ಇಸ್ಲಾಮಾಬಾದ್ 26: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸೈಯದ್ ಸಹ ಸ್ಪಧರ್ಿಸಿದ್ದು ತೀವ್ರ ಚಚರ್ೆಗೆ ಗ್ರಾಸವಾಗಿತ್ತು.
ಇನ್ನು ಲಾಹೋರ್, ಇಸ್ಲಾಮಾಬಾದ್, ಸಹಿವಾಲ್, ಫೈಸಲಾಬಾದ್ ಸೇರಿದಂತೆ ಪಾಕಿಸ್ತಾನದಾದ್ಯಂತ ಹಫೀಜ್ ಸೈಯದ್ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ಇದೀಗ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಹಫೀಜ್ ನೇತೃತ್ವದ ಅಲ್ಲಾ ಒ ಅಕ್ಬರ್ ತೆಹ್ರಿಕ್ ಪಕ್ಷ ಮಕಾಡೆ ಮಲಗಿದೆ
ಉಗ್ರ ಸಂಘಟನೆಗಳಿಗೆ ಸೇರಿದ ನೂರಾರು ಅಭ್ಯಥರ್ಿಗಳು ಚುನಾವಣೆಯಲ್ಲಿ ಸ್ಪಧರ್ಿಸಿದ್ದು ಅವರೆಲ್ಲಾ ಸೋತು ಸುಣ್ಣವಾಗಿದ್ದಾರೆ. ಅಂದರೆ ಉಗ್ರಗಾಮಿಗಳು, ನಿಷೇಧಿತ ಉಗ್ರ ಸಂಘಟನೆಯ ಸ್ಪಧರ್ಿಗಳನ್ನು ಪಾಕ್ ಮತದಾರರು ಅಕ್ಷರಶಃ ತಿರಸ್ಕರಿಸಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಕಪ್ಪುಪಟ್ಟಿಯಿಂದ ಹೆಸರನ್ನು ತೆಗೆದುಹಾಕಿದ ನಂತರ ಚುನಾವಣೆಯಲ್ಲಿ ಸ್ಪಧರ್ಿಸಿದ್ದ ಮೌಲಾನಾ ಮುಹಮ್ಮದ್ ಅಹ್ಮದ್ ಲುದೀಯಾನ್ವಿ ಮಾತ್ರ ಹೇಳಿಕೊಳ್ಳುವಂತಾ ಮತಗಳನ್ನು ಪಡೆದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಬರೋಬ್ಬರಿ 45 ಸಾವಿರ ಮತಗಳನ್ನು ಪಡೆದಿದ್ದಾರೆ. ಆದರೆ ಇದು ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಮುಖ್ಯ ವಿಷಯ.
ಚುನಾವಣೆಗೂ ಮುನ್ನ ಇಸ್ಲಾಮಿಕ್ ಸಂಘಟನೆಗಳಿಗೆ ಸೇರಿದ ಸಾಕಷ್ಟು ಅಭ್ಯಥರ್ಿಗಳು ಚುನಾವಣೆಯಲ್ಲಿ ಸ್ಪಧರ್ಿಸುತ್ತಿರುವ ವಿಷಯ ಪಾಕಿಸ್ತಾನದಲ್ಲಿ ಸಾಕಷ್ಟು ಚಚರ್ೆಗೆ ಗ್ರಾಸವಾಗಿತ್ತು.