ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ

ಜಮ್ಮು, ಡಿಸೆಂಬರ್ 19 ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್  ಪಡೆಗಳು   ಅಪ್ರಚೋದಿತ ಗುಂಡಿನ  ದಾಳಿ ನಡೆಸಿ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇಂದು ಬೆಳಿಗ್ಗೆ  ಪಾಕ್ ಸೇನೆ ಅಪ್ರಚೋದಿತದಾಳಿ ಮಾಡುವ ಮೂಲಕ ಕದನ ವಿರಾಮ ಉಲ್ಲಂಘನೆಗೆ ನಾಂದಿ ಹಾಡಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ."ಆದರೆ ಇದಕ್ಕೆ ಭಾರತೀಯ ಸೇನೆಯು ಸೂಕ್ತವಾಗಿ ಪ್ರತ್ಯುತ್ತರ ನೀಡಿದೆ  ಎಂದು ಅವರು ಹೇಳಿದರು.ಆದರೆ  ಇದುವರೆಗೆ ಯಾವುದೇ ಸಾವು ನೋವು ಪ್ರಾಣ ಹಾನಿ ಬಗ್ಗೆ  ವರದಿಯಾಗಿಲ್ಲ.ಇದೆ  17 ರಂದು ಸುಂದರ್‌ಬನಿ  ವಲಯದ  ಗಡಿ ನಿಯಂತ್ರ ರೇಖೆ  ಉದ್ದಕ್ಕೂ ನಡೆಸಿದ ಗುಂಡಿನ  ದಾಳಿಯಲ್ಲಿ ಒಬ್ಬ ಸೇನಾ ಜವಾನ್ ಹುತಾತ್ಮರಾಗಿದ್ದರು.