರೆ ಭೂಮಿಯನ್ನು ವಸತಿಗೆ ಮತ್ತು ಕಾರ್ಯ ಗಾರ ನಿರ್ಮಿಸಿಕೊಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆಯುವಆ.20ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ಸಿದ್ದಪಡಿಸಿ ಕೊಂಡು ಬನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಅದ್ಯಕ್ಷೆ ಗಂಟೆ ಜಮಾಲ್ ಬಿ. ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ. ಸಮಾಜ. ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶ ಆನಂದ ಕಾಳೆ. ತಹಶೀಲ್ದಾರ್ ಜಿ, ಸಂತೋಷಕುಮಾರ್, ತಾ.ಪಂ ಇಒ.ಜಿ.ಪರಮೇಶ್ವರ್ಪ, ಸಮಾಜ ಕಲ್ಯಾಣ ಅಧಿಕಾರಿ ಆನಂದ ಡೊಳ್ಳಿನ. , ಬಿಇಒ ಮಹೇಶ ಪೂಚಾರ, ಸಿಡಿಪಿಒ ರಾಮನಗೌಡ. ಕೇದಾರನಾಥ, ಸಮುದಾಯದ ಮುಖಂಡರಾದ ವೈ. ಶಿವಕುಮಾರ್, ಹನುಮಂತಪ್ಪ ಇದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 